ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರದ ಮಾರುಕಟ್ಟೆ ನೋಟ; ತರಕಾರಿ ದರ ಸ್ಥಿರ– ಗ್ರಾಹಕರಿಗೆ ಸಂತಸ

ಶ್ರಾವಣ ಮಾಸದಲ್ಲಿ ಏರಿಕೆಯಾಗದ ತರಕಾರಿ ದರ, ಮಾರುಕಟ್ಟೆಯಲ್ಲಿ ಕೊರತೆಯಾಗದ ಆವಕ
Last Updated 28 ಆಗಸ್ಟ್ 2021, 15:23 IST
ಅಕ್ಷರ ಗಾತ್ರ

ಯಾದಗಿರಿ: ಶ್ರಾವಣ ಮಾಸದಲ್ಲೂ ಮಾರುಕಟ್ಟೆಯಲ್ಲಿ ನಿರಂತರವಾದ ಆವಕದಿಂದ ತರಕಾರಿಗಳ ದರ ಸ್ಥಿರವಾಗಿದೆ.

ಶ್ರಾವಣದಲ್ಲಿ ಸಾಲು ಸಾಲು ಹಬ್ಬಗಳಿದ್ದರೂ ತರಕಾರಿ ದರ ಏರಿಕೆಯಾಗಿಲ್ಲ. ಇದರಿಂದ ಗ್ರಾಹಕರಿಗೆ ಸಂತಸವಾಗಿದೆ. ಪ್ರತಿ ಹಬ್ಬಕ್ಕೂ ತರಕಾರಿಗಳ ದರ ಏರಿಕೆಯಾಗುತ್ತಿತ್ತು. ಈಗ ತಾತ್ಕಾಲಿಕವಾಗಿ ನಿಂತಿದೆ.

ಟೊಮೆಟೊ, ಆಲೂಗಡ್ಡೆ ಕಡಿಮೆ ದರ:
ತರಕಾರಿ ದರಗಳಲ್ಲಿ ಟೊಮೆಟೊ, ಆಲೂಗಡ್ಡೆ ಮಾತ್ರ ಕಡಿಮೆ ದರ ಇದೆ. ಉಳಿದ ತರಕಾರಿಗಳು ₹40ಕ್ಕಿಂತ ಹೆಚ್ಚು ದರವಿದೆ. ಕರಿಬೇವು–₹60 ಕೇಜಿ, ಈರುಳ್ಳಿ ಸೊಪ್ಪು ₹60–70 ಒಂದು ಕೆಜಿ, ಕಾಯಿ ಟೊಮೆಟೊ ₹40–50 ಒಂದು ಕೆಜಿ ಇದೆ. ಕುಂಬಳಕಾಯಿ ಒಂದಕ್ಕೆ ₹20 ದರವಿದೆ. ಶುಂಠಿ ಕೆಜಿ ₹60, ಬೆಳ್ಳೊಳ್ಳಿ ₹120, ನುಗ್ಗೆಕಾಯಿ ₹80, ಒಂದು ನಿಂಬೆಹಣ್ಣು ₹2 ಬೆಲೆ ಇದೆ.

ಹಣ್ಣುಗಳ ದರ:
ನಗರದ ವಿವಿಧ ಕಡೆ ಸೇಬುಗಳು ಕಡಿಮೆ ಬೆಲೆಗೆ ಮಾರಾಟ ಆಗುತ್ತಿವೆ. ನಿಂಬೆಹಣ್ಣು ಗಾತ್ರದಿಂದ ಹಿಡಿದು ಮುಷ್ಠಿಗಾತ್ರದವರೆಗೆ ಹಲವು ರೀತಿಯ ಸೇಬುಗಳು ಮಾರಾಟಕ್ಕೆ ಇಡಲಾಗಿದೆ. ಹೊಸ, ಹಳೆ ಬಸ್‌ ನಿಲ್ದಾಣ, ಪ್ರಮುಖ ವೃತ್ತಗಳ ಬಳಿ ತಳ್ಳುಗಾಡಿಗಳಲ್ಲಿ ಸೇಬು ಬಿಕರಿಯಾಗುತ್ತಿದೆ.

ಸೇಬು ಒಂದು ₹10, ₹15, ₹20 ದರ ಇದೆ. ಬಾಳೆಹಣ್ಣುಡಜನ್‌ಗೆ ಸಣ್ಣ ಗಾತ್ರದ್ದು ₹30, ಮಧ್ಯಮ ಗಾತ್ರ ₹40, ದೊಡ್ಡ ಗಾತ್ರ ₹50 ದರ ಇದೆ. ಪೇರಲ ₹40 ಕೆಜಿ ಇದೆ. ಮೊಸಂಬಿ ₹10–15, ದಾಳಿಂಬೆ ₹10-15 ದರ ಇದ್ದು, ದ್ರಾಕ್ಷಿ ಮಾತ್ರ ಹೆಚ್ಚಿನ ದರವಿದೆ. ಕೆಜಿಗೆ ₹200 ದ್ರಾಕ್ಷಿ ದರ ಇದೆ.

ಸೊಪ್ಪುಗಳ ದರ:
ಮೆಂತೆ ಸೊಪ್ಪು ದೊಡ್ಡ ಗಾತ್ರದು ₹25–20, ಪಾಲಕ್‌ ಒಂದು ಕಟ್ಟು ₹5, ಪುಂಡಿಪಲ್ಯೆ ಒಂದು ಕಟ್ಟು ₹5, ರಾಜಗಿರಿ ಒಂದು ಕಟ್ಟು ₹5, ಸಬ್ಬಸಿಗಿ ಒಂದು ಕಟ್ಟು ₹10, ಕೋತಂಬರಿ ಸೊಪ್ಪು ಒಂದು ಕಟ್ಟು ₹20–25 ದೊಡ್ಡ ಗಾತ್ರದು, ಪುದೀನಾ ಒಂದು ಕಟ್ಟು ₹20 ದರ ಇದೆ.

***

ತರಕಾರಿ ದರ
(ಪ್ರತಿ ಕೆ.ಜಿಗೆ ₹ಗಳಲ್ಲಿ)
ಟೊಮೆಟೊ; 20-25
ಬದನೆಕಾಯಿ;55–60
ಬೆಂಡೆಕಾಯಿ;35–40
ದೊಣ್ಣೆಮೆಣಸಿನಕಾಯಿ;40–50
ಆಲೂಗಡ್ಡೆ; 25-30
ಈರುಳ್ಳಿ; 30–35
ಎಲೆಕೋಸು;40–30
ಹೂಕೋಸು; 60–50
ಚವಳೆಕಾಯಿ;60–70
ಬೀನ್ಸ್; 70–60
ಗಜ್ಜರಿ;70-80
ಸೌತೆಕಾಯಿ; 60–50
ಮೂಲಂಗಿ;40-35
ಮೆಣಸಿನಕಾಯಿ;40-45
ಸೋರೆಕಾಯಿ;25–30
ಬಿಟ್‌ರೂಟ್;60-55
ಹೀರೆಕಾಯಿ;55-60
ಹಾಗಲಕಾಯಿ;55-60
ತೊಂಡೆಕಾಯಿ;35-40
ಅವರೆಕಾಯಿ;50–45

***

ಮಾರುಕಟ್ಟೆಗೆ ಬರುವ ತರಕಾರಿ ಆವಕ ಕೊರತೆ ಇಲ್ಲ. ಆಗಾಗ ಮಳೆ ಸುರಿಯುತ್ತಿರುವುದರಿಂದ ರೈತರಿಗೆ ಸಮಸ್ಯೆ ಆಗಿಲ್ಲ
ಬಸು ಚಿಂತನಹಳ್ಳಿ, ತರಕಾರಿ ವ್ಯಾಪಾರಿ

***

ಶ್ರಾವಣ ಮಾಸದಲ್ಲೂ ತರಕಾರಿ ದರ ಏರಿಕೆಯಾಗಿಲ್ಲ. ಇದು ಗ್ರಾಹಕಕರಿಗೆ ಖುಷಿ ತರುವ ವಿಚಾರವಾಗಿದೆ
ರಮೇಶ ಸಿದ್ದಯ್ಯ, ಗ್ರಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT