ಬೆಂಗಳೂರು: ಭಾರತ್ ಸರ್ಕಾರ ಸ್ವಾಮ್ಯದ, ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಆಗಿರುವ ‘ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ’ದಲ್ಲಿ 275 ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ (Central Bank of India Specialist Officers Recruitment 2026) ಆರಂಭಿಸಲಾಗಿದೆ.

ವಿಶೇಷ ಎಂದರೆ ಈ ಹುದ್ದೆಗಳು ಬ್ಯಾಂಕ್ನಲ್ಲಿ ಸ್ಪೆಷಲಿಸ್ಟ್ ವಿಭಾಗದ ಹುದ್ದೆಗಳಾಗಿವೆ ಹಾಗೂ ಬ್ಯಾಂಕ್ನ ಪೂರ್ಣಕಾಲಿಕೆ ಹುದ್ದೆಗಳಾಗಿವೆ.

ಫೆಬ್ರುವರಿ 28 ರಿಂದ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು ಆನ್ಲೈನ್ ಅರ್ಜಿ ಸಲ್ಲಿಸಲು ಇದೇ ಮಾರ್ಚ್ 23 ಕಡೆಯ ದಿನ.

ಬಿಇ– ಬಿ.ಟೆಕ್ ಕಂಪ್ಯೂಟರ್ ಸೈನ್ಸ್, ಐಟಿ, ಇಸಿಇ, ಇಟಿಸಿ, ಎಂಸಿಎ ಮತ್ತು ಸಿಎ, ಎಂಬಿಎ ಪದವೀಧರರು ಅರ್ಜಿ ಸಲ್ಲಿಸಲು ಅರ್ಹ. ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 30. ಮೀಸಲು ವರ್ಗದವರಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ.

ಅರ್ಜಿ ಸಲ್ಲಿಸಲು ಸಾಮಾನ್ಯ, ಒಬಿಸಿ ವರ್ಗದವರಿಗೆ ₹850 ಹಾಗೂ ಎಸ್ಸಿ/ಎಸ್ಟಿ, ಅಂಗವಿಕಲ, ಮಹಿಳೆಯರಿಗೆ ₹175 ಶುಲ್ಕವಿದೆ. ವೇತನ ಶ್ರೇಣಿ ಬೇರೆ ಬೇರೆ ಹುದ್ದೆಗಳಿಗೆ ಬೇರೆ ಬೇರೆ ರೀತಿ ಇರುತ್ತದೆ.

ಏಪ್ರಿಲ್ನಲ್ಲಿ ಪರೀಕ್ಷೆ ಹಾಗೂ ಸಂದರ್ಶನ ನಿಗದಿಯಾಗಿದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ) ಮತ್ತು ಸಂದರ್ಶನ ಮೂಲಕ ನೇಮಕಾತಿ ನಡೆಯಲಿದೆ.

ಕರ್ನಾಟಕದ ಅಭ್ಯರ್ಥಿಗಳಿಗೆ ಬೆಂಗಳೂರು, ಹುಬ್ಬಳ್ಳಿ, ಧಾರವಾಡ ಹಾಗೂ ಮಂಗಳೂರಿನಲ್ಲಿ ಪರೀಕ್ಷೆಗಳು ನಡೆಯಲಿವೆ.

ಆಸಕ್ತ ಅಭ್ಯರ್ಥಿಗಳು ಬ್ಯಾಂಕಿನ ವಿವರವಾದ ಅಧಿಸೂಚನೆ ಪರಿಶೀಲಿಸಿ https://centralbank.bank.in/en/recruitments ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.

‘ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ’ ಬಗ್ಗೆ

ವಾಣಿಜ್ಯ ನಗರಿ ಮುಂಬೈನಲ್ಲಿ 1911 ರಲ್ಲಿ ಸ್ಥಾಪನೆಯಾಗಿರುವ ‘ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ’ ಭಾರತದವರೇ ಸಂಪೂರ್ಣ ಮಾಲೀಕತ್ವ ಹೊಂದಿದ ಭಾರತದ ಮೊದಲ ವಾಣಿಜ್ಯ ಬ್ಯಾಂಕ್ ಆಗಿದೆ. 1969 ರಲ್ಲಿ ರಾಷ್ಟ್ರೀಕರಣಗೊಂಡಿದೆ. ಭಾರತದಲ್ಲಿ ಮೊದಲ ಬಾರಿಗೆ ಕ್ರೆಡಿಟ್ ಕಾರ್ಡ್ಗಳನ್ನು ಪರಿಚಯಿಸಿದ ಬ್ಯಾಂಕ್ಗಳ ಸಾಲಿಗೆ ಇದು ಸೇರಿದೆ.
.ಎಐನಿಂದ ಉದ್ಯೋಗ ಕಡಿತದ ಆತಂಕ: ಕೋವಿಡ್ಗಿಂತಲೂ ಭೀಕರ! ಇದು ಅಲೆಯಲ್ಲ ಚಂಡಮಾರುತ!.ಪದವಿ ಪಾಸಾದವರಿಗೆ ಪ್ಯಾರಾಮಿಲಿಟರಿ ಪಡೆಗಳಲ್ಲಿ 349 ಅಸಿಸ್ಟಂಟ್ ಕಮಾಂಡೆಂಟ್ ಹುದ್ದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.