ಶಹಾಪುರ: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಅಪಾರ ಪ್ರಮಾದ ನೀರು ಹರಿದು ಬರುತ್ತಲಿದೆ. ಗುರುವಾರ ಜಲಾಶಯದಿಂದ 2.50 ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟಿದ್ದರಿಂದ ತಾಲ್ಲೂಕಿನ ಕೊಳ್ಳೂರ(ಎಂ) ಸೇತುವೆ ಮುಳಗಡೆಯಾಗುವ ಸಂಭವವಿದ್ದು, ಶಹಾಪುರ-ದೇವದುರ್ಗ ರಾಜ್ಯ ಹೆದ್ದಾರಿ ಸಂಚಾರ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.

ಸಾಮಾನ್ಯವಾಗಿ 2 ಲಕ್ಷದ ಕ್ಯೂಸೆಕ್ ನೀರು ಹರಿಬಿಟ್ಟರೆ ಸೇತುವೆ ಮೇಲೆ ಬರುತ್ತವೆ. ಈಗ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಶುಕ್ರವಾರದಿಂದ ರಸ್ತೆ ಸಂಚಾರಕ್ಕೆ ಸಂಚಕಾರ ಬರಲಿದೆ ಎನ್ನುತ್ತಾರೆ ಕೊಳ್ಳೂರ(ಎಂ) ಗ್ರಾಮದ ಹಣಮಂತ ಭಂಗಿ ಹಾಗೂ ಶಿವರಡ್ಡಿ ಪಾಟೀಲ.

ಕಾಲುವೆಗೆ ನೀರಿಲ್ಲ: ಬರದ ದವಡೆಯಲ್ಲಿ ಸಿಲುಕಿರುವ ತಾಲ್ಲೂಕಿನ ರೈತರಿಗೆ ಕಾಲುವೆ ನೀರು ಹರಿಯುತ್ತಿಲ್ಲ. ಮುಖ್ಯ ನಾಲೆಗೆ ನೀರು ಹರಿಸುತ್ತಿದ್ದಾರೆ. ಕಾಲುವೆ ದುರಸ್ತಿ ಹಾಗೂ ಸ್ವಚ್ಛಗೊಳಿಸುವ ಕಾರ್ಯದಲ್ಲಿ ನಿಗಮದ ಎಂಜಿನಿಯರ್ ಬ್ಯೂಸಿಯಾಗಿದ್ದಾರೆ. ಇದರಿಂದ ಪ್ರವಾಹದ ನೀರು ಪೋಲಾಗುತ್ತಲಿದೆ. ನೀರಿನ ಲಭ್ಯತೆ ಇದ್ದರೂ ಸದ್ಭಳಕೆ ಮಾಡಿಕೊಳ್ಳುವಲ್ಲಿ ನಾವು ಸೋತು ಹೋಗಿದ್ದೇವೆ ಎಂಬ ಬೇಸರವನ್ನು ರೈತ ಮುಖಂಡ ಚೆನ್ನಪ್ಪ ಆನೇಗುಂದಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.