ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಕೃಷ್ಣಾ ನದಿಗೆ 1.33 ಲಕ್ಷ ಕ್ಯುಸೆಕ್ ಹೊರ ಹರಿವು

Last Updated 15 ಜುಲೈ 2022, 4:05 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರ ಗ್ರಾಮದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 1.33 ಲಕ್ಷ ಕ್ಯುಸೆಕ್ ನೀರು ಹರಿಸಲಾಗುತ್ತಿದೆ.‌ ಶುಕ್ರವಾರ 421.23 ಮಟ್ಟ ಕಾಯ್ದುಕೊಂಡು ವಿದ್ಯುತ್ ಸ್ಥಾವರಕ್ಕೆ 6,000 ಸಾವಿರ ಕ್ಯುಸೆಕ್ ನೀರು ಹರಿಸಲಾಗುತ್ತಿದೆ.

ಕಳೆದ ಎರಡು ದಿನಗಳಿಂದಲೂ 1.33 ಲಕ್ಷ ಕ್ಯುಸೆಕ್ ನೀರು ನದಿಗೆ ಹರಿಸಲಾಗುತ್ತಿದೆ. 1.30 ಲಕ್ಷ ಕ್ಯುಸೆಕ್ ಒಳಹರಿವು ಇದೆ.

18 ಕ್ರಸ್ಟ್ ಗೇಟುಗಳಿಂದ ನೀರು ಹರಿಸುವ ದೃಶ್ಯ ರುದ್ರ ರಮಣೀಯವಾಗಿದೆ. 1.30 ಮೀಟರ್ ಗೇಟುಗಳನ್ನು ಎತ್ತರಿಸಿದ್ದು, ಜಲಾಶಯದಿಂದ ನೀರು ಚಿಮ್ಮುತ್ತ ಹಾಲ್ನೊರೆಯಂತೆ ಉಕ್ಕುವ ದೃಶ್ಯ ಕಣ್ಮನ ಸೆಳೆಯುತ್ತಿದೆ.‌ ಸದ್ಯ 28.77 ಟಿಎಂಸಿ ಸಂಗ್ರಹ ಹೊಂದಿದೆ. ಒಟ್ಟಾರೆ ಜಲಾಶಯದ ಮಟ್ಟ 425.25 ಮೀಟರ್ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT