ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತಿಕುಣಿ: ಜಿ.ಪಂ. ಕ್ಷೇತ್ರ ರದ್ದು; ರಸ್ತೆ ತಡೆ

ಕ್ಷೇತ್ರ ಮುಂದುವರಿಸಲು ಗ್ರಾಮಸ್ಥರ ಒತ್ತಾಯ
Last Updated 4 ಮಾರ್ಚ್ 2021, 3:24 IST
ಅಕ್ಷರ ಗಾತ್ರ

ಹತ್ತಿಕುಣಿ (ಯರಗೋಳ): ಹತ್ತಿಕುಣಿಯನ್ನು ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನಾಗಿ ಮುಂದುವರಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಸೇಡಂ-ಯಾದಗಿರಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ ರಸ್ತೆಗೆ ಬಂದ ಗ್ರಾಮಸ್ಥರು ಕ್ಷೇತ್ರ ಪುನರ್‌ವಿಂಗಡಣೆ ಮಾಡಿರುವುದಕ್ಕೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಹತ್ತಿಕುಣಿ 35 ವರ್ಷಗಳ ಕಾಲ ಜಿಲ್ಲಾ ಪಂಚಾಯಿತಿ ಕ್ಷೇತ್ರವಾಗಿತ್ತು. ಪುನರ್‌ವಿಂಗಡಣೆ ಮಾಡಿ, ಕ್ಷೇತ್ರ ರದ್ದುಪಡಿಸಿ ಯರಗೋಳ ಕ್ಷೇತ್ರಕ್ಕೆ ಸೇರಿಸುವ ಮೂಲಕ ಅನ್ಯಾಯ ಮಾಡಲಾಗಿದೆ’ ಎಂದು ಪ್ರತಿಭಟನಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಹತ್ತಿಕುಣಿ ಹೋಬಳಿ ಕೇಂದ್ರವಾಗಿದೆ. ಸುಮಾರು 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಈ ಎಲ್ಲ ಅಂಶಗಳನ್ನು ಮನಗಂಡು ನಿರ್ಧಾರ ಬದಲಿಸಬೇಕು ಎಂದು ಒತ್ತಾಯಿಸಿದರು.

ಶರಣಪ್ಪ ಸಾಹು ಗಡೇದ, ಮಹಿಪಾಲರೆಡ್ಡಿ ಪೊಲೀಸ್ ಪಾಟೀಲ, ಜಿ.ಪಂ. ಸದಸ್ಯ ಶಿವಲಿಂಗಪ್ಪ ಪುಟಗಿ, ಬಸವರಾಜಪ್ಪ ನಾಯಕ, ಚಂದ್ರಕಾಂತ ಕವಲ್ದಾರ, ಸಿದ್ದು ನಾಯಕ ಹತ್ತಿಕುಣಿ, ನಾಗಪ್ಪ ಗೋಪಾಳಪುರ, ಹಣಮಂತ ಪೂಜಾರಿ, ಅಮೃತರೆಡ್ಡಿ ಪೊಲೀಸ್ ಪಾಟೀಲ, ರವಿಗೌಡ ಮಾಲಿ ಪಾಟೀಲ, ಮಲ್ಲಿಕಾರ್ಜುನ ಗೌಡಗೇರಾ, ಸಾಬರೆಡ್ಡಿ ತಮ್ಮಣೋರ, ಸುಭಾಷ ಶಂಕ್ರೆಪ್ಪನೊರ್, ಭೀಮರೆಡ್ಡಿ ರಾಂಪುರಳ್ಳಿ, ಸಾಬಣ್ಣ ಸೋಮಣ್ಣೋರ್, ದೇವಿಂದ್ರಪ್ಪ ಖಂಡಪ್ಪನೋರ್, ತಾಯಪ್ಪ ದುಗನೂರು, ಶರಣು ಗಡೇದ, ಹಣಮಂತ ಶಂಕ್ರೆಪ್ಪನೋರ್, ಬಸವರಾಜ ಕವಲ್ದಾರ, ಸಾಬಣ್ಣ ಮಡಿವಾಳ, ಖೀರಲಿಂಗ ಗಣಪೂರ, ದೇವು ಹೋರುಂಚಾ, ರಾಮರೆಡ್ಡಿ, ಸಾಬಣ್ಣ ಬಾವನೋರ್, ಭೀಮರಾಯ ಸಾತನೂರ, ವೈಜನಾಥ ರೆಡ್ಡಿ, ಖದೀರ್ ಪಾಷಾ, ಮಲ್ಲಿಕಾರ್ಜುನ, ಶರಣು ಮಡಿವಾಳ, ಮಲ್ಲಿಕಾರ್ಜುನ ಬೂದುರು, ಸುರೇಶ ಶಂಕ್ರೆಪ್ಪನೊರ್, ರವಿ ಕವಲ್ದಾರ, ಸಾಬು ಖಂಡಪ್ಪನೋರ್, ಸಾಬಣ್ಣ ಚೆಲ್ಹೇರಿ, ಅಂಬು ನಾಯಕ, ಬಸ್ಸು ನಾಯಕ ಹಾಗೂ ಮಲ್ಲಿಕಾರ್ಜುನ ಕನ್ನಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT