ಯಾದಗಿರಿ: ಸ್ವಚ್ಛತೆ, ಸೌಲಭ್ಯಗಳಿಗೆ ಆಗ್ರಹಿಸಿ ಆಡಳಿತ ವ್ಯವಸ್ಥೆಯ ವಿರುದ್ಧ ಪ್ರತಿಭಟನೆಗಳು ಸಾಮಾನ್ಯ. ಸಂಘಟನೆಗಳು, ಸಾಮಾನ್ಯರು ಪ್ರತಿಭಟನೆಗಳ ಮೂಲಕ ಆಡಳಿತ ವ್ಯವಸ್ಥೆಯ ಕಣ್ಣು ತೆರೆಸುವ ಪ್ರಯತ್ನ ಮಾಡುತ್ತಾರೆ. ನಗರದಲ್ಲಿ ಭಾನುವಾರ ವಿನೂತನವಾದ ಪ್ರತಿಭಟನೆಯೊಂದು ನಡೆಯಿತು. ಅದು ನಗರದ ಉದ್ಯಾನಗಳ ಸ್ವಚ್ಛತೆಗೆ ಆಗ್ರಹಿಸಿ. ಇಲ್ಲಿ ಧರಣಿ ಕುಳಿತವರೇ ನಗರಸಭೆ ಅಧ್ಯಕ್ಷರು!

ಭಾನುವಾರ ನಗರದ ಹೃದಯ ಭಾಗದಲ್ಲಿರುವ ಮಹಾತ್ಮಾ ಗಾಂಧಿ ಉದ್ಯಾನವನ್ನು ಸ್ವಚ್ಛಗೊಳಿಸುವಂತೆ ಆಗ್ರಹಿಸಿ ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ, ಉದ್ಯಾನದಲ್ಲಿಯೇ ಧರಣಿ ಆರಂಭಿಸಿದರು. ಈ ಉದ್ಯಾನದ ಸ್ವಚ್ಛತೆಗೆ ಕಳೆದ ಮೂರು ತಿಂಗಳಿಂದ ತಿಳಿಸಲಾಗುತ್ತಿದೆ. ಆದರೆ ಈ ವರೆಗೂ ನಗರಸಭೆಯ ಸಿಬ್ಬಂದಿ ಗಮನ ನೀಡುತ್ತಿಲ್ಲ. ಉದ್ಯಾನದ ಸ್ವಚ್ಛತೆ ಆಗುತ್ತಲೇ ಇಲ್ಲ ಎಂಬ ಆಕ್ರೋಶ ಲಲಿತಾ ಅನಪೂರ ಅವರದ್ದು.

ನಗರಸಭೆಯ ಪೌರಾಯುಕ್ತರು, ಎಂಜಿನಿಯರ್, ಸಿಬ್ಬಂದಿಗೆ ಹೇಳಿ ಸುಸ್ತಾದ ಅಧ್ಯಕ್ಷೆ ಲಲಿತಾ ಅನಪೂರ, ಕೊನೆಗೆ ಆಯ್ದುಕೊಂಡಿದ್ದು ಧರಣಿಯ ಹಾದಿ. ಮಹಾತ್ಮಾ ಗಾಂಧೀಜಿ ತೋರಿದ ದಾರಿಯಲ್ಲಿಯೇ ಅವರ ಹೆಸರಿನ ಉದ್ಯಾನದ ಸ್ವಚ್ಛತೆಗೆ ಲಲಿತಾ ಮುಂದಾದರು. ನಗರಸಭೆ ಸದಸ್ಯ ಅಬ್ದುಲ್ ಕರೀಂ, ಮತ್ತಿತರರೊಡನೆ ಉದ್ಯಾನಕ್ಕೆ ಆಗಮಿಸಿ, ಧರಣಿ ಆರಂಭಿಸಿಯೇ ಬಿಟ್ಟರು.

ನಗರಸಭೆ ಅಧ್ಯಕ್ಷರೇ ಧರಣಿ ಆರಂಭಿಸಿದರೆ ಕೇಳಬೇಕೇ? ನಗರಸಭೆ ಪೌರಾಯುಕ್ತರು, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಸಿಬ್ಬಂದಿ ಕೂಡಲೇ ಆಗಮಿಸಿದರು. ಸ್ವಚ್ಛತಾ ಸಿಬ್ಬಂದಿಗಳು ಇಲ್ಲದೇ ಇರುವುದರಿಂದ ತಾವೇ ಸ್ವತಃ ಕೈಗವುಸುಗಳನ್ನು ಧರಿಸಿ, ಸ್ವಚ್ಛತೆಗೆ ಮುಂದಾದರು. ಪೌರಾಯುಕ್ತ ಮಹ್ಮದ್ ಮುನೀರ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಂಜಯ ಕುಲಕರ್ಣಿ, ಉದ್ಯಾನದಲ್ಲಿ ಬೆಳೆದಿದ್ದ ಗಿಡಗಂಟೆಗಳನ್ನು ಕಿತ್ತು ಹಾಕಿದರು.

ಗಮನವೇ ಇಲ್ಲ: ಜಿಲ್ಲಾ ಕೇಂದ್ರವಾಗಿರುವ ಯಾದಗಿರಿ ನಗರದಲ್ಲಿ ಅನೇಕ ಉದ್ಯಾನಗಳನ್ನು ನಿರ್ಮಿಸಲಾಗುತ್ತಿದೆ. ನಗರಸಭೆಯಿಂದ ಸಾಕಷ್ಟು ಅನುದಾನ ನೀಡಲಾಗುತ್ತಿದೆ. ನಗರದಲ್ಲಿರುವ ಮಹಾತ್ಮಾ ಗಾಂಧಿ ಉದ್ಯಾನ, ಕಮಲಾ ನೆಹರು ಪಾರ್ಕ್, ಬಸವೇಶ್ವರ ನಗರದ ಉದ್ಯಾನ, ನಜರತ್ ಕಾಲೋನಿ ಉದ್ಯಾನ ಹೀಗೆ ಹತ್ತಾರು ಕಡೆಗಳಲ್ಲಿ ಉದ್ಯಾನಗಳನ್ನು ನಿರ್ಮಿಸಲಾಗಿದೆ.

ಆದರೆ ಈ ಉದ್ಯಾನಗಳು ನಿರ್ವಹಣೆ ಇಲ್ಲದೇ ಹದಗೆಟ್ಟು ಹೋಗಿವೆ. ಅದರಲ್ಲಿಯೂ ನಗರದ ಮಹಾತ್ಮಾ ಗಾಂಧಿ ಉದ್ಯಾನ ಹಳೆಯದಾಗಿದ್ದು, ಪಕ್ಕದಲ್ಲಿಯೇ ದೇವಸ್ಥಾನ, ಶಾಲೆ-ಕಾಲೇಜುಗಳಿವೆ. ವಿದ್ಯಾರ್ಥಿಗಳು, ದೇವಸ್ಥಾನಕ್ಕೆ ಬರುವ ಭಕ್ತರು ಕೆಲಕಾಲ ವಿಶ್ರಾಂತಿ ಪಡೆಯಲು ಈ ಉದ್ಯಾನ ಅನುಕೂಲಕರವಾಗಿತ್ತು. ಆದರೆ ನಿರ್ವಹಣೆ ಇಲ್ಲದೇ ಹಾಳಾಗಿದ್ದ ಈ ಉದ್ಯಾನವನ್ನು ಸ್ವಚ್ಛಗೊಳಿಸುವಂತೆ ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ಕಳೆದ ಮೂರು ತಿಂಗಳ ಹಿಂದೆಯೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ ಇದುವರೆಗೂ ಸ್ವಚ್ಛಗೊಳಿಸಲು ಸಿಬ್ಬಂದಿ ಕ್ರಮ ಕೈಗೊಂಡಿರಲಿಲ್ಲ.

ಇದರಿಂದ ಬೇಸತ್ತ ಅಧ್ಯಕ್ಷೆ ಲಲಿತಾ ಅನಪೂರ ಕೊನೆಯ ಪ್ರಯತ್ನವಾಗಿ ಧರಣಿಯ ಹಾದಿ ಹಿಡಿದರು. ಬೆಳಿಗ್ಗೆ ಎಳುತ್ತಿದ್ದಂತೆಯೇ ಉದ್ಯಾನಕ್ಕೆ ಆಗಮಿಸಿ, ಪ್ರತಿಭಟನೆ ಆರಂಭಿಸಿದರು. ನಗರಸಭೆಯಿಂದ ಉದ್ಯಾನಗಳನ್ನು ನಿರ್ಮಿಸಲಾಗುತ್ತಿದೆ. ಸಾಕಷ್ಟು ಅನುದಾನ ನೀಡಲಾಗುತ್ತಿದ್ದು, ಉದ್ಯಾನಗಳು ನಿರ್ವಹಣೆ ಇಲ್ಲದೇ ಸೊರಗುತ್ತಿವೆ.

ಉದ್ಯಾನಗಳು ಜನರಿಗೆ ಅತ್ಯವಶ್ಯವಾಗಿದ್ದು, ಇವುಗಳನ್ನು ನಿರ್ವಹಣೆ ಮಾಡಲು ಸಿಬ್ಬಂದಿಗೆ ಸೂಚನೆ ನೀಡಿದರೂ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಧರಣಿ ನಡೆಸಬೇಕಾಯಿತು. ಈ ಉದ್ಯಾನ ಸ್ವಚ್ಛಗೊಳಿಸುವವರೆ ಧರಣಿ ಹಿಂದಕ್ಕೆ ಪಡೆಯುವುದಿಲ್ಲ ಎಂದು ಲಲಿತಾ ಅನಪೂರ ತಿಳಿಸಿದರು.

ಕೊನೆಗೆ ನಗರಸಭೆ ಪೌರಾಯುಕ್ತ ಮಹ್ಮದ್ ಮುನೀರ್, ಸಹಾಯಕ ಎಂಜಿನಿಯರ್ ಸಂಜಯ ಕುಲಕರ್ಣಿ ಉದ್ಯಾನದ ಸ್ವಚ್ಛತೆಗೆ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅಲ್ಲದೇ ನಗರದಲ್ಲಿರುವ ಉದ್ಯಾನಗಳೆಲ್ಲವನ್ನೂ ನಿರ್ವಹಣೆ ಮಾಡುವುದಾಗಿ ತಿಳಿಸಿದರು. ನಂತರ ಧರಣಿ ಹಿಂದಕ್ಕೆ ಪಡೆದ ಲಲಿತಾ ಅನಪೂರ, ಉದ್ಯಾನಗಳಲ್ಲಿರುವ ಮಕ್ಕಳ ಆಟಿಕೆ, ಗಿಡಗಳು, ನೀರಿನ ಕಾರಂಜಿಗಳನ್ನು ವ್ಯವಸ್ಥಿತ ರೀತಿಯಲ್ಲಿ ಇಡುವಂತೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.