ಗುಲ್ಬರ್ಗ: ಬದಲಾವಣೆಗಾಗಿ ನಾವು (`ಟುಗೆದರ್ ವಿ ಕ್ಯಾನ್ ಚೇಂಜ್~) ಸ್ವಯಂಸೇವಾ ಸಂಘಟನೆಯು ಜುಲೈ 5ರಿಂದ ಡಿಸೆಂಬರ್ ಕೊನೆಯ ವಾರದವರೆಗೆ ಸುಮಾರು 2ಲಕ್ಷ ಸಸಿ ನೆಡುವ ಗುರಿ ಹೊಂದಿದೆ ಎಂದು ಸಂಚಾಲಕ ಬ್ಯಾನರ್ಜಿ ವೈಷ್ಣವಿ ತಿಳಿಸಿದರು.

ಇಲ್ಲಿನ ದರ್ಗಾ ರಸ್ತೆಯ ಐಡಿಯಲ್ ಉರ್ದು ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆ ಆವರಣದಲ್ಲಿ `ಬದಲಾವಣೆಗಾಗಿ ನಾವು~ ಸಂಘಟನೆಯು ಇನ್ಫೋಸಿಸ್ ಫೌಂಡೇಶನ್ ಮತ್ತು ಐಡಿಯಲ್ ಸ್ಕೂಲ್ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಗರದ ವಿವಿಧ ಭಾಗಗಳಲ್ಲಿ ಈಗಾಗಲೇ ಶೇ 40ರಷ್ಟು ಸಸಿ ನೆಡಲಾಗಿದೆ. ಗಿಡ ಬೆಳೆಸುವ ಮೂಲಕ ಹಸಿರು ಕಂಗೊಳಿಸುವಂತೆ ಮಾಡುವ ಕ್ರಮಕ್ಕೆ ಹಸಿರು ನಿಶಾನೆ ತೋರಲಾಗಿದೆ ಎಂದು ವಿವರಿಸಿದರು.

`ಸಸಿ ನೆಡುವುದರಿಂದ ಆಗುವ ಪ್ರಯೋಜನ~ ಕುರಿತು ಚರ್ಚಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಉತ್ತಮವಾಗಿ ಮಾತನಾಡಿದ ವಿದ್ಯಾರ್ಥಿಗಳಾದ ಅಯಾಜ್, ಇಶರತ್, ಸುಲೇನ್ ಆದಿಲ್ ಅವರಿಗೆ ಟುಗೆದರ್ ವಿ ಕ್ಯಾನ್ ಚೇಂಜ್ ಸಂಘಟನೆ ವತಿಯಿಂದ ಬಹುಮಾನ ವಿತರಿಸಲಾಯಿತು.

ಡಾ. ಹಬೀಬ್ ರೆಹಮಾನ್ ಮಾತನಾಡಿದರು. ಹಮೀದ್ ಅಕಮ್ಮಲ್, ಅಜೀಜ್ ಉಲ್ಲ ಸರ್ಮಸ್ತ್, ಅಬ್ದುಲ್ ಖದಿಕ್ ಚ್ಯೆಂಗೆ, ಮಗ್ಬಲ್ ಅಹೇಮದ್ ಫರೀದಿ, ಇನ್ಫೋಸಿಸ್ ಪ್ರತಿಷ್ಠಾನದ ಶ್ರೀನಿವಾಸ ದೇಶಮುಖ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.