ಗುಲ್ಬರ್ಗ:  ಕನ್ನಡ ಸಾಹಿತ್ಯ ಪರಿಷತ್ ಮತದಾರರ ಪಟ್ಟಿಯಲ್ಲಿ ಸತ್ತಿರುವ ಸದಸ್ಯರ ಹೆಸರುಗಳು ಇನ್ನೂ ಉಳಿದಿದೆ. 1943ರಿಂದ ಆಜೀವ ಸದಸ್ಯರಾದ ಅನೇಕರು ಇನ್ನೂ ಮತದಾರರ ಪಟ್ಟಿಯಲ್ಲಿ ಜೀವಂತವಾಗಿದ್ದಾರೆ.
ಪರಿಷತ್ನ ಕೇಂದ್ರ ಘಟಕ ಹಾಗೂ ಜಿಲ್ಲಾ ಘಟಕಗಳಿಗೆ ಏ. 29ರಂದು ಚುನಾವಣೆ ನಿಗದಿಪಡಿಸಲಾಗಿದೆ.

ಕಸಾಪದ ಈಗಿರುವ ಒಟ್ಟು 1,08,028 ಮತದಾರರ ಪೈಕಿ ಸುಮಾರು ಎರಡರಿಂದ ಐದು ಸಾವಿರ ಸದಸ್ಯರು ಮೃತಪಟ್ಟಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ಗುಲ್ಬರ್ಗ ಜಿಲ್ಲೆಯ ಒಟ್ಟು 4,392 ಮತದಾರರ ಪೈಕಿ ನೂರರಿಂದ ನೂರಿಪ್ಪತ್ತು ಸದಸ್ಯರು ಮೃತಪಟ್ಟಿದ್ದಾರೆ. ಆದರೂ ಅವರೆಲ್ಲ ಪಟ್ಟಿಯಲ್ಲಿದ್ದಾರೆ.

ಹೆಸರು ಡಬಲ್: ಮತದಾರರ ಪಟ್ಟಿಯಲ್ಲಿ ಕೆಲವರ ಹೆಸರು ಎರಡೆರಡು ಬಾರಿ ಬಂದಿದೆ. ಇದರಿಂದಾಗಿ ಮತದಾನದ ಸಂದರ್ಭದಲ್ಲಿ ಬೇರೆಯವರ ಹೆಸರಿನಲ್ಲೂ ಮತ ಹಾಕುವ ಸಾಧ್ಯತೆಗಳಿವೆ.

ಹಿಂದಿನ ಚುನಾವಣೆಯಲ್ಲಿ ಕನಿಷ್ಠ ನೂರು ಮತಗಳಿದ್ದ ಊರುಗಳಲ್ಲಿ ಹೊಸ ಮತಗಟ್ಟೆ ಸ್ಥಾಪಿಸಲಾಗಿತ್ತು. ಈ ಬಾರಿ ಅಂಥ ಮತಗಟ್ಟೆಗಳನ್ನು ರದ್ದು ಮಾಡಿದ್ದರಿಂದ ಮತದಾರರು ಮತ ಚಲಾಯಿಸಬೇಕಾದರೆ ಸಮಯದ ಜೊತೆಗೆ ಹಣವನ್ನೂ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.