ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PU Result | ಬೆಟಗೇರಿ: ಅವಳಿ–ಜವಳಿ ಮಕ್ಕಳ ಸಾಧನೆ

Published 12 ಏಪ್ರಿಲ್ 2024, 4:24 IST
Last Updated 12 ಏಪ್ರಿಲ್ 2024, 4:24 IST
ಅಕ್ಷರ ಗಾತ್ರ

ಅಳವಂಡಿ: ಸಮೀಪದ ಬೆಟಗೇರಿ ಗ್ರಾಮದ ಅವಳಿ-ಜವಳಿ ಸಹೋದರಿಯರು ಪಿಯು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿದ್ದಾರೆ.

ಬೆಟಗೇರಿಯ ರಮೇಶ ಬನ್ನಿಕೊಪ್ಪ ಅವರ ಪುತ್ರಿಯರಾದ ಕಾವ್ಯ ಹಾಗೂ ಕವಿತಾ ಇಬ್ಬರು ಅವಳಿ ಜವಳಿ ಸಹೋದರಿಯರು. ಹಿಂದೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಮಾನ ಅಂಕ ಪಡೆದು ಅಚ್ಚರಿ ಮೂಡಿಸಿದ್ದರು. ನಂತರ ಇಬ್ಬರು ಕೊಟ್ಟೂರಿನ ಇಂದು ಜ್ಯೂನಿಯರ್ ಕಾಲೇಜಿನಲ್ಲಿ ಕಲಾ ವಿಭಾಗಕ್ಕೆ ಪ್ರವೇಶ ಪಡೆದಿದ್ದರು.

ಪಿಯು ಪರೀಕ್ಷೆಯ ಫಲಿತಾಂಶದಲ್ಲಿ ಕಾವ್ಯ 600ಕ್ಕೆ 574 ಅಂಕ ಪಡೆದರೆ, ಕವಿತಾ 600ಕ್ಕೆ 568 ಅಂಕ ಪಡೆಯುವ ಗಮನ ಸೆಳೆದಿದ್ದಾರೆ. ಸಹೋದರಿಯರ ಸಾಧನೆಗೆ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಹರ್ಷವನ್ನು ವ್ಯಕ್ತಪಡಿಸಿದ್ದಾರೆ.

ಕವಿತಾ ಬನ್ನಿಕೊಪ್ಪ
ಕವಿತಾ ಬನ್ನಿಕೊಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT