ಬುಧವಾರ, ಆಗಸ್ಟ್ 4, 2021
21 °C

ಯಾದಗಿರಿ: ನಗರದ 5 ಕಡೆ ಡಿಕೆಶಿ ಪದಗ್ರಹಣ ನೇರ ಪ್ರಸಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ ಅವರು ಅಧಿಕಾರ ಪದಗ್ರಹಣ ವಹಿಸಿಕೊಂಡ ಸಮಾರಂಭವನ್ನು ನಗರದ ಐದು ಕಡೆ ನೇರ ಪ್ರಸಾರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. 

ನಗರದ ವಾರ್ಡ್ ಸಂಖ್ಯೆ 23 ರಲ್ಲಿನ ವೀರಶೈವ ಕಲ್ಯಾಣ ಮಂಟಪದ ಹತ್ತಿರದ ಬಯಲು ವೇದಿಕೆ ಬಳಿ ಜಿಲ್ಲಾ ಕಾಂಗ್ರೆಸ್ ಯುವ ಘಟಕದ ಉಪಾಧ್ಯಕ್ಷ ಅವಿನಾಶ ಜಗನ್ನಾಥ ನೇತೃತ್ವದಲ್ಲಿ ಬೃಹತ್ತಾಕಾರದ ಎಲ್‌ಇಡಿ ಪರದೆಯ ಮೇಲೆ ಅಧಿಕಾರದ ಪದಗ್ರಹಣ ಸಮಾರಂಭ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ನಾಗರಿಕರು ಸೇರಿದಂತೆ 300ಕ್ಕೂ ಹೆಚ್ಚು ಜನ ಪಾಲ್ಗೊಂಡು ಕಾರ್ಯಕ್ರಮ ವೀಕ್ಷಿಸಿದರು.

ಈ ವೇಳೆ ನಗರಸಭೆ ಸದಸ್ಯರಾದ ನಿರ್ಮಲಾ ಜಗನ್ನಾಥ, ವೆಂಕಟರೆಡ್ಡಿ ವನಿಕೇರಿ, ಕಾಂಗ್ರೆಸ್ ಮುಖಂಡರಾದ ಶರಣಗೌಡ ಮಾಲಿಪಾಟೀಲ, ವಿಶ್ವನಾಥ ಠಾಣಗುಂದಿ, ಭೀಮಣಗೌಡ ಬೀರಾದಾರ, ಶಿವುಗೌಡ ಪಗಲಾಪುರ, ನಾಗರಾಜ ಜೀವಣಗಿ, ಇರ್ಫಾನ್ ಬಾದಲ್, ಮಲ್ಲೇಶಿ ನಾಯಕ, ವಿನೋದ ಕುಮಾರ, ಬಾಬು, ಗುರು, ಮಲ್ಲು ಇದ್ದರು.

ವಾರ್ಡ್ ಸಂಖ್ಯೆ 30: ನಗರದ ವಾರ್ಡ್ ಸಂಖ್ಯೆ 30ರಲ್ಲಿ ನಗರಸಭೆ ಸದಸ್ಯ ಗಣೇಶ ದುಪ್ಪಲ್ಲಿ ಅವರ ನಿವಾಸದ ಬಳಿಯ ಬಯಲು ವೇದಿಕೆಯಲ್ಲಿ ಆನ್ ಲೈನ್ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.

ನಗರಸಭೆ ಸದಸ್ಯ ಗಣೇಶ ದುಪ್ಪಲ್ಲಿ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿಶಾಲವಾದ ಎಲ್ಇಡಿ ಪರದೆಯ ಮೇಲೆ ಡಿ.ಕೆ. ಶಿವಕುಮಾರ ಪದಗ್ರಹಣ ಕಾರ್ಯಕ್ರಮವನ್ನು ವಾರ್ಡ್‌ನ ಮುಖಂಡರು, ಕಾರ್ಯಕರ್ತರು  ವೀಕ್ಷಿಸಿದರು.

ಅಲ್ಲದೆ ಪಕ್ಷದ ಕಚೇರಿ, ಅಂಬೇಡ್ಕರ್‌ ವೃತ್ತ‌, ಕೋಟಗಾರವಾಡದಲ್ಲಿಯೂ ನೇರ ಪ್ರಸಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಬ್ದುಲ್ ರಜಾಕ್, ಕಾರ್ಯದರ್ಶಿ ಪ್ರಭಾಕರ ಜಿ. ಯರಗೋಳ, ಸಾಮಾಜಿಕ ಜಾಲತಾಣ ಘಟಕದ ಜಿಲ್ಲಾಧ್ಯಕ್ಷ ಪವನಕುಮಾರ, ತಾಲ್ಲೂಕು ಘಟಕದ ಅಧ್ಯಕ್ಷ ಪ್ರವೀಣ ನಾಯ್ಕಲ್, ರಂಜಿತ್, ಶಶಿ ಪೂಜಾರಿ, ಫೈಜಲ್, ಇರ್ಫಾನ್ ಸೇರಿದಂತೆ ಸುಮಾರು 100 ಜನ ವೀಕ್ಷಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು