ಶಹಾಪುರ: ‘ಸ್ವಚ್ಛತೆ ಎನ್ನುವುದು ನಮ್ಮ ಜೀವನದ ಅವಿಭಾಜ್ಯ ಅಂಗ ಎನ್ನುವಂತೆ ನಾವು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸದಾ ಸ್ವಚ್ಚತೆಯಿಟ್ಟುಕೊಳ್ಳಬೇಕು’ ಎಂದು ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷೆ ಹಾಗೂ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶೆ ಹೇಮಾ ಪಸ್ತಾಪುರ ತಿಳಿಸಿದರು.

ಇಲ್ಲಿನ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಶುಕ್ರವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ರೀಯ ಸ್ವಚ್ಛತಾ ದಿನ ಅಂಗವಾಗಿ ನಡೆದ ಶ್ರಮದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸಾರ್ವಜನಿಕ ಸ್ಥಳಗಳಲ್ಲಿ ನಿಗದಿಪಡಿಸಿದ ಸ್ಥಳದಲ್ಲಿಯೇ ಕಸ ಹಾಕಬೇಕು. ಬೇಕಾಬಿಟ್ಟಿಯಾಗಿ ಎಸೆಯಬಾರದು. ಪರಿಸರಕ್ಕೆ ಹಾನಿಕಾರಕವಾಗುವ ಪ್ಲಾಸ್ಟಿಕ್ ಬಳಕೆ ಮಾಡಬಾರದು. ಬಟ್ಟೆ ಕೈ ಚೀಲ ಉಪಯೋಗಿಸಿ’ ಎಂದರು.

‘ಸ್ವಚ್ಚತೆ ಎನ್ನುವುದು ಉತ್ತಮ ಆರೋಗ್ಯದ ಹೆಬ್ಬಾಗಿಲು ಆಗಿದೆ. ಅನವಶ್ಯಕವಾಗಿ ತ್ಯಾಜ್ಯ ವಸ್ತುಗಳನ್ನು ಎಸೆಯುವುದು ಬೇಡ. ಶಾಲಾ ಹಂತದಲ್ಲಿ ಮಕ್ಕಳಿಗೂ ಪಾಲಕರು ಹಾಗೂ ಶಿಕ್ಷಕರು ಪರಿಸರದ ಮಹತ್ವದ ಬಗ್ಗೆ ಅರಿವು ಹಾಗೂ ಜಾಗೃತಿ ಮೂಡಿಸಬೇಕು’ ಎಂದು ಸಲಹೆ ನೀಡಿದರು.

ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಯಲ್ಲಪ್ಪ ಪಾಟೀಲ್, ಡಾ.ವೆಂಕಟೇಶ ಬೈರಾವಡಗಿ, ಡಾ.ಜ್ಯೋತಿ, ವಕೀಲರ ಸಂಘದ ಉಪಾಧ್ಯಕ್ಷ ವಾಸುದೇವ ಕಟ್ಟಿಮನಿ, ಕಾರ್ಯದರ್ಶಿ ಸಂತೋಷ ಸತ್ಯಂಪೇಟೆ, ನ್ಯಾಯಾಲಯದ ಶಿರಸ್ತೆದಾರ್ರಾದ ವಿ.ಎಸ್. ದೇಶಪಾಂಡೆ, ಮಲ್ಲಿಕಾರ್ಜುನ ಮಡಿವಾಳಕರ್, ಅಯ್ಯಣ್ಣ ನಾಗನಟಗಿ, ಗೃಹ ರಕ್ಷಕ ದಳದ ಸಿಬ್ಬಂದಿ, ಪ್ಯಾನಲ್ ವಕೀಲರು, ಆರೋಗ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.