ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಂಕಟಪ್ಪನಾಯಕ ಅವರ ಗೆಲುವಿಗೆ ಶ್ರಮಿಸಿ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಂಡಿನ್

Last Updated 17 ಮಾರ್ಚ್ 2023, 7:49 IST
ಅಕ್ಷರ ಗಾತ್ರ

ಹುಣಸಗಿ: ‘ಕಾಂಗ್ರೆಸ್ ಪಕ್ಷವನ್ನು ಬೇರು ಮಟ್ಟದಲ್ಲಿ ಸಂಘಟಿಸುವ ಮೂಲಕ ಸುರಪುರ ಮತಕ್ಷೇತ್ರದಲ್ಲಿ ರಾಜಾ ವೆಂಕಟಪ್ಪನಾಯಕ ಅವರ ಗೆಲುವಿಗೆ ಎಲ್ಲರೂ ಒಂದಾಗಿ ಶ್ರಮಿಸೋಣ’ ಎಂದು ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ ಚಂದ್ರಶೇಖರ ದಂಡಿನ್ ತಿಳಿಸಿದರು.

ತಾಲ್ಲೂಕಿನ ವಜ್ಜಲ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ, ಇಂದಿನಿಂದಲೇ ಪಕ್ಷ ಸಂಘಟನೆಗೆ ಇನ್ನಷ್ಟು ಒತ್ತು ನೀಡೋಣ. ಕಾಂಗ್ರೆಸ್ ಸರ್ಕಾರ ಬಂದರೆ ಮನೆಯ ಯಜಮಾನಿ ಖಾತೆಗೆ ಹಣ ಜಮಾ ಆಗುವುದು ಖಂಡಿತ ಎಂದು ಭರವಸೆ ನೀಡಿದರು.

ಯುವ ಮುಖಂಡ ಶರಣಗೌಡ ಪಾಟೀಲ ಮಾತನಾಡಿ, ಕ್ಷೇತ್ರದಲ್ಲಿ ಯುವಕರು ಈ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿ ಕಾರ್ಯ ನಿರ್ವಹಿಸುತ್ತಿದ್ದರಿಂದಾಗಿ ಗ್ರಾಮೀಣ ಭಾಗದಲ್ಲಿ ಪಕ್ಷಕ್ಕೆ ಬಲ ಬಂದಿದೆ ಎಂದರು.

ಬಳಿಕ ಗ್ರಾಮಸ್ಥರಿಂದ ಸನ್ಮಾನ ಮಾಡಲಾಯಿತು.

ಚನ್ನಯ್ಯಸ್ವಾಮಿ ಹಿರೇಮಠ, ಈಶ್ವರಪ್ಪ ಶ್ರೀಗಿರಿ, ಸಂಗನಗೌಡ ಪೊಲೀಸ ಪಾಟೀಲ, ಗ್ರಾ.ಪಂ ಸದಸ್ಯ ಶಾಂತಗೌಡ ಪಾಟೀಲ, ಕೂಡ್ಲಿಗೆಪ್ಪ ಬೈಚಬಾಳ, ನಿಂಗು ಲಿಂದಳ್ಳಿ, ಸಾಹೇಬಗೌಡ ನಗನೂರು, ಮಲ್ಲನಗೌಡ ಬೋರಮಗುಂಡ, ಶ್ರೀಶೈಲ ದೇವತಕಲ್ಲ, ಕರೆಪ್ಪ ದೊಡ್ಡಮನಿ, ಸಿದ್ದು ಅಬ್ಯಾಳಿ, ಬಸಣ್ಣ ಕಲ್ಲತ್ತಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು
ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT