ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BEL: 360 ಎಂಜಿನಿಯರಿಂಗ್‌ ಹುದ್ದೆಗಳು; ಅರ್ಜಿ ಸಲ್ಲಿಕೆಗೆ ಮಾರ್ಚ್‌ 13 ಕಡೆ ದಿನ

Last Updated 24 ಫೆಬ್ರುವರಿ 2022, 12:30 IST
ಅಕ್ಷರ ಗಾತ್ರ

ಭಾರತ್‌ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ (ಬಿಇಎಲ್‌) 2022ನೇ ಸಾಲಿನ ನೇಮಕಾತಿ ಕುರಿತಂತೆ ವೆಬ್‌ಸೈಟ್‌ನಲ್ಲಿ ಅಧಿಕೃತ ಮಾಹಿತಿ ಹೊರಡಿಸಿದೆ.

ಡಿಪ್ಲೊಮಾ ಮತ್ತು ಎಂಜಿನಿಯರಿಂಗ್ ಪದವಿ ಪಾಸ್ ಮಾಡಿದ ಅಭ್ಯರ್ಥಿಗಳು ಅಪ್ರೆಂಟಿಸ್ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಬಹುದು.

ಹುದ್ದೆಗಳು: ಎಂಜಿನಿಯರ್‌ ಅಪ್ರೆಂಟಿಸ್ ಹುದ್ದೆಗಳು

ಹುದ್ದೆಗಳ ಸಂಖ್ಯೆ: 360

ಸ್ಥಳ: ಬೆಂಗಳೂರು ಮತ್ತು ಇತರೆ ಕಡೆ

ವಿದ್ಯಾರ್ಹತೆ: ಡಿಪ್ಲೊಮಾ ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಇ, ಬಿ.ಟೆಕ್‌ ಪದವಿ ಪಡೆದಿರಬೇಕು. ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ ನೋಡುವುದು.

ಭತ್ಯೆ: ₹15 ಸಾವಿರ ತರಬೇತಿ ಭತ್ಯೆ ನೀಡಲಾಗುವುದು.

ವಯೋಮಿತಿ: ಗರಿಷ್ಠ 28 ವರ್ಷ ಮೀರಿರಬಾರದು . ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ವಿನಾಯಿತಿ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಿನಾಯಿತಿ ಇದೆ.

ಆಯ್ಕೆ ಪ್ರಕ್ರಿಯೆ: ಡಿಪ್ಲೊಮಾ ಅಥವಾ ಪದವಿಯಲ್ಲಿ ಪಡೆದ ಗರಿಷ್ಠ ಅಂಕಗಳ ಸರಾಸರಿ ಹಾಗೂ ವೈಯಕ್ತಿಕ ಸಂದರ್ಶನದ ಮೂಲಕ ನೇಮಕಾತಿ ನಡೆಯುವುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13-03-2022

ಹೆಚ್ಚಿನ ಮಾಹಿತಿಗೆ...

* https://bel-india.in

* http://portal.mhrdnats.gov.in/boat/login/user_login.action

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT