ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಿಸ್ಟೆಂಟ್‌ ಕಮಾಂಡೆಂಟ್ ಹುದ್ದೆ: ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಹೇಗೆ?

Last Updated 11 ಮೇ 2022, 19:30 IST
ಅಕ್ಷರ ಗಾತ್ರ

ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಾದ ಬಿಎಸ್ಎಫ್, ಸಿಐಎಸ್, ಎಫ್‌ಸಿಆರ್‌ಪಿಎಫ್, ಐಟಿಡಿಪಿ ಮತ್ತು ಎಸ್‌ಎಸ್‌ಬಿ ವಿಭಾಗಗಳಲ್ಲಿ ಖಾಲಿ ಇರುವ253 ‘ಅಸಿಸ್ಟೆಂಟ್ ಕಮಾಂಡೆಂಟ್’ ಹುದ್ದೆಗಳ ಭರ್ತಿಗಾಗಿಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್‌ಸಿ) ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಅಧಿಸೂಚನೆ ಪ್ರಕಾರ, ಆಗಸ್ಟ್‌ 7ರಂದು ಪರೀಕ್ಷೆ ನಿಗದಿಯಾಗಿದೆ.

ಅಸಿಸ್ಟೆಂಟ್ ಕಮಾಂಡೆಂಟ್ ಹುದ್ದೆಯು ಗ್ರೂಪ್-ಎ ದರ್ಜೆಯ ಗೆಜೆಟೆಡ್‌ ಅಧಿಕಾರಿ ಹುದ್ದೆಯಾಗಿದೆ. ಇದು ಪೊಲೀಸ್ ಇಲಾಖೆಯ ಡೆಪ್ಯುಟಿ ಸೂಪರಿಂಟೆಂಡ್‌ (Deputy superintendent) ಹುದ್ದೆಗೆ ಸಮಾನಾಂತರ ಹುದ್ದೆಯಾಗಿದೆ. ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಯು ಐಜಿ(ಇನ್‌ಸ್ಪೆಕ್ಟರ್‌ ಜನರಲ್‌) ಮತ್ತು ಎಡಿಜಿ ರ‍್ಯಾಂಕ್‌ಗಳವರೆಗೆ ಪದೋನ್ನತಿ ಪಡೆಯಬಹುದು.

ಲಿಖಿತ ಪರೀಕ್ಷೆ, ದೇಹದಾರ್ಢ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆ ಹಾಗೂ ಸಂದರ್ಶನ – ಹೀಗೆ ಮೂರು ಹಂತಗ ಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆ
ಮಾಡಲಾಗುತ್ತದೆ.

ಲಿಖಿತ ಪರೀಕ್ಷೆ

ಲಿಖಿತ ಪರೀಕ್ಷೆಯಲ್ಲಿ ಎರಡು ಪ್ರಶ್ನೆ ಪತ್ರಿಕೆಗಳಿರುತ್ತವೆ. ಎರಡನ್ನೂ ಒಂದೇ ದಿನ ನಡೆಸಲಾಗುತ್ತದೆ.

ಪತ್ರಿಕೆ–1 : ಇದು ಎರಡು ಗಂಟೆಗಳ ಅವಧಿಯ 250 ಅಂಕಗಳ ಪರೀಕ್ಷೆಯಾಗಿದೆ.ಸಾಮಾನ್ಯ ಸಾಮರ್ಥ್ಯ ಮತ್ತು ಬುದ್ಧಿವಂತಿಕೆ ಪರೀಕ್ಷಿಸುವ ಪತ್ರಿಕೆ. ಅಭ್ಯರ್ಥಿಗಳಲ್ಲಿರುವ ಪ್ರಚಲಿತ ವಿದ್ಯಮಾನ, ಸಾಮಾನ್ಯ ವಿಜ್ಞಾನ, ಗ್ರಹಿಕಾ ಸಾಮರ್ಥ್ಯ, ಸಾಮಾನ್ಯ ಜ್ಞಾನವನ್ನು ಪರೀಕ್ಷಿಸಲಾಗುತ್ತದೆ.

ಪತ್ರಿಕೆ–2: ಇದು ಮೂರು ಗಂಟೆಗಳ ಅವಧಿಯ 200 ಅಂಕಗಳ ಪರೀಕ್ಷೆ.ಅಭ್ಯರ್ಥಿಯಲ್ಲಿರುವ ಬರಹದ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ. ಈ ಪತ್ರಿಕೆಯಲ್ಲಿ ಪ್ರಬಂಧ, ಸಾರಾಂಶ ಬರವಣಿಗೆ ಕುರಿತು ಪ್ರಶ್ನೆಗಳಿರುತ್ತವೆ. ಅಭ್ಯರ್ಥಿಯು ಪ್ರಬಂಧವನ್ನು ಇಂಗ್ಲಿಷ್‌ ಅಥವಾ ಹಿಂದಿ ಭಾಷೆಯಲ್ಲಿ ಮಾತ್ರ ಬರೆಯಲು ಅವಕಾಶ ನೀಡಲಾಗಿದೆ. ಮಾದರಿ ಪ್ರಬಂಧಗಳನ್ನು ಅಭ್ಯಸಿಸುವ ಮೂಲಕ ಯಶಸ್ಸು ಗಳಿಸಬಹುದು.

ದೇಹದಾರ್ಢ್ಯ ಪರೀಕ್ಷೆ

ಲಿಖಿತ ಪರೀಕ್ಷೆ ನಂತರ, ಅಭ್ಯರ್ಥಿಗಳ ದೇಹದಾರ್ಢ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆ ನಡೆಯುತ್ತದೆ. 100 ಮೀ ಹಾಗೂ 800 ಮೀ ಓಟ, ಗುಂಡು ಎಸೆತದಂತಹ ಸ್ಪರ್ಧೆಗಳಿರುತ್ತವೆ. ಪುರುಷರು 16 ಸೆಕೆಂಡ್‌, ಮಹಿಳೆಯರು ಮಹಿಳೆಯರು 18 ಸೆಕೆಂಡ್‌ಗಳಲ್ಲಿ 100 ಮೀ ಗುರಿ ತಲುಪಬೇಕು. 800 ಮೀಟರ್ ಸ್ಪರ್ಧೆಯಲ್ಲಿ ಪುರುಷರು 3 ನಿ. 45 ಸೆಕೆಂಡ್‌ನಲ್ಲಿ ಹಾಗೂ ಮಹಿಳೆಯರು 4 ನಿ. 45 ಸೆಕೆಂಡ್‌ನಲ್ಲಿ ಗುರಿ ಮುಟ್ಟಬೇಕು. ಉದ್ದ ಜಿಗಿತ ಸ್ಪರ್ಧೆಯಲ್ಲಿ ಪುರುಷರಿಗೆ 3.5 ಮೀ,ಮಹಿಳೆಯರಿಗೆ 3 ಮೀ ಗುರಿ ನಿಗದಿಪಡಿಸಲಾಗಿದೆ. ಗುಂಡು ಎಸೆತ ಪುರುಷರಿಗೆ ಮಾತ್ರ ಇದ್ದು, 4.5 ಮೀ ಗುರಿ ನಿಗದಿಪಡಿಸಲಾಗಿದೆ.

ಸಂದರ್ಶನ/ ವ್ಯಕ್ತಿತ್ವ ಪರೀಕ್ಷೆ

ಇದು 150 ಅಂಕಗಳಿಗೆ ನಡೆಯುವ ಪರೀಕ್ಷೆ.ಹಂತ 1 ಮತ್ತು ಹಂತ 2 ರಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ವ್ಯಕ್ತಿತ್ವವನ್ನು ಪರೀಕ್ಷಿಸಲು ಕೇಂದ್ರ ಲೋಕಸೇವಾ ಆಯೋಗದಿಂದ(ಯುಪಿಎಸ್‌ಸಿ) ಸಂದರ್ಶನ ನಡೆಸಲಾಗುವುದು. ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಮತ್ತು ಸಂದರ್ಶನದಲ್ಲಿ ಗಳಿಸಿರುವ ಅಂಕಗಳ ಆಧಾರದ ಮೇಲೆ ಮೆರಿಟ್ ಮೂಲಕ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗುವುದು.

ಹೆಚ್ಚಿನ ಮಾಹಿತಿಗೆ: www.upsconline.nic.in, upsc.gov.in/Notification

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT