ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನಗಳಲ್ಲಿರುವ ಬ್ಲ್ಯಾಕ್ ಬಾಕ್ಸ್ ಬಗ್ಗೆ ನಿಮಗೆಷ್ಟು ಗೊತ್ತು?

Last Updated 9 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

60ರ ದಶಕದಿಂದ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಎರಡು ಮುಖ್ಯ ಉಪಕರಣಗಳನ್ನು ಬಳಸಲಾಗುತ್ತಿದೆ. ಒಂದು ಡಿಜಿಟಲ್ ಫ್ಲೈಟ್‌ ಡಾಟಾ ರೆಕಾರ್ಡರ್ ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್. ಈ ಉಪಕರಣಗಳನ್ನು ವಿಮಾನದಲ್ಲಿ ಪ್ರತ್ಯೇಕವಾಗಿ ಇಡಲಾಗುತ್ತದೆ. ಈ ಎರಡು ಉಪಕರಣಗಳಿರುವ ಪೆಟ್ಟಿಗೆಗಳನ್ನು ಬ್ಲಾಕ್‌ ಬಾಕ್ಸ್‌ ಎಂದು ಕರೆಯುತ್ತಾರೆ. ಈ ಉಕ್ಕಿನ ಪೆಟ್ಟಿಗೆಗಳನ್ನು ಶಾಖ ನಿರೋಧಕ ಸಾಮಗ್ರಿಗಳಿಂದ ತಯಾರಿಸಲಾಗುತ್ತದೆ. 1000 ಡಿಗ್ರಿ ಸೆ. ವರೆಗಿನ ಉಷ್ಣಾಂಶವನ್ನು ಅರ್ಧ ಗಂಟೆಯವರೆಗೂ ತಡೆದುಕೊಳ್ಳಬಲ್ಲ ಸಾಮರ್ಥ್ಯ ಈ ಪೆಟ್ಡಿಗೆಗಳಿರುತ್ತವೆ. ಅಪಘಾತಗಳು ಸಂಭವಿಸಿದಾಗಲೂ ಈ ಪೆಟ್ಟಿಗೆಗೆಳಿಗೆ ಯಾವ ಹಾನಿಯುಂಟಾಗುವುದಿಲ್ಲ. ಈ ಉಪಕರಣಗಳಲ್ಲಿ ಉಪಯೋಗಿಸಲಾಗುವ ಟೇಪ್ ಸಹ ಸ್ಟೈನ್‌ಲೆಸ್ ಸ್ಟೀಲ್‌ನಿಂದ ಮಾಡಿರುತ್ತಾರೆ. ಆದ್ದರಿಂದ ಎರಡು ದಿನಗಳ ಕಾಲ ಸಮುದ್ರದಲ್ಲಿದ್ದರೂ ಈ ಟೆಪ್‌ಗೆ ಹಾನಿಯಾಗುವುದಿಲ್ಲ. ಯಾನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದಾಖಲು ಮಾಡುವ ಈ ಸಾಧನವನ್ನು ವಿಮಾನದ ಹಿಂಭಾಗದಲ್ಲಿ ಇಡಲಾಗುತ್ತದೆ. ಇನ್ನೊಂದು ಸಾಧನವಾದ ಕಾಕ್‌ಪಿಟ್ಸ್ ವಾಯ್ಸ್ ರೆಕಾರ್ಡರ್ ಅನ್ನು ಕಾಕ್‌ಪಿಟ್‌ನೊಳಗೆ ಇಡಲಾಗುತ್ತದೆ.

ಫ್ಲೈಟ್ ಡಾಟ ರೆಕಾರ್ಡರ್ ಒಂದು ಮಲ್ಟಿ ಚಾನೆಲ್ ರೆಕಾರ್ಡರ್ ಆಗಿದೆ. ಈ ಟೇಪ್‌ನ ಉದ್ದ 6000 ಅಡಿಗಳಿಷ್ಟಿರುತ್ತದೆ. 25 ತಾಸುಗಳ ಯಾನದ ಮಾಹಿತಿಯನ್ನು ದಾಖಲು ಮಾಡುತ್ತದೆ. ವಿಮಾನದ ಉಷ್ಣಾಂಶ, ಅದರ ವೇಗ, ಬೆಳಕಿನ ದಿಕ್ಕು , ಎಂಜಿನ್ ಶಬ್ದ, ವಿವಿಧ ಉಪಕರಣಗಳ ರೀಡಿಂಗ್, ಗಾಳಿ ಬೀಸುವ ವೇಗ ಇನ್ನೂ ಅನೇಕ ಬಗೆಯ ಮಾಹಿತಿಯನ್ನು ಇದು ರೆಕಾರ್ಡ್ ಮಾಡುತ್ತದೆ. ಒಟ್ಟಿನಲ್ಲಿ ಇದು 64 ಪ್ಯಾರಾಮಿಟರ್‌ಗಳನ್ನು ರೆಕಾರ್ಡ್ ಮಾಡಬಲ್ಲದು. ಈ ಪ್ಯಾರಾಮಿಟರ್‌ಗಳು ವಿಮಾನದ ಅಪಘಾತಗಳ ಬಗ್ಗೆ ಮಾಹಿತಿ ನೀಡುತ್ತದೆ. ಈ ಟೇಪ್ ಮೇಲೆ ರೆಕಾರ್ಡ್ ಆದ ಮಾಹಿತಿಯನ್ನು ಓದಿ ವಿಶ್ಲೇಷಿಸಲು, ಸಾಕಷ್ಟು ಸಮಯ ಹಿಡಿಯುತ್ತದೆ.

ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಕೂಡ ಒಂದು ಮಾದರಿಯ ಟೇಪ್ ರೆಕಾರ್ಡರ್. ಇದರಲ್ಲಿ ಮ್ಯಾಗ್ನೆಟಿಕ್ ಟೇಪ್ ಇರುತ್ತದೆ. ಇದು ಕಾಕ್‌ಪಿಟ್‌ನಲ್ಲಿ ಚಾಲಕ ವರ್ಗದ ಸದಸ್ಯರ ನಡುವಿನ ಸಂಭಾಷಣೆಯನ್ನು ರೆಕಾರ್ಡ್ ಮಾಡುತ್ತದೆ. ಸ್ಫೋಟದ ಶಬ್ದ ಕೂಡ ಇದರಲ್ಲಿ ದಾಖಲಾಗುತ್ತದೆ. ಇದು ಕಡೇ ಅರ್ಧ ಗಂಟೆಯ ಅವಧಿಯಲ್ಲಿ ನಡೆದ ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಂಡಿರುತ್ತದೆ. ಇದಕ್ಕೆ ಮುಂಚೆ ದಾಖಲಾಗಿದ್ದ ಮಾಹಿತಿಯೆಲ್ಲ ತನ್ನಷ್ಟಕ್ಕೆ ತಾನೇ ಅಳಿಸಿ ಹೋಗುತ್ತದೆ.

ವಿಮಾನವೊಂದು ಅಪಘಾತಕ್ಕೀಡಾದಾಗ, ಅಪಘಾತದ ಕಾರಣಗಳನ್ನು ಪತ್ತೆ ಮಾಡಲು ಈ ಎರಡು ಉಪಕರಣಗಳಿಗಾಗಿ ಹುಡುಕಲಾಗುತ್ತದೆ. ಆದ್ದರಿಂದ ವಿಮಾನ ಯಾನದಲ್ಲಿ ಬ್ಲ್ಯಾಕ್‌ ಬಾಕ್ಸ್‌ ಅತಿ ಮುಖ್ಯವಾದದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT