ಸೈದಾಪುರ: ‘ಮಹಿಳೆಯರಲ್ಲಿ ದೇಶ ಮುನ್ನಡೆಸುವ ಶಕ್ತಿಯಿದೆ. ಹೆಣ್ಣು ಈ ದೇಶದ ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಸಾಮರ್ಥ್ಯ ಹೊಂದಿದ್ದಾಳೆ’ ಎಂದು ಚೈತ್ರಾ ಕುಂದಾಪುರ ಅಭಿಪ್ರಾಯಪಟ್ಟರು.
ಪಟ್ಟಣದ ವಿದ್ಯಾವರ್ಧಕ ಪ್ರೌಢಶಾಲೆ ಆವರಣದಲ್ಲಿ ಸ್ವಾಮಿ ವಿವೇಕಾನಂದ ತರುಣ ಸಂಘ ಹಾಗೂ ಮಹಿಳಾ ಘಟಕದಿಂದ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಹೆಣ್ಣೆಂದರೆ ಕೇವಲ ಮಕ್ಕಳನ್ನು ನೀಡುವ ಯಂತ್ರವಲ್ಲ. ಸಂಸಾರದ ಜವಾಬ್ದಾರಿ ಹೊತ್ತುಕೊಂಡು ಜಗತ್ತನ್ನೇ ಕಾಯುವವಳು. ಆಪತ್ತಿನ ಕಾಲದಲ್ಲಿ ಕುಟುಂಬವನ್ನು ಸಂರಕ್ಷಿಸುವುದು ಮಹಿಳೆಯರಿಗೆ ಮಾತ್ರ ಗೊತ್ತು. ಜಗತ್ತು ಎಷ್ಟೇ ಬದಲಾದರೂ ಕೂಡ ಭಾರತ ದೇಶದ ಸಂಸ್ಕೃತಿ ಹಾಗೂ ಸಂಪ್ರದಾಯಕ್ಕೆ ಎಲ್ಲರೂ ತಲೆ ಭಾಗುವಂತೆ ಮಾಡಿರುವುದು ಭಾರತದ ಸ್ರ್ತೀಯರು ಎಂಬುದು ನಾವು ಎಂದೂ ಮರೆಯಬಾರದು’ ಎಂದು ಹೇಳಿದರು.
ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ ಮಾತನಾಡಿದರು.
ಸ್ವಾಮಿ ವಿವೇಕಾನಂದ ತರುಣ ಸಂಘದ ಅಧ್ಯಕ್ಷ ಭೀಮಣ್ಣ ಮಡಿವಾಳಕರ್, ಮಹಿಳಾ ಘಟಕದ ಅಧ್ಯಕ್ಷೆ ಕಮಲ.ಎಮ್ ಕುಲಕರ್ಣಿ, ಮುಖ್ಯಶಿಕ್ಷಕ ಲಿಂಗಾರೆಡ್ಡಿ.ಆರ್ ನಾಯಕ, ಪ್ರಾಶುಂಪಾಲ ಜಿ.ಎಮ್ ಗುರುಪ್ರಸಾದ, ವಕೀಲ ಭೀಮರೆಡ್ಡಿ ಶೆಟ್ಟಿಹಳ್ಳಿ, ಬಸ್ಸುಗೌಡ ಐರೆಡ್ಡಿ ಸೈದಾಪುರ, ಮುಕುಂದಕುಮಾರ ಅಲಿಝಾರ್, ಯೋಗೇಶ ಕುಮಾರ ದೋಕಾ, ಕೆ.ಬಿ. ರಾಘವೇಂದ್ರ, ಸಂತೋಷ ಬಾದಾಮಿ, ರಾಕೇಶ ಕುಮಾರ ದೋಕಾ, ಚಂದ್ರುಗೌಡ ಹೆಗ್ಗಣಗೇರಾ, ಮಲ್ಲರೆಡ್ಡಿ ಖಾನಾಪುರ, ಸಿದ್ದು ಪೂಜಾರಿ, ತಾಯಪ್ಪ ಬೊಮ್ಮಣ್ಣೋರ್, ಶಿವುಕುಮಾರ ಮುನಗಾಲ, ರಾಜೇಶ ದೇವರಶೆಟ್ಟಿ, ಬಸ್ಸು ಕಲಾಲ್ ಕೂಡ್ಲೂರ್ ಸೇರಿದಂತೆ ಮಹಿಳೆಯರು, ಯುವಕರು
ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.