ಹುಣಸಗಿ: ‘ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಹಾಳು ಮಾಡದೇ ಸಮಯ ಹಾಗೂ ದಿನಚರಿಗೆ ತಕ್ಕಂತೆ ಅಭ್ಯಾಸ ಮಾಡುವ ಮೂಲಕ ಗುರಿ ಮುಟ್ಟಲು ಹೆಜ್ಜೆ ಹಾಕಬೇಕು’ ಎಂದು ಪದವಿ ಕಾಲೇಜು ಉಪನ್ಯಾಸಕ ಗುರಣ್ಣ ರಾಯರಡ್ಡಿ ಹೇಳಿದರು.

ಹುಣಸಗಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಬಿಳ್ಕೋಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿ ಮಾತನಾಡಿದರು.

‘ಇಂದು ಸಮಯಕ್ಕೆ ಯಾರು ಮಹತ್ವ ನೀಡುತ್ತಾರೋ ಅವರಿಗೆ ಮುಂದಿನ ಜೀವನದಲ್ಲಿ ಸಮಯವು ಒಳ್ಳೇಯ ಅವಕಾಶಗಳನ್ನು ತಂದು ಕೊಡುವದು ನಿಶ್ಚಿತ. ಈ ಬಾರಿ ಈ ಭಾಗದ ವಿದ್ಯಾರ್ಥಿಗಳು ರಾಜ್ಯದಲ್ಲಿಯೇ ಹೆಸರು ಗುರುತಿಸುವಂತೆ ಫಲಿತಾಂಶ ನೀಡಬೇಕು’ ಎಂದರು.

ಪಟ್ಟಣ ಪಂಚಾಯಿತಿ ಸದಸ್ಯ ಸಿದ್ದು ಮುದಗಲ್ಲ ಹಾಗೂ ಶಾಲೆಯ ಹಿರಿಯ ಶಿಕ್ಷಕ ಚನ್ನಪ್ಪ ಬಾಗೇವಾಡಿ ಮಾತನಾಡಿ, ನಮ್ಮ ಕೈಯಲ್ಲಿರುವ ಮೋಬೈಲ್ ಒಳ್ಳೆಯ ವಿಷಯ ತಿಳಿದುಕೊಳ್ಳಲು ಉಪಯೋಗಿಸಿಕೊಂಡಲ್ಲಿ ಪಠ್ಯದ ಜೊತೆಗೆ ಪ್ರಚಲಿತ ವಿದ್ಯಾಮಾನಗಳು ಸೇರಿದಂತೆ ಒಳ್ಳೆಯ ವಿಷಯಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ’ ಎಂದರು.

ಎಸ್ಡಿಎಂಸಿ ಅಧ್ಯಕ್ಷ ಬಿ.ಎಂ. ಬಳಿ ಕಾರ್ಯಕ್ರಮ ಉದ್ಘಾಟಿಸಿದರು. ಪಟ್ಟಣ ಪಂಚಾಯಿತಿ ಸದಸ್ಯ ಶರಣು ದಂಡಿನ್, ಬಾಲಕೀಯರ ಪ್ರೌಢ ಶಾಲೆಯ ಮುಖ್ಯಶಿಕ್ಷಕ ವಿಠ್ಠಲ ಚವ್ವಾಣ, ಮುಖಂಡರಾದ ಗುಂಡು ಗೆದ್ದಲಮರಿ, ರಮೇಶ ವಾಲಿ, ಬಸಮ್ಮ ಮದ್ದಾನಿಮಠ, ಶಾರದಾ ಹಾದಿಮನಿ, ಹಣಮಂತ್ರಾಯ ಹಳ್ಳಿ ಸೇರಿದಂತೆ ಇತರರು ಇದ್ದರು.

ಪ್ರಾಸ್ತಾಕವಾಗಿ ಗುರಪ್ಪಗೌಡ ಮಾತನಾಡಿದರು.

ನಿಂಗಪ್ಪ ಚವ್ವಾಣ ಸ್ವಾಗತಿಸಿದರು. ಯಲಗೂರೇಶ ಕುಲಕರ್ಣಿ ನಿರೂಪಿಸಿದರು. ಭೀಮಣ್ಣ ವಾಲ್ಮೀಕಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.