ಬುಧವಾರ, ಆಗಸ್ಟ್ 10, 2022
23 °C

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

ಭಾಗ -22

291. ನಿರ್ವಾತದಲ್ಲಿ ಬೆಳಕಿನ ವೇಗ ಸೆಕೆಂಡಿಗೆ ________ ರಷ್ಟು ಇರುತ್ತದೆ.

ಎ) 3 ಲಕ್ಷ ಕಿ.ಮೀ.

ಬಿ) 1.86 ಲಕ್ಷ ಕಿ.ಮೀ

ಸಿ) 3 ಸಾವಿರ ಕಿ.ಮೀ.

ಡಿ) 1.86 ಸಾವಿರ ಕಿ.ಮೀ

292. ಸಮುದ್ರದ ಆಳವನ್ನು ಈ ಸಾಧನದಿಂದ ಅಳೆಯುವರು

ಎ) ಆಲ್ಟಿಮೀಟರ್‌ 

ಬಿ) ಬಾರೋಮೀಟರ್

ಸಿ) ಬಾಥೋಮೀಟರ್‌ 

ಡಿ) ಕಲರಿಮೀಟರ್

293. ಕದಂಬರ ಎರಡನೇ ರಾಜಧಾನಿ ಯಾವುದಾಗಿತ್ತು?

ಎ) ಬನವಾಸಿ ಬಿ) ಹಲಸಿ

ಸಿ) ಹಾನಗಲ್‌  ಡಿ) ಶಿರಸಿ

294. ಸಾರ್ವತ್ರಿಕ ಮಾನವ ಹಕ್ಕುಗಳನ್ನು ಯಾವ ಸಂಸ್ಥೆಯು ಘೋಷಿಸಿತು?

ಎ) ವಿಶ್ವ ವ್ಯಾಪಾರ ಸಂಸ್ಥೆ

ಬಿ) ವಿಶ್ವ ಸಂಸ್ಥೆ ಸಿ) ಸಾರ್ಕ್

ಡಿ) ವಿಶ್ವ ಆರೋಗ್ಯ ಸಂಸ್ಥೆ

295. ಈ ಕೆಳಗಿನವುಗಳಲ್ಲಿ ಯಾವುದು ಅಪರಾಧವಾಗಿದೆ?

ಎ) ಸರ್ಕಾರದ ಆದೇಶವನ್ನು ನ್ಯಾಯಾಂಗದಲ್ಲಿ ಪ್ರಶ್ನಿಸುವುದು

ಬಿ) ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳನ್ನು
ರದ್ದುಪಡಿಸುವುದು

ಸಿ) ಅಸೃಶ್ಯತೆಯನ್ನು ಆಚರಿಸುವುದು

ಡಿ) ಮೂಲಭೂತ ಕರ್ತವ್ಯಗಳನ್ನು ಪಾಲಿಸದೇ ಇರುವುದು

296. ಇತ್ತೀಚೆಗೆ ‘ಹಾಲ್ ಆಫ್ ಫೇಮ್
ಲೆಜೆಂಡ್’ ಕ್ಲಬ್‌ಗೆ ಸೇರ್ಪಡೆಯಾದ
ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಯಾರು?

ಎ) ಸುನೀಲ್ ಗವಾಸ್ಕರ್

ಬಿ) ಕಪಿಲ್ ದೇವ್

ಸಿ) ಸಚಿನ್ ತೆಂಡೂಲ್ಕರ್

ಡಿ) ವಿನೂ ಮಂಕಡ್

297. ಮೇಡಂ ಮೇರಿ ಕ್ಯೂರಿಗೆ 2 ಬಾರಿ ನೊಬೆಲ್ ಪಾರಿತೋಷಕ ದೊರಕಿತು. ಅನುಕ್ರಮವಾಗಿ ಆ ವರ್ಷಗಳು ಯಾವುವು?

ಎ) 1900 ಮತ್ತು 1934

ಬಿ) 1911 ಮತ್ತು 1913

ಸಿ) 1903 ಮತ್ತು 1911

ಡಿ) 1900 ಮತ್ತು 1911

298. ಜರ್ಮನಿ ಪಾರ್ಲಿಮೆಂಟ್‌ನ ಹೆಸರೇನು?

ಎ) ಸೆನೆಟ್

ಬಿ) ಹೌಸ್ ಆಫ್ ಕಾಮನ್ಸ್

ಸಿ) ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್

ಡಿ) ಬುಂಡೇಸ್ಟಾಗ್

299. ಭಾರತದ ಸಂವಿಧಾನ ರಚನಾ ಸಮಿತಿಯ ಮೊದಲ ಸಭೆ ಈ ದಿನದಂದು ನಡೆಯಿತು.

ಎ) 26 ಜನವರಿ 1950

ಬಿ) 15 ಆಗಸ್ಟ್ 1947

ಸಿ) 26 ನವೆಂಬರ್ 1949

ಡಿ) 9 ಡಿಸೆಂಬರ್ 1946

300. ಸಂವಿಧಾನದ ರಚನೆಯ ಸಮಯದಲ್ಲಿ ಮೂಲಭೂತ ಹಕ್ಕುಗಳ ಸಮಿತಿಯ ಅಧ್ಯಕ್ಷರಾಗಿದ್ದವರು

ಎ) ಸರ್ದಾರ್ ವಲ್ಲಭಭಾಯಿ ಪಟೇಲ್

ಬಿ) ಜೆ.ಬಿ.ಕೃಪಲಾನಿ

ಸಿ) ಪ್ರೊ.ಎಚ್.ಜಿ.ಮುಖರ್ಜಿ

ಡಿ) ಬಿ.ಎನ್.ರಾಯ್

301. ಭಾರತದಲ್ಲಿ ನಿರ್ಮಾಣವಾದ ಮೊಟ್ಟಮೊದಲ ಚಲನಚಿತ್ರ ಯಾವುದು?

ಎ) ಆಲಂ ಆರಾ 

ಬಿ) ರಾಜ ಹರಿಶ್ಚಂದ್ರ

ಸಿ) ಸತಿ ಸುಲೋಚನಾ 

ಡಿ) ಕಿಸಾನ್ ಕನ್ಯಾ

302. BEFORE:BEERFO::TRIBAL: ?

ಎ) TLRAIB ಬಿ) RTLIAB

ಸಿ) TLARIB ಡಿ) TLRABI

303. ‘1857ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ ಎಂಬ ಗ್ರಂಥವನ್ನು ಬರೆದವರು ಯಾರು?

ಎ) ಶಾಮ್‌ಜಿ ಕೃಷ್ಣವರ್ಮ

ಬಿ) ವಿ.ಡಿ.ಸಾವರ್ಕರ್

ಸಿ) ಮದನ್ ಲಾಲ್ ಢಿಂಗ್ರಾ

ಡಿ) ಜತೀನ್‌ ದಾಸ್

304. ಬಟ್ಟೆ ತೊಳೆಯುವ ಯಂತ್ರದಲ್ಲಿ (ವಾಷಿಂಗ್ ಮಷಿನ್) ಬಟ್ಟೆ ಒಣಗಲು ಕಾರಣ

ಎ) ಗುರುತ್ವಾಕರ್ಷಣ ಬಲ

ಬಿ) ಕೇಂದ್ರಾಪಗಾಮಿ ಬಲ

ಸಿ) ಸ್ಥಿರವಿದ್ಯುತ್ ಬಲ

ಡಿ) ಕೇಂದ್ರಾಭಿಗಾಮಿ ಬಲ

ಭಾಗ 21ರ ಉತ್ತರಗಳು: 286. ಎ, 287. ಬಿ, 288. ಎ, 289. ಬಿ, 290.ಡಿ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು