ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ವಾಯುಪಡೆಯಲ್ಲಿ ಅಗ್ನಿವೀರ್‌ ವಾಯು ಹುದ್ದೆಗಳಿಗೆ ಅರ್ಜಿ ಆಹ್ವಾನ

ಆಗಸ್ಟ್ 17 ಅರ್ಜಿ ಸಲ್ಲಿಸಲು ಕೊನೆಯ ದಿನ.
Published 20 ಜುಲೈ 2023, 0:06 IST
Last Updated 20 ಜುಲೈ 2023, 0:06 IST
ಅಕ್ಷರ ಗಾತ್ರ

ಭಾರತೀಯ ವಾಯುಪಡೆ ‘ಅಗ್ನಿವೀರ್ ವಾಯು’ ನೇಮಕಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಜುಲೈ 27 ರಿಂದ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಆರಂಭವಾಗಲಿದೆ. ಆಗಸ್ಟ್ 17 ಅರ್ಜಿ ಸಲ್ಲಿಸಲು ಕೊನೆಯ ದಿನ. ಈ ಕುರಿತು ಭಾರತೀಯ ವಾಯುಪಡೆ ಅಧಿಸೂಚನೆ ಹೊರಡಿಸಿದೆ.

ಈ ವರ್ಷವೂ 4,165 ಹುದ್ದೆಗಳಿಗೆ ನೇಮಕ ನಡೆಯಲಿದೆ. ಮಹಿಳೆಯರಿಗೆ 833 ಹುದ್ದೆಗಳು ರಾಜ್ಯವಾರು ಮೀಸಲಾಗಿವೆ ಎಂದು ಮೂಲಗಳು ತಿಳಿಸಿವೆ. (SSR 02/23 ನವೆಂಬರ್ ಹಾಗೂ 01/24 ಎಪ್ರಿಲ್ 24ರ ಬ್ಯಾಚ್‌ಗಳಿಗೆ)

ನೇಮಕಾತಿಗಾಗಿ ಮೂರು ಹಂತಗಳಲ್ಲಿ ಪರೀಕ್ಷೆ ನಡೆಯಲಿದೆ. ಇದೇ ವರ್ಷದ ಅಕ್ಟೋಬರ್ 13ರಿಂದ ಆನ್‌ಲೈನ್ ಪರೀಕ್ಷೆ ಆರಂಭವಾಗಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.

ಗಮನಿಸಿ: ಈ ಆಯ್ಕೆ ಪರೀಕ್ಷೆಯು ಐಎಎಫ್‌ನ ’ಅಗ್ನಿವೀರ್‌ ವಾಯು’ ಆಗಲು ಮಾತ್ರ. ಉಳಿದಂತೆ ಕಮಿಷನ್ಡ್ ಆಫೀಸರ್‌ಗಳು/ಪೈಲಟ್‌ಗಳು /ನ್ಯಾವಿಗೇಟರ್‌ಗಳು /ಏರ್‌ಮೆನ್ ಆಗಿ ಆಯ್ಕೆಯಾಗಲು ಅಲ್ಲ. ಈ ಆಯ್ಕೆ ಪರೀಕ್ಷೆಯು ಭಾರತೀಯ ಅರ್ಹ ‌ಅವಿವಾಹಿತ ಪುರುಷ/ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ.

ಯಾರು ಅರ್ಜಿ ಸಲ್ಲಿಸಬಹುದು.

ಕೆಲವು ಶೈಕ್ಷಣಿಕ ಮತ್ತು ದೈಹಿಕ ಅರ್ಹತೆಗಳನ್ನು ಪೂರೈಸಿರುವ ಎಲ್ಲಾ ಅವಿವಾಹಿತ ಭಾರತೀಯ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಈ ಪ್ರಮುಖ ನೇಮಕಾತಿ ಡ್ರೈವ್‌ಗಳಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ : https://agnipathvayu.cdac.in/  https://indianairforce.nic.in ನೋಡಬಹುದು.

(ಮುಂದಿನವಾರ : ’ಅಗ್ನಿವೀರ್‌ ವಾಯು’ ನೇಮಕಾತಿಗೆ ಸಂಬಂಧಿಸಿದ ಮೂರು ಹಂತದ ಪರೀಕ್ಷೆಗಳು, ನೇಮಕಾತಿ ವಿಧಾನ, ವೇತನ, ಭತ್ಯೆ ಮತ್ತಿತರ ಮಾಹಿತಿಗಳಿರುವ ಲೇಖನ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT