ವಡಗೇರಾ: ಯಾದಗಿರಿಯಿಂದ ವಡಗೇರಾ ತಾಲ್ಲೂಕಿನ ಸಂಗಮ ಗ್ರಾಮಕ್ಕೆ ತೆರಳುತ್ತಿದ್ದ ಬಸ್ ಹತ್ತಿದ್ದ ವೃದ್ಧ ದಂಪತಿಯನ್ನು ಕೆಕೆಆರ್ಟಿಸಿಯ ಬಸ್ ನಿರ್ವಾಹಕ ದಾರಿಯ ಮಧ್ಯದಲ್ಲಿ ಇಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ (ಕಕರಸಾ) ವಿಭಾಗಿಯ ನಿಯಂತ್ರಣಾಧಿಕಾರಿ ನಿರ್ವಾಹಕರನನ್ನು ಕರ್ತವ್ಯದಿಂದ ಅಮಾನತ್ತುಗೊಳಿಸಿ, ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿದ್ದಾರೆ.

ಈ ಕುರಿತು ‘ಅರ್ಧ ದಾರಿಯಲ್ಲಿಯೆ ಇಳಿಸಿದ ಬಸ್ ನಿರ್ವಾಹಕ !’ ಎಂಬ ಶೀರ್ಷಿಕೆ ( ತಲೆ ಬರಹ) ಅಡಿಯಲ್ಲಿ ಇದೇ ಫೆ 14 ರಂದು ಪ್ರಜಾವಾಣಿಯಲ್ಲಿ ಪ್ರಕಟವಾದ ಸುದ್ದಿಗೆ ಅಧಿಕಾರಿಗಳು ಸ್ಪಂದಿಸಿದ್ದಾರೆ.

ಘಟನೆಯ ವಿವರ: ಫೆ 9 ರಂದು ಕಲಬುರಗಿ ಮೂಲದ ವೃದ್ಧ ದಂಪತಿ ಸಂಗಮೇಶ ಮತ್ತು ಅನ್ನಪೂರ್ಣ ಅವರು ಯಾದಗಿರಿ– ಸಂಗಮ ನಾಮಫಲಕದ ಬಸ್ ( ಕೆ 33 ಎಫ್ 0368) ಹತ್ತಿದ್ದರು. ಆದರೆ ಬಸ್ ನಿರ್ವಾಹಕ ಸಾಕಷ್ಟು ಪ್ರಯಾಣಿಕರು ಇಲ್ಲ ಎಂಬ ನೇಪವೋಡ್ಡಿ ಗಂಡ್ಲೂರು ಗ್ರಾಮದಲ್ಲಿ ಇಳಿಸಿದ್ದರು. ಹೀಗಾಗಿ ವೃದ್ಧ ದಂಪತಿ 2.5 ಕಿ.ಮೀ ನಡೆದು ಸಂಗಮಕ್ಕೆ ತೆರಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.