ಶಹಾಪುರ: ತಾಲ್ಲೂಕಿನ ಹೋತಪೇಟ, ಉಕ್ಕಿನಾಳ, ಚಾಮನಾಳ ಹಾಗೂ ಹೊಸಕೇರಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮತ್ತು ಶಹಾಪುರ ಮತಕ್ಷೇತ್ರದ ಸುರಪುರ ತಾಲ್ಲೂಕಿನ ಯಾಳಗಿ, ಕೆಂಭಾವಿ, ಮಲ್ಲಾ(ಬಿ) ಯಕ್ತಾಪುರ ಗ್ರಾಮ ಪಂಚಾಯ್ತಿಯಲ್ಲಿ ಉದ್ಯೋಗ ಖಾತರಿ ಯೋಜನೆಗಳ ಕಾಮಗಾರಿ ಪರಿಶೀಲನೆಗೆ ಡಿ.11 ರಿಂದ 13ರ ವರೆಗೆ ಪಂಚಾಯ್ತಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿಶೇಷ ಆಯುಕ್ತರಾದ ಪ್ರಭಾಷ್ ಚಂದ್ರ ರೇ ವಿಶೇಷ ತಂಡವು ಸಂಚರಿಸಲಿದೆ.

ಶಾಸಕ ಗುರು ಪಾಟೀಲ್ ಶಿರವಾಳ ಅವರು ಶಹಾಪುರ ಮತಕ್ಷೇತ್ರದಲ್ಲಿ ಎಂಟು ಗ್ರಾಮ ಪಂಚಾಯ್ತಿಯಲ್ಲಿ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿನ ಕಾಮಗಾರಿಗಳ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಸಮಗ್ರವಾಗಿ ತನಿಖೆ ನಡೆಸುವಂತೆ ಕಳೆದ 2013 ಅ.31ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಕೋರಿದ ಹಿನ್ನೆಲೆಯಲ್ಲಿ ತಂಡ ಬರಲಿದೆ ಎಂದು ತಾಲ್ಲೂಕು ಪಂಚಾಯ್ತಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಯೋಜನೆ ದುರ್ಬಳಕೆ ಅಧಿಕವಾಗಿದೆ. ಸರ್ಕಾರದ ಅನುದಾನ ಸದ್ಬಳಕೆಯಾಗದೆ ಮುಗ್ಗರಿಸಿದೆ. ಅದರಲ್ಲಿ ತಾಲ್ಲೂಕಿನ ಹೋತಪೇಟ, ಚಾಮನಾಳ, ಉಕ್ಕಿನಾಳ, ಹೊಸಕೇರಾ ಗ್ರಾಮ ಪಂಚಾಯ್ತಿಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಲಿವೆ.

ಆರೋಪ: ತಾಲ್ಲೂಕಿನ ಹೆಚ್ಚಿನ ಗ್ರಾಮ ಪಂಚಾಯ್ತಿಗಳಲ್ಲಿ ಉದ್ಯೋಗ ಖಾತರಿ ಯೋಜನೆ ಕಾಮಗಾರಿಯ ಅನುಷ್ಠಾನದಲ್ಲಿ ವ್ಯಾಪಕವಾಗಿ ಭ್ರಷ್ಟಾಚಾರ ನಡೆದಿದೆ. ಗ್ರಾಮೀಣ ಪ್ರದೇಶದ ಸ್ಥಳೀಯ ರಾಜಕೀಯ ಮುಖಂಡರು ವ್ಯವಸ್ಥಿತವಾಗಿ ಖಾತರಿ ಕಾಮಗಾರಿಗೆ ಬೇಕಾಗುವ ದಾಖಲೆಗಳನ್ನು ಸಿದ್ಧಪಡಿಸಿ ಕಂಪ್ಯೂಟರ್‌ನಲ್ಲಿ ಅಪ್‌ಲೋಡ್ ಮಾಡಿ ವರದಿ ರವಾನಿಸಿ ಹಣ ಲಪಾಟಾಯಿಸುವುದು ಸಾಮಾನ್ಯವಾಗಿದೆ ಎಂದು ಕೃಷಿಕೂಲಿಕಾರ ಸಂಘದ ಜಿಲ್ಲಾ ಘಟಕ ಸಂಚಾಲಕ ದಾವಲಸಾಬ್ ನದಾಫ್ ಆರೋಪಿಸಿದ್ದಾರೆ.

ಖಾತರಿ ಅಕ್ರಮಕ್ಕೆ ಮೂಲ ನೆಲೆಯೆಂದರೆ ಆಯಾ ಗ್ರಾಮ ಪಂಚಾಯಿತಿ ಕಂಪ್ಯೂಟರ್ ಅಪರೇಟರ್ಗಳು ಆಗಿದ್ದಾರೆ. ನಂತರ ಅಂದಾಜು ಪತ್ರಿಕೆಯನ್ನು ಸಿದ್ಧಪಡಿಸಿ ಕಾಮಗಾರಿ ಅನುಮೋದನೆಯನ್ನು ಸಂಬಂಧಪಟ್ಟ ಎಂಜಿನಿಯರ್ ಪಡೆದುಕೊಂಡು ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ.

ವಾಸ್ತವವಾಗಿ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಖಾತರಿ ಯೋಜನೆ ಅನುಷ್ಠಾನ ಕಾಮಗಾರಿ ಪರಿಶೀಲನೆ ನಡೆಸಿದರೆ ಅಕ್ರಮದ ನೈಜ ಚಿತ್ರಣ ಕಣ್ಣಿಗೆ ಕಾಣುತ್ತದೆ. ಜಿಲ್ಲೆಯ ಹಿರಿಯ ಅಧಿಕಾರಿಗಳು ಸಂಪೂರ್ಣವಾಗಿ ಅಕ್ರಮ ಕೆಲಸಕ್ಕೆ ಸಾಥ್ ನೀಡುತ್ತಿರುವುದರಿಂದ ಉದ್ಯೋಗ ಖಾತರಿ ಯೋಜನೆ ಅನುಷ್ಠಾನವಾಗದೇ ಹಣ ಸಂಪಾದನೆಯ ಖಾತರಿ ಯೋಜನೆ ಇದಾಗಿದೆ ಎಂದು ಅವರು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.