ಯಾದಗಿರಿ: ಕೃಷ್ಣಾ ನದಿ ಜಲಾನಯನದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಒಳಹರಿವು ಹೆಚ್ಚಿದ್ದರಿಂದ ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸಲಾಗುತ್ತಿದೆ.
ಬುಧವಾರ ರಾತ್ರಿ ಪೂಜೆ ಮಾಡಿ ಮೂರು ಗೇಟ್ ಗಳ ಮೂಲಕ ನೀರು ಹರಿಸಲಾಗುತ್ತಿದೆ. ಗುರುವಾರ ಒಳಹರಿವು ಮತ್ತಷ್ಟು ಹೆಚ್ಚಲಿದ್ದು, ಹೊರ ಹರಿವು ಹೆಚ್ಚಿಸಲಾಗುವುದು ಎಂದು ಡ್ಯಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೆಚ್ಚಿದ ಒಳಹರಿವು
ಮಹಾರಾಷ್ಟ್ರ ಸೇರಿದಂತೆ ಕೃಷ್ಣಾ ನದಿ ಉಗಮಸ್ಥಾನ ಮಹಾಬಲೇಶ್ವರ, ಅದರ ಉಪ ನದಿಗಳ ಜಲಾನಯನ ಪ್ರದೇಶಗಳಲ್ಲಿ ನಿರಂತರ ಮಳೆಯಾಗುತ್ತಿದೆ. ಇದರಿಂದ ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯಕ್ಕೆ ನೀರಿನ ಹರಿವು ಹೆಚ್ಚಿದ್ದರಿಂದ ಅಲ್ಲಿಂದ ಹೊರ ಹರಿವು ಹೆಚ್ಚಾಗಿದೆ.
ಅಣೆಕಟ್ಟಿನಿಂದ ಎಚ್ಚರಿಕೆ ಸಂದೇಶ
ಕೃಷ್ಣಾನದಿ ಜಲಾನಯನ ಪ್ರದೇಶದ ಮಳೆ ಮತ್ತು ನದಿಯ ಹರಿವಿನಲ್ಲಿನ ಹೆಚ್ಚಳವನ್ನು ಪರಿಗಣಿಸಿ ನಾರಾಯಣಪುರ ಅಣೆಕಟ್ಟಿಗೆ ಒಳಹರಿವು ಹೆಚ್ಚಾಗುವ ಸಾಧ್ಯತೆ ಇದೆ. ಪ್ರಸ್ತುತ ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಹೊರಹರಿವನ್ನು 21,150 ಕ್ಯುಸೆಕ್ ನಿಂದ 70 ಸಾವಿರ ಕ್ಯುಸೆಕ್ ಗೆ ಗುರುವಾರ ಬೆಳಿಗ್ಗೆ 10 ಗಂಟೆಗೆ ಕ್ರಮೇಣವಾಗಿ ಹೆಚ್ಚಿಸಲಾಗುವುದು. ತದನಂತರ ಹೊರಹರಿವನ್ನು ಒಳಹರಿವಿನ ಆಧಾರದ ಮೇಲೆ ಇನ್ನೂ ಹೆಚ್ಚಿಸಲಾಗುವುದು ಎಂದು ಡ್ಯಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆತಂಕ ದೂರ
ಜೂನ್ ತಿಂಗಳಲ್ಲಿ ಸಮರ್ಪಕ ಮಳೆಯಾಗದ ಕಾರಣ ಕಾಲುವೆ ಜಾಲದ ರೈತರಲ್ಲಿ ಡ್ಯಾಂ ಭರ್ತಿ ಬಗ್ಗೆ ಆತಂಕ ಮೂಡಿತ್ತು. ಆದರೆ, ಜುಲೈ ತಿಂಗಳಲ್ಲಿ ಸುರಿದ ನಿರಂತರ ಮಳೆಗೆ ಒಳಹರಿವು ಹೆಚ್ಚಿದ್ದರಿಂದ ಡ್ಯಾಂ ಭರ್ತಿಗೆ ಕೆಲವೇ ಅಡಿಗಳು ಬಾಕಿ ಇವೆ.
ಜಲಾಶಯದ ನೀರಿನ ಮಟ್ಟ