ಮಂಗಳವಾರ, ಮೇ 24, 2022
27 °C
ಗ್ರೂಪ್-ಸಿ ತಾಂತ್ರಿಕೇತರ ಹುದ್ದೆ

ಗ್ರೂಪ್-ಸಿ ತಾಂತ್ರಿಕೇತರ ಹುದ್ದೆ: ಕರ್ನಾಟಕದ ಸಾಂಸ್ಕೃತಿಕ ಇತಿಹಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕರ್ನಾಟಕ ಲೋಕಸೇವಾ ಆಯೋಗವು ಗ್ರೂಪ್ ಸಿ ವೃಂದದ ತಾಂತ್ರಿಕೇತರ ಹುದ್ದೆಗಳಿಗೆ ನಡೆಸಲಿರುವ ಸ್ಪರ್ಧಾತ್ಮಕ ಪರೀಕ್ಷೆಯ ಹಿನ್ನೆಲೆಯಲ್ಲಿ ಸಾಮಾನ್ಯ ಜ್ಞಾನ ವಿಭಾಗದಲ್ಲಿ ಸಾಂಸ್ಕೃತಿಕ ಇತಿಹಾಸ ವಿಷಯದ ಕುರಿತಾದ ಬಹುಆಯ್ಕೆ ಪ್ರಶ್ನೆಗಳು.

1. ಕನ್ನಡ ನಾಡಿನ ದೊರೆ 2ನೇ ಪುಲಕೇಶಿಯ ಕಾಲದಲ್ಲಿ ಅಜಂತಾ ಗುಹೆಗಳಲ್ಲಿರುವ ಕಲಾವೈಭವದ ಕುರಿತು _________________ ಅವರು ಈಸ್ಟ್ ಇಂಡಿಯಾ ಕಂಪನಿಯ ಗಮನ ಸೆಳೆದರು.

ಎ. ಜೇಮ್ಸ್ ಫರ್ನಾಂಡಿಸ್

ಬಿ. ಜೇಮ್ಸ್ ಫರ್ಗುಸನ್

ಸಿ. ರಾಬರ್ಟ್ ಸೀಲ್

ಡಿ. ಮೇಲಿನ ಯಾರೂ ಅಲ್ಲ

ಉತ್ತರ: ಬಿ

2. ಕೆಳಗಿನ ಹೇಳಿಕೆಗಳನ್ನು ಗಮನಿಸಿ

1. ಸಂಸ್ಕೃತಿ ಮತ್ತು ಕಲ್ಚರ್ ಎಂಬುದರ ಹಿಂದಿರುವ ಅರ್ಥ ಒಂದೇ ಆಗಿತ್ತು. ಅವೆರಡರ ಅರ್ಥವು ಗೌರವಿಸು, ಆಧರಿಸು, ಸೇವೆ ಮಾಡು ಎಂಬುದಾಗಿತ್ತು. ದೈವ ಭಕ್ತಿಯನ್ನು ಆಧರಿಸು, ಅದನ್ನು ಗೌರವಿಸು, ದೇವರ ಸೇವೆ ಮಾಡು ಎಂಬುದಾಗಿದೆ. ಅದೇ ಮುಂದುವರಿದು ಭೂತಾಯಿಯನ್ನು, ಪ್ರಕೃತಿಯನ್ನು ಆರಾಧಿಸು ಎಂಬರ್ಥದಲ್ಲಿಯೂ ಬಳಕೆಯಾಗಿ ಜೀವನದ ಭಾಗವಾಗಿ ಆಚರಣೆಗೂ ಬಂತು.

2. ನಮ್ಮ ಜೀವನದಲ್ಲಿ ಸ್ಥಾಪಿತವಾದ ವಿವಿಧ ವ್ಯವಸ್ಥೆಗಳಾದ ದೇವಾಲಯ, ಅಲ್ಲಿ ನಡೆಯುವ ಪೂಜೆ– ಪುನಸ್ಕಾರ, ಅದಕ್ಕಾಗಿ ಕಟ್ಟಲಾದ ಬೃಹತ್ ಮಂದಿರ, ಅದಕ್ಕೆ ಬಳಸಿದ ಶಿಲ್ಪ-ವಾಸ್ತುಶಿಲ್ಪ (ಆರ್ಕಿಟೆಕ್ಚರ್), ಚಿತ್ರಕಲೆ, ಸಂಗೀತ, ನಾಟ್ಯ, ಜನಪದ ಗೀತೆ ಈ ಮೊದಲಾದವೇ ಸಂಸ್ಕೃತಿಯಾಯಿತು.

3. ಏಕ ದೇವರು, ಏಕ ಗ್ರಂಥ ಎನ್ನದೇ ಬಹುತ್ವದಲ್ಲಿ ನಂಬಿಕೆ ಇಟ್ಟಿರುವುದು ನಮ್ಮ ಸಂಸ್ಕೃತಿಯ ವಿಶೇಷತೆ. ಹೀಗಾಗಿ ಬಹುದೇವತಾರಾಧನೆಯನ್ನು ನಮ್ಮ ಸಂಸ್ಕೃತಿಯಲ್ಲಿ ನೋಡಬಹುದು. ಕೇವಲ ದೇವತಾರಾಧನೆ ಮಾತ್ರವಲ್ಲ, ಪ್ರಗತಿಪರವಾದ ಎಲ್ಲವನ್ನೂ ಮನ್ನಣೆ ನೀಡಿ ಗೌರವಿಸುವುದು ಹಾಗೂ ಅದನ್ನು ತನ್ನದಾಗಿಸಿಕೊಂಡು ಜೀರ್ಣಿಸಿಕೊಳ್ಳುವುದು ನಮ್ಮ ನಾಡಿನ ಸಂಸ್ಕೃತಿಯ ಭಾಗವಾಗಿದೆ.

4. ವಿನ್ಸಂಟ್‌ ಸ್ಮಿತ್ ಅವರ ‘ಹಿಸ್ಟರಿ ಆಫ್ ಫೈನ್ ಆರ್ಟ್: ಇಂಡಿಯಾ ಮತ್ತು ಸಿಲೋನ್’ ಪುಸ್ತಕದಲ್ಲಿಯೂ ಕರ್ನಾಟಕದ ಸಂಸ್ಕೃತಿಯ ಬಗ್ಗೆ ವಿವರವಾಗಿ ಬರೆದಿದ್ದಾರೆ.

ಮೇಲಿನ ಹೇಳಿಕೆಗಳಲ್ಲಿ ಯಾವೆಲ್ಲಾ ಹೇಳಿಕೆಗಳು ಸರಿಯಾಗಿವೆ?

ಎ. ಹೇಳಿಕೆ 2, 3 ಮತ್ತು 4ರ ಮಾತ್ರ ಸರಿಯಾಗಿದೆ

ಬಿ. ಹೇಳಿಕೆ 1, 3 ಮತ್ತು 4 ಮಾತ್ರ ಸರಿಯಾಗಿದೆ

ಸಿ. ಹೇಳಿಕೆ 1 ರಿಂದ 4ರ ತನಕ ಎಲ್ಲವೂ ಸರಿಯಾಗಿದೆ

ಡಿ. ಮೇಲಿನ ಯಾವ ಹೇಳಿಕೆಯೂ ಸರಿಯಾಗಿಲ್ಲ.

ಉತ್ತರ: ಸಿ

3. ನಮ್ಮ ಕನ್ನಡ ನಾಡಿನ ಬಾದಾಮಿ ಚಾಲುಕ್ಯರ ದೊರೆ 2ನೇ ಪುಲಕೇಶಿಯ ಕಾಲದ ಅಜಂತಾ ಗುಹೆಗಳಲ್ಲಿರುವ ಕಲಾವೈಭವದ ಬಗ್ಗೆ ಈಸ್ಟ್ ಇಂಡಿಯಾ ಕಂಪನಿಯ ಗಮನಕ್ಕೆ ಬಂದ ಪರಿಣಾಮ 1843ರಲ್ಲಿ ಈಸ್ಟ್ ಇಂಡಿಯಾ ಕಂಪನಿಯು ………… ಎಂಬ ಕಲಾವಿದನನ್ನು ಅವುಗಳ ಅಧ್ಯಯನಕ್ಕಾಗಿ ಕಳುಹಿಸಿಕೊಟ್ಟಿತು. ಅಲ್ಲಿ 1857ರ ತನಕ ಅವನ ಕೆಲಸ ನಡೆಯಿತು. ಮುಂದೆ ಗ್ರಿಫಿತ್ಸ್ ಎಂಬುವವರು ಕೆಲಸವನ್ನು ವಹಿಸಿಕೊಂಡರು.

ಎ. ಮೇಜರ್ ಗಿಲ್       

ಬಿ. ಜೇಮ್ಸ್ ಫರ್ಗುಸನ್

ಸಿ. ಮೇಜರ್ ಬಕಸ್ಟ್ ರಾಕ್

ಡಿ. ಮೇಲಿನ ಯಾರೂ ಅಲ್ಲ

ಉತ್ತರ: ಎ

4. ಇಡೀ ಭಾರತದಲ್ಲಿ ಹಿಂದೂ ಪುರಾಣಗಳಿಗೆ ಸಂಬಂಧಿಸಿದ ಅತಿ ಪುರಾತನ ಚಿತ್ರಗಳು ಎಲ್ಲಿ ಸಿಕ್ಕಿವೆ?

ಎ. ಅಜಂತಾ 

ಬಿ. ತಾಡಪತ್ರಿ

ಸಿ. ಬಾದಾಮಿ

ಡಿ. ಲೇಪಾಕ್ಷಿ

ಉತ್ತರ: ಸಿ

5. ಬಾದಾಮಿಯ ವರ್ಣ ಚಿತ್ರಗಳಿಗೂ ಅಜಂತಾ ಚಿತ್ರಗಳಿಗೂ ವ್ಯತ್ಯಾಸವಿದೆ. ಹಾಗಾದರೆ ಅದನ್ನು ಗುರುತಿಸಿ.

ಎ. ಅಜಂತಾ ಚಿತ್ರಗಳು ಬೌದ್ಧ ಧರ್ಮದಿಂದ ಪ್ರೇರಿತವಾದರೆ, ಬಾದಾಮಿ ಚಿತ್ರಗಳು ಹಿಂದೂ ಧರ್ಮದ ಪುರಾಣಗಳ ಸನ್ನಿವೇಶಗಳಿಗೆ ಸಂಬಂಧಪಟ್ಟವು.

ಬಿ. ಅಜಂತಾ ಚಿತ್ರಗಳು ಹಿಂದೂ ಧರ್ಮದಿಂದ ಪ್ರೇರಿತವಾದರೆ, ಬಾದಾಮಿ ಚಿತ್ರಗಳು ಬೌದ್ಧ ಧರ್ಮದ ಜಾತಕ ಕಥೆಗಳ ಸನ್ನಿವೇಶಗಳಿಗೆ ಸಂಬಂಧಪಟ್ಟವು

ಸಿ. ಅಜಂತಾ ಚಿತ್ರಗಳು ಜೈನ ಧರ್ಮದಿಂದ ಪ್ರೇರಿತವಾದರೆ ಬಾದಾಮಿ ಚಿತ್ರಗಳು ಹಿಂದೂ ಧರ್ಮದ ಪುರಾಣಗಳ ಸನ್ನಿವೇಶಗಳಿಗೆ ಸಂಬಂಧಪಟ್ಟವು

ಡಿ. ಅಜಂತಾ ಚಿತ್ರಗಳು ಹಿಂದೂ ಧರ್ಮದಿಂದ ಪ್ರೇರಿತವಾದರೆ, ಬಾದಾಮಿ ಚಿತ್ರಗಳು ಚಾರ್ವಾಕ ಧರ್ಮದ ಕಥೆಗಳ ಸನ್ನಿವೇಶಗಳಿಗೆ ಸಂಬಂಧಪಟ್ಟವು

ಉತ್ತರ:ಎ

6. ಕೆಳಗಿನ ಹೇಳಿಕೆಗಳನ್ನು ಗಮನಿಸಿ

1. ಕದಂಬರ ರಾಜ ರವಿವರ್ಮ ತನ್ನ ಧಾರ್ಮಿಕ ಆಡಳಿತ ವ್ಯವಸ್ಥೆಗೆ ಜೈನ ವಿದ್ವಾಂಸ ಕುಮಾರದತ್ತನ ಸಲಹೆಯನ್ನು ಪಡೆಯುತ್ತಿದ್ದ. ಚೈತ್ರಮಾಸದಲ್ಲಿ ನಡೆಯುವ ಜೀನೇಂದ್ರ ಉತ್ಸವಕ್ಕೆ ವಸ್ತುಗಳನ್ನು ಮೊದಲಿನಿಂದಲೂ ಸಂಗ್ರಹಿಸಿಡಬೇಕೆಂದು ಆಜ್ಞೆಯನ್ನು ಮಾಡಿದ್ದ.

2. ಬನವಾಸಿಯಲ್ಲಿ ಹೀನಾಯಾನ ಮತ್ತು ಮಹಾಯಾನ ಬೌದ್ಧ ಪಂಗಡಗಳು ಅಸ್ತಿತ್ವದಲ್ಲಿದ್ದವು. ಬನವಾಸಿ ನಗರವೊಂದರಲ್ಲಿಯೇ 2 ಸಂಘಧಾಮಗಳು ಮೂರು ಸ್ತೂಪಗಳು ಇದ್ದವು. ಅಲ್ಲಿರುವ ಸಂಘಧಾಮದಲ್ಲಿ ಮೈತ್ರೇಯ ಬುದ್ಧನ ಅದ್ಭುತವಾದ ಗಂಧದ ಮರದ ವಿಗ್ರಹವೊಂದಿತ್ತು

3. ಕದಂಬಕಾಲದಲ್ಲಿ ಶಿವ ಪೂಜೆಯು ವೈದಿಕ ಪದ್ಧತಿಯಲ್ಲಿ ವಿಜೃಂಭಣೆಯಿಂದ ನಡೆಯುತ್ತಿದ್ದ ಬಗ್ಗೆ ತಾಳಗುಂದದ ಶಾಸನ ವಿವರಿಸುತ್ತದೆ. ಇದಲ್ಲದೇ ಪಾಶುಪಥ, ಕಾಪಾಲಿಕ ಮೊದಲಾದ ಶೈವ ಪಂಥಗಳು ಕದಂಬರ ಕಾಲದಲ್ಲಿದ್ದವು.

4. ಹಾನಗಲ್ಲು ಕದಂಬರ ಶಾಖೆಯಂತೂ ಸಂಪೂರ್ಣ ವೈಷ್ಣವಾವಂಬಿಯಾಗಿತ್ತು. ಹಾಂಗೆಂದು ಉಳಿದ ಧರ್ಮಾಚರಣೆಗೆ ಅಡ್ಡಿ ಇರಲಿಲ್ಲ. ಪ್ರಜೆಗಳಿಗೆ ಪೂಜೆ, ಆಚರಣೆ, ನಂಬಿಕೆಗಳಲ್ಲಿ ತಾವೇ ಸ್ವತಃ ಆಯ್ಕೆ ಮಾಡಿಕೊಳ್ಳಲು ಸ್ವಾತಂತ್ರ್ಯವಿತ್ತು.

ಮೇಲಿನ ಹೇಳಿಕೆಗಳಲ್ಲಿ ಯಾವೆಲ್ಲಾ ಹೇಳಿಕೆಗಳು ಸರಿಯಾಗಿವೆ?

ಎ. ಹೇಳಿಕೆ 1, 2 ಮತ್ತು 4 ಮಾತ್ರ ಸರಿಯಾಗಿದೆ

ಬಿ. ಹೇಳಿಕೆ 1, 3 ಮತ್ತು 4 ಮಾತ್ರ ಸರಿಯಾಗಿದೆ

ಸಿ. ಹೇಳಿಕೆ 1 ರಿಂದ 4ರತನಕ ಎಲ್ಲವೂ ಸರಿಯಾಗಿದೆ

ಡಿ. ಮೇಲಿನ ಯಾವ ಹೇಳಿಕೆಯೂ ಸರಿಯಾಗಿಲ್ಲ.

ಉತ್ತರ: ಸಿ

7. ಇವುಗಳಲ್ಲಿ ತಪ್ಪಾಗಿರುವುದನ್ನು ಗುರುತಿಸಿ

ಎ. ದೇವನಂದಿ - ಪಾಣಿನಿಯ ವ್ಯಾಕರಣ ಗ್ರಂಥಕ್ಕೆ ‘ಶಬ್ದಾವತಾರ’ ಎಂಬ ವ್ಯಾಖಾನ

ಬಿ. ದುರ್ವೀನಿತ - ಗುಣಾಢ್ಯನ ಬೃಹತ್ ಕಥೆ ಸಂಸ್ಕೃತದಲ್ಲಿ ರಚನೆ.

ಸಿ. ಶ್ರೀಪುರುಷ - ಸೇತುಬಂಧ ಗ್ರಂಥ ರಚನೆ.

ಡಿ. ಚಾವುಂಡರಾಯ- ತ್ರಿಷಷ್ಠಿ ಶಲಾಖಾ ಪುರುಷ ಪುರಾಣ ಗ್ರಂಥ ರಚನೆ

ಉತ್ತರ: ಸಿ (ವಿವರಣೆ: ಶ್ರೀಪುರುಷ- ಗಜಶಾಸ್ತ್ರ ಬರೆದಿದ್ದಾನೆ)

8. ವಿದೇಶಿ ಪ್ರವಾಸಿಗ ಡೊಮಿಂಗೋ ಪಯಾಸ್ ಹೇಳುವಂತೆ ವಿಜಯನಗರದ ಅರಮನೆಯ ಹೆಬ್ಬಾಗಿಲಿನ ಅಕ್ಕಪಕ್ಕದಲ್ಲಿ ಎರಡು ದೊಡ್ಡ ಪೂರ್ಣಾಕೃತಿಯ ಚಿತ್ರಗಳು ಇದ್ದವಂತೆ. ಅದರಲ್ಲಿ ಒಂದು ಕೃಷ್ಣದೇವರಾಯನದ್ದಾದರೆ ಮತ್ತೊಂದು _________________ ಚಿತ್ರವಾಗಿತ್ತಂತೆ.

ಎ. ಅವರ ತಂದೆಯವರ   

ಬಿ. ರಾಣಿಯರ

ಸಿ. ಆನೆಯ

ಡಿ. ವಿರೂಪಾಕ್ಷ ಸ್ವಾಮಿ ದೇವರ

ಉತ್ತರ: ಎ

9. ಕೆಳಗಿನ ಹೇಳಿಕೆಗಳನ್ನು ಗಮನಿಸಿ

1. ಕದಂಬರು ಕರ್ನಾಟಕದ ಶಿಲ್ಪಕಲೆಯ ಮೂಲ ಪುರುಷರೆನ್ನಬಹುದು. ಬನವಾಸಿ, ಹಲಸಿ, ತಾಳಗುಂದದಲ್ಲಿ ಇವರ ದೇವಾಲಯಗಳಿವೆ.

2. ಗೋವಾದ ಅರ್ವಾಲೆಂನಲ್ಲಿ ಕದಂಬರ ಕಾಲದ ಗುಹಾಲಯ ದೇವಾಲಯವಿದ್ದು ತ್ರಿಕೂಟ ದೇವಾಲಯವಾಗಿದೆ. ಸೂರ್ಯ, ಶಿವ, ಸ್ಕಂದನ ಪೂಜೆ ಇಲ್ಲಿ ನಡೆಯುತಿತ್ತು

3. ಕೋಲಾರಮ್ಮನ ಮಂದಿರ ಮತ್ತು ಅದರ ಮೇಲಿರುವ ಶಿಖರವು ಅಪ್ಪಟ ಗಂಗರ ಶೈಲಿಯದ್ದಾಗಿದೆ. ಚಾಮರಾಜನಗರದ ನರಸಮಂಗಲದ ರಾಮಲಿಂಗೇಶ್ವರ ದೇವಾಲಯದ ಶಿಖರದಲ್ಲಿ ಅತ್ಯುತ್ಕೃಷ್ಟ ಸುಟ್ಟ ಮಣ್ಣಿನ ಮೂರ್ತಿಗಳಿವೆ. ಅಲ್ಲದೇ ಶಿಲೆಯ ಸಪ್ತಮಾತೃಕಾ ಪ್ರತಿಮೆಗಳಿವೆ.

4. ಚಾವುಂಡರಾಯನು ಶ್ರವಣಬೆಳಗೊಳದಲ್ಲಿ 57 ಅಡಿ ಎತ್ತರದ ಗೊಮ್ಮಟೇಶ್ವರ ಮೂರ್ತಿಯನ್ನು ಕೆತ್ತಿಸಿದ್ದ ಮತ್ತು ಪ್ರತಿಷ್ಠಾಪಿಸಿದ್ದ. ಕಮಲದಲ್ಲಿ ನಿಂತಂತೆ ಬಿಳಿಯ ಬೆಣಚು ಕಲ್ಲಿನಿಂದ ಕೆತ್ತಲಾದ ಬೃಹತ್ ಗೊಮ್ಮಟೇಶ್ವರ ಮೂರ್ತಿಯೂ ಇತಿಹಾಸ ಪ್ರಸಿದ್ಧವಾದದ್ದು

ಮೇಲಿನ ಹೇಳಿಕೆಗಳಲ್ಲಿ ಯಾವೆಲ್ಲಾ ಹೇಳಿಕೆಗಳು ಸರಿಯಾಗಿವೆ?

ಎ. ಹೇಳಿಕೆ 1, 3 ಮತ್ತು 4 ಮಾತ್ರ ಸರಿಯಾಗಿದೆ

ಬಿ. ಹೇಳಿಕೆ 1 ರಿಂದ 4ರತನಕ ಎಲ್ಲವೂ ಸರಿಯಾಗಿದೆ

ಸಿ. ಹೇಳಿಕೆ 1 ರಿಂದ 3ರ ತನಕ ಮಾತ್ರ ಸರಿಯಾಗಿದೆ

ಡಿ. ಮೇಲಿನ ಯಾವ ಹೇಳಿಕೆಯೂ ಸರಿಯಾಗಿಲ್ಲ.

ಉತ್ತರ: ಬಿ

10. ಈಗ ಹಳ್ಳಿಯಾಗಿರುವ ಲೇಪಾಕ್ಷಿಯನ್ನು ವಿಜಯನಗರದ ಕಾಲದಲ್ಲಿ ವಿರುಪಣ್ಣ ನಾಯಕ ಹಾಗೂ ಆತನ ಸಹೋದರರು ಆಳುತ್ತಿದ್ದರು. ಇದನ್ನು ಹೀಗೂ ಕರೆದಿದ್ದಾರೆ

ಎ. ಶೈವರ ಅಜಂತಾ

ಬಿ. ವೈಷ್ಣವರ ಅಜಂತಾ

ಸಿ. ಜೈನ ಕಾಶಿ 

ಡಿ. ಬೌದ್ಧರ ಸನ್ನತಿ

ಉತ್ತರ: ಎ

11. ಕರ್ನಾಟಕದ ಸಾಂಸ್ಕೃತಿಕ ಇತಿಹಾಸಕ್ಕೆ ಸಂಬಂಧಿಸಿದಂತೆ ಕೆಳಗೆ ನೀಡಲಾದ ಪ್ಯಾರಾ ಓದಿ.

ಈ ಕಾಲದಲ್ಲಿ ಕೇವಲ ದೇವಾಲಯದ ಗೋಡೆಗಳ ಮೇಲಷ್ಟೇ ಅಲ್ಲ, ಪ್ರಕಟಿತ ಪುಸ್ತಕಗಳಲ್ಲಿಯೂ ಕೈಬರಹದ ಚಿತ್ರಗಳಿವೆ. ಉದಾ: ರಾಜರೊಬ್ಬರು ಬರೆದಿರುವ `ಶ್ರೀ ತತ್ವನಿಧಿ’ ಪುಸ್ತಕದಲ್ಲಿ ಬರುವ ಒಂದೊಂದು ಪುಟದಲ್ಲಿಯೂ ಶ್ಲೋಕಕ್ಕನುಗುಣವಾಗಿ ಚಿತ್ರಗಳನ್ನು ಬಿಡಿಸಲಾಗಿದೆ. ನಂಜುಂಡ ಕವಿಯು ಬಸವಣ್ಣನವರ ಜೀವನ ಗಾಥೆಯ ಬಗ್ಗೆ ಬರೆದಿರುವ ‘ವೃಷಭೇಂದ್ರ ವಿಳಾಸ’ ಎಂಬ ಯಕ್ಷಗಾನ ಕೃತಿಯಲ್ಲಿಯೂ ಅಸಂಖ್ಯಾತ ಚಿತ್ರಗಳಿವೆ. ಅಲ್ಲದೇ ಈ ಕಾಲದ ದೊರೆಯೊಬ್ಬರು ಬರೆದಿದ್ದಾರೆ ಎನ್ನಲಾದ ‘ಚದುರಂಗ ಚಕ್ರ’ ಎಂಬ ಆಟದ ಕ್ರೀಡಾಕೃತಿಯಲ್ಲಿಯೂ ಕೂಡಾ ಆಟದ ಬಗೆಗಿನ ವಿವಿಧ ಬಣ್ಣಗಳಿಂದ ಕೂಡಿದ ಚಿತ್ರವನ್ನು ನೋಡಬಹುದಾಗಿದೆ.

ಮೇಲೆ ವಿವರಿಸಿದ ಅಂಶಗಳು ಯಾರ ಕಾಲಕ್ಕೆ ಸಂಬಂಧಿಸಿದ್ದು?

ಎ. ಚಾಲುಕ್ಯರು

ಬಿ. ಮೈಸೂರಿನ ಒಡೆಯರು

ಸಿ. ವಿಜಯನಗರದ ಅರಸರು

ಡಿ. ಕೆಳದಿಯ ರಾಜರು

ಉತ್ತರ: ಬಿ (ವಿವರಣೆ:‘ಶ್ರೀ ತತ್ವನಿಧಿ’ ಮತ್ತು ‘ಚದುರಂಗ ಚಕ್ರ’ ಎಂಬ ಪುಸ್ತಕವನ್ನು ಮುಮ್ಮಡಿ ಕೃಷ್ಣರಾಜ ಒಡೆಯರ್ ಬರೆದಿದ್ದಾರೆ)

12. ಕೆಳಗಿನ ಹೇಳಿಕೆಗಳನ್ನು ಗಮನಿಸಿ

1. ಜೇಮ್ಸ್ ಫರ್ಗುಸನ್ ರಚಿಸಿದ ಕೃತಿಯ ಹೆಸರು `ಹಿಸ್ಟರಿ ಆಫ್ ಇಂಡಿಯನ್ ಆರ್ಕಿಟೆಕ್ಚರ್’. ಈ ಕೃತಿಯಲ್ಲಿ ಕರ್ನಾಟಕದ ವಾಸ್ತುಶಿಲ್ಪದ ವೈಭವವನ್ನು ನೋಡಬಹುದು.

2. 1874ರಲ್ಲಿ ಮುಂಬೈ ಸರ್ಕಾರವು ಪ್ರಾಚ್ಯ ಸಂಶೋಧನಾ ಇಲಾಖೆಯನ್ನು ಆರಂಭಿಸಿತು. ಅದು ಬಾದಾಮಿ, ಐಹೊಳೆ, ಪಟ್ಟದಕಲ್ಲು ಮುಂತಾದ ಸ್ಥಳಗಳ 56 ಚಿತ್ರಗಳುಳ್ಳ ವರದಿಯನ್ನು ಪ್ರಕಟಿಸಿತು.

3. 1896ರಲ್ಲಿ ಬಳ್ಳಾರಿ ಜಿಲ್ಲೆಯ ಚಾಲುಕ್ಯರ ಗುಡಿಗಳ ಬಗ್ಗೆ 115 ಪುಟಗಳ ವರದಿ ಪ್ರಕಟವಾಯಿತು.

4. ಚಿತ್ರಕಲೆಗೆ ಸಂಬಂಧಿಸಿದಂತೆ ಮೊದಲು ಸಂಶೋಧಿಸಿದವರು ಲಿಯೊನಾರ್ಥಮನ್ ಎಂಬುವವರು. ಇವರು ತೆಗೆದ ರಾಯಚೂರು ಜಿಲ್ಲೆಯ ಬೆನಕಲ್‌ಗುಡ್ಡೆಯಲ್ಲಿರುವ ಚಿತ್ರಗಳ ಪೋಟೊ ಲಂಡನ್ ಮ್ಯೂಜಿಯಂನಲ್ಲಿ ಸಂಗ್ರಹಿತವಾಗಿದೆ. ಈ ಚಿತ್ರವು ಇತಿಹಾಸ ಪೂರ್ವದ ಚಿತ್ರಗಳಾಗಿದ್ದವು

ಎ. ಹೇಳಿಕೆ 1, 2 ಮತ್ತು 4 ಮಾತ್ರ ಸರಿಯಾಗಿದೆ

ಬಿ. ಹೇಳಿಕೆ 1 ರಿಂದ 4ರ ತನಕ ಎಲ್ಲವೂ ಸರಿಯಾಗಿದೆ

ಸಿ. ಹೇಳಿಕೆ 1, 3 ಮತ್ತು 4 ಮಾತ್ರ ಸರಿಯಾಗಿದೆ

ಡಿ. ಮೇಲಿನ ಎಲ್ಲಾ ಹೇಳಿಕೆಗಳು ತಪ್ಪಾಗಿವೆ

ಉತ್ತರ: ಬಿ

ಮಾಹಿತಿ: Spardha Bharati UPSC ಯೂಟ್ಯೂಬ್‌ ಚಾನೆಲ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು