ಭಾನುವಾರ, ಸೆಪ್ಟೆಂಬರ್ 27, 2020
27 °C
‘ಕೋಟ್ಯಂತರ ಭಾರತೀಯರ ಕನಸು ನನಸು’

ಯಾದಗಿರಿ: ಹನುಮಾನ್ ದೇಗುಲಗಳಲ್ಲಿ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಭೂಮಿ ಪೂಜೆ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಹನುಮಾನ್ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಲಾಯಿತು.

ಛತ್ರಪತಿ ಶಿವಾಜಿ ಸೇನಾ, ಹಿಂದೂ ಸೇವಾ ಸಮಿತಿ, ಗೆಳೆಯರ ಬಳಗ, ಆದರ್ಶ ಪದವಿ ಮಹಾವಿದ್ಯಾಲಯ, ಕರಸೇವಕರು ಸೇರಿದಂತೆ ಭಕ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಛತ್ರಪತಿ ಶಿವಾಜಿ ಸೇನಾ: ಅಖಿಲ ಕರ್ನಾಟಕ ಹಿಂದೂ ಸಾಮ್ರಾಟ್ ಛತ್ರಪತಿ ಶಿವಾಜಿ ಸೇನಾ ವತಿಯಿಂದ ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯ ಬಳಿ ಇರುವ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.

ಸೇನಾ ಅಧ್ಯಕ್ಷ ಪರಶುರಾಮ ಶೇಗುರಕರ್ ಮಾತನಾಡಿದರು. ವೆಂಕಟೇಶ ಭೀಮನಳ್ಳಿ, ನಿತಿನ್ ಸುಕ್ಕಲೂರು, ಶ್ರೀನಿವಾಸ ಶೆಟ್ಟಿ, ಅಜಿತಕುಮಾರ, ಭರತ ಪಂಚುಮ, ಯಲ್ಲಾಲಿಂಗ ಚಾಮನಳ್ಳಿ, ಕರುಣೇಶ ಚಾಮನಳ್ಳಿ, ಅಂಬ್ರೇಷ್ ರಾಂಪುರ, ರೆಡ್ಡಿ ಇದ್ದರು.

ಹಿಂದೂ ಸೇವಾ ಸಮಿತಿ: ನಗರದ ಸ್ಟೇಷನ್ ಬಡಾವಣೆಯಲ್ಲಿ ಹಿಂದೂ ಸೇವಾ ಸಮಿತಿಯವರು ಹನುಮಾನ್ ದೇವಾಲಯದಲ್ಲಿ ವಿಶೇಷ ಪೂಜೆ ನಡೆಸಿದರು. ಹಿಂದೂ ಸೇವಾ ಸಮಿತಿಯ ಅಧ್ಯಕ್ಷ ಹಣಮಂತ ಮಡ್ಡಿ, ನಗರಸಭೆ ಮಾಜಿ ಸದಸ್ಯ ಸುರೇಶ ಮಡ್ಡಿ, ನಾರಾಯಣರಾವ ಚವ್ಹಾಣ್‌, ಪ್ರೊ.ಅಶೋಕ ವಾಟ್ಕರ, ಕೆಕೆಎಂಪಿ ಅಧ್ಯಕ್ಷ ವಿಜಯ ಕುಮಾರ ಚವ್ಹಾಣ್, ಖಂಡೋಬಾ ಸಗರ, ಸುರೇಶ ನವಗೀರೆ, ಹಿಂದೂ ಜಾಗ್ರಣ ವೇದಿಕೆಯ ಮುಖಂಡ ಅಂಬಯ್ಯ ಶಾಬಾದಿ, ಶ್ರೀಶೈಲ್ ಗುತ್ತೇದಾರ, ನ್ಯಾಯವಾದಿ ದತ್ತು ಕಾಮಲೇಕರ, ಸುಭಾಷ, ಚವ್ಹಾಣ್‌ ಇದ್ದರು.

ಗೆಳೆಯರ ಬಳಗ: ಬಸವೇಶ್ವರ ನಗರದ ಗೆಳೆಯರ ಬಳಗದ ವತಿಯಿಂದ ಶ್ರೀರಾಮನ ಭಾವಚಿತ್ರಕ್ಕೆ ವಿಶೇಷ ಪೂಜೆ ನೆರವೇರಿಸಲಾಯಿತು. ವೆಂಕಟರೆಡ್ಡಿ ಅಬ್ಬೆತುಮಕೂರ, ರಮೇಶ ದೊಡ್ಡಮನಿ, ಚಂದ್ರಕಾಂತ ಲೇವಡಿ, ಕೃಷ್ಣಾ ಬಬಲಾದ, ಸಿದ್ದು ಆಡಿಕಿ, ಯಲ್ಲಾರೆಡ್ಡಿ ಪಾಟೀಲ ಇದ್ದರು.

ಆದರ್ಶ ಪದವಿ ಮಹಾವಿದ್ಯಾಲಯ: ನಗರದ ಆದರ್ಶ ಪದವಿ ಕಾಲೇಜು ಆವರಣದಲ್ಲಿ ಸಂಸ್ಥೆ ಅಧ್ಯಕ್ಷ ನರಸಪ್ಪ ಬೆಟ್ಟದ ನೇತೃತ್ವದಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಯಲ್ಹೇರಿ ಅಭಿವೃದ್ಧಿ ಅಧಿಕಾರಿ ಕಲ್ಯಾಣ ಕುಮಾರ, ಶರಣಗೌಡ ಶಿವರಾಯ ಯಲ್ಹೇರಿ, ಜಯಪ್ರಕಾಶ ಗೌಡ, ದೇವೀಂದ್ರಪ್ಪ ಕೆ., ಪ್ರಾಚಾರ್ಯ ಬನ್ನಪ್ಪ ತಡಿಬಿಡಿ, ಉಪನ್ಯಾಸಕ ವಿಶ್ವನಾಥ, ಸಾಬರೆಡ್ಡಿ ಮುದ್ನಾಳ, ಮಲ್ಲಿಕಾರ್ಜುನ, ಕಾಶಿನಾಥ ಮಣ್ಣೂರಕರ್, ರವಿಕಾಂತ ಕಸಬಿ, ನಾಗೇಂದ್ರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು