ಸೋಮವಾರ, ಜೂನ್ 14, 2021
27 °C
ಮಾಸ್ಕ್‌ ಧರಿಸದವರ ವಿರುದ್ಧ 199 ಪ್ರಕರಣ: ₹19,900 ದಂಡ ವಸೂಲಿ

ಯಾದಗಿರಿ ಲಾಕ್‌ಡೌನ್‌: 2ನೇ ದಿನವೂ ಸಂಪೂರ್ಣ ಸ್ತಬ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್‌ಡೌನ್‌ ಎರಡನೇ ದಿನವೂ ಸಂಪೂರ್ಣ ಸ್ತಬ್ಧವಾಗಿದೆ. ಬೆಳಿಗ್ಗೆಯಿಂದಲೇ ಪೊಲೀಸರು ರಸ್ತೆಗಿಳಿದ ಅನಾವಶ್ಯಕ ಸಂಚಾರ ಮಾಡುತ್ತಿದ್ದ ವಾಹನಗಳನ್ನು ತಡೆದು ದಾಖಲೆ ಮತ್ತು ತೆರಳುತ್ತಿರುವ ಕಾರಣ ಕೇಳಿ ಬಿಡುತ್ತಿದ್ದರು.

ನಗರದ ಪ್ರಮುಖ ವೃತ್ತಗಳಲ್ಲಿ ಪೊಲೀಸರು ನಿಂತು ಲಾಕ್‌ಡೌನ್‌ ಕರ್ತವ್ಯ ಮಾಡುತ್ತಿದ್ದರು. ಡಿವೈಎಸ್‌ಪಿ ಸೇರಿದಂತೆ ಸಂಚಾರಿ ಪೊಲೀಸರು ರಸ್ತೆಗಳಿದ ವಾಹನ ಸಂಚಾರ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದರು.

ಪೊಲೀಸರನ್ನು ನೋಡಿ ವಾಪಸ್‌: ನಗರದ ಶುಭಾಷ ವೃತ್ತ, ಶಾಸ್ತ್ರಿ ವೃತ್ತದಲ್ಲಿ ಪೊಲೀಸರು ಇರುವುದನ್ನು ನೋಡಿದ ಬೈಕ್‌ ಸವಾರರು ದೂರದಿಂದಲೇ ನೋಡಿ ಮರಳಿ ಬಂದ ದಾರಿಯಲ್ಲಿ ಹಿಂತಿರುಗುತ್ತಿದ್ದರು. ಅಲ್ಲಲ್ಲಿ ಪೊಲೀಸರು ವಾಹನ ಸವಾರರನ್ನು ನಿಲ್ಲಿಸಿ ಕಾರಣ ಕೇಳುತ್ತಿದ್ದರು.

ಎಳನೀರು ವ್ಯಾಪಾರ ನಿರಂತಕ: ಆಸ್ಪತ್ರೆ ಅಕ್ಕಪಕ್ಕ ಸೇರಿದಂತೆ ವಿವಿಧ ಕಡೆ ಎಳನೀರು ವ್ಯಾಪಾರ ನಿರಂತಕವಾಗಿ ನಡೆಯುತ್ತಿತ್ತು. ಆದರೂ ಗ್ರಾಹಕರಿಲ್ಲದೆ ಭಣಗುಡುತ್ತಿದ್ದವು.

ಬಿಕೋ ಎಂದ ರಸ್ತೆಗಳು: ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್‌ ಕಾವಲಿನಿಂದ ವಾಹನ ಸವಾರರು ರಸ್ತೆಗಿಳಿಯದ ಪರಿಣಾಮ ಬಿಕೋ ಎನ್ನುತ್ತಿತ್ತು. ಅಲ್ಲೊಂದು ಇಲ್ಲೊಂದು ವಾಹನ ಸಂಚಾರ ಮಾಡುತ್ತಿತ್ತು. ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನದ 2 ಗಂಟೆ ವರೆಗೆ ಪೊಲೀಸರು ರಸ್ತೆಯಲ್ಲಿ ನಿಂತುಕೊಂಡಿದ್ದರು. ಆ ನಂತರ ನೆರಳಿನಲ್ಲಿ ಆಶ್ರಯ ಪಡೆದು ಸಂಚಾರ ನಿಯಂತ್ರಣ ಮಾಡುತ್ತಿದ್ದರು. ಬೆಳಿಗ್ಗೆ ರಸ್ತೆಗಳು ಖಾಲಿ ಇದ್ದಿದ್ದರಿಂದ ಎಮ್ಮೆಗಳು ರಸ್ತೆಯನ್ನು ಪೂರ್ತಿ ಆವರಿಸಿಕೊಂಡು ಮೇವು ತಿನ್ನಲು ತೆರಳುತ್ತಿದ್ದವು.

ಏಕಮುಖ ಸಂಚಾರಕ್ಕಾಗಿ ಬ್ಯಾರಿಕೇಡ್‌: ವಾಹನ ಸವಾರರನ್ನು ನಿಯಂತ್ರಿಸಲು ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್‌ ಹಾಕಿ ಏಕಮುಖ ಸಂಚಾರ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇದರಿಂದ ವಾಹನ ಸವಾರರು ‍ಪೊಲೀಸರು ತಪ್ಪಿಸಿಕೊಳ್ಳಲು ಆಗದಂತೆ ಆಗಿದೆ.

ದಾಖಲೆ ಇಲ್ಲದವರ ಪರದಾಟ: ವೃತ್ತಗಳಲ್ಲಿ ಪೊಲೀಸರು ಅಡ್ಡಹಾಕಿ ವಾಹನ ಸವಾರರನ್ನು ಹಿಡಿದಾಗ ಸೂಕ್ತ ದಾಖಲೆ ಇಲ್ಲದಿದ್ದರಿಂದ ಪರದಾಟ ಸಾಮಾನ್ಯವಾಗಿತ್ತು.

ಅಲ್ಲದೆ ತಮಗೆ ಪರಿಚಯ ಇದ್ದವರಿಗೆ ಫೋನ್ ಮಾಡಿ ಮಾತನಾಡುತ್ತಿರುವುದು ಕಂಡು ಬಂತು.

ಕಾರು ಚಾಲಕ ವಿರುದ್ಧ ಪ್ರಕರಣ: ಪದವಿ ಕಾಲೇಜು ಬಳಿ ಪೊಲೀಸರು ಕಾರು ಚಾಲಕನನ್ನು ತಡೆದು ನಿಲ್ಲಿಸಲು ಪ್ರಯತ್ನಿಸಿದರೂ ನಿಲ್ಲಿಸದೇ ಬ್ಯಾರಿಕೇಡ್‌ ತಳ್ಳಿ ಪರಾರಿಯಾಗಿದ್ದು, ಬೆನ್ನಟ್ಟಿದ ಪೊಲೀಸರು ಕಾರು ನಿಲ್ಲಿಸಿ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಆತನ ವಿರುದ್ಧ ಕೋವಿಡ್‌ ನಿಯಮ ಉಲ್ಲಂಘನೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

118 ವಾಹನ ಜಪ್ತಿ: ಸಂಪೂರ್ಣ ಲಾಕ್‌ಡೌನ್‌ ವೇಳೆ ಅನಾವಶ್ಯಕವಾಗಿ ತಿರುಗಾಡುತ್ತಿದ್ದ ವಾಹನ ಸವಾರರ ವಿರುದ್ಧ ಪೊಲೀಸರು ಕ್ರಮ ಜರುಗಿಸಿದ್ದಾರೆ. 113 ದ್ವಿಚಕ್ರ, 2 ಮೂರು ಚಕ್ರ, 3 ನಾಲ್ಕು ಚಕ್ರದ ವಾಹನಗಳನ್ನು ಜಪ್ತಿ ಪಡಿಸಲಾಗಿದೆ. ಮಾಸ್ಕ್ ಹಾಕದೆ ಇರುವವರ ವಿರುದ್ಧ 199 ಪ್ರಕರಣಗಳನ್ನು ಹಾಗೂ ₹19,900 ದಂಡ ವಿಧಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.