ಬುಧವಾರ, ಆಗಸ್ಟ್ 10, 2022
23 °C

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾಗ– 17

225. ಒಂದು ಕೃಷಿ ಪ್ರದೇಶದಲ್ಲಿ ಒಂದೇ ಸಮಯದಲ್ಲಿ ಎರಡು-ಮೂರು ಬೆಳೆಗಳನ್ನು ಬೆಳೆಯುವುದನ್ನು ಏನೆಂದು ಕರೆಯುತ್ತಾರೆ?

ಎ) ಜೀವನಾಧಾರ ಬೆಳೆಗಾರಿಕೆ

ಬಿ) ನೆಲದ ಉಪಯೋಗದ ಬೆಳೆಗಾರಿಕೆ

ಸಿ) ವಾಣಿಜ್ಯ / ಮಿಶ್ರ ಬೆಳೆಗಾರಿಕೆ

ಡಿ) ಪರಿಶ್ರಮಪೂರ್ಣ ಬೆಳೆಗಾರಿಕೆ

226. ಈ ಕೆಳಗಿನವುಗಳಲ್ಲಿ ಯಾವುದನ್ನು ವಾಣಿಜ್ಯ ಬೆಳೆ ಎಂದು ಕರೆಯುತ್ತಾರೆ?

ಎ) ಗೋಧಿ

ಬಿ) ರಾಗಿ

ಸಿ) ಜೋಳ

ಡಿ) ಕಬ್ಬು

227. ವಾತಾವರಣದಲ್ಲಿ ‘ಓಝೋನ್’ ಮಹತ್ವವೇನು?

ಎ) ಭೂಮಿಯ ಮೇಲೆ ಅದು ಹಸಿರು ಮನೆ ಪರಿಣಾಮ ಉಂಟುಮಾಡುತ್ತದೆ

ಬಿ) ನ್ಯೂಕ್ಲಿಯಸ್‌ಗಳನ್ನು ಘನೀಕರಿಸುತ್ತದೆ

ಸಿ) ಅಲ್ಟ್ರಾ ವೈಲೆಟ್ ಕಿರಣಗಳಿಂದ ಭೂಮಿಗೆ ರಕ್ಷಣೆ ನೀಡುತ್ತದೆ

ಡಿ) ನೀಲಿ ಬೆಳಕನ್ನು ಚದುರಿಸಲು ಸಹಾಯ ಮಾಡುತ್ತದೆ

228. ‘ಸೈಬರ್ ಕ್ರೈಂ’ ಎಂದರೆ, ನೀವು ಏನೆಂದು ಅರ್ಥ ಮಾಡಿಕೊಂಡಿದ್ದೀರಾ?

ಎ) ಸೈಬರ್ ಕೆಫೆಯಲ್ಲಿ ನಡೆಯುವ ಕೊಲೆ

ಬಿ) ಕಂಪ್ಯೂಟರ್ ಅಥವಾ ಮೊಬೈಲ್ ಮೂಲಕ ಅಪರಾಧ ಕೃತ್ಯ ಎಸಗುವುದು

ಸಿ) ಕಂಪ್ಯೂಟರ್‌ ಸೆಂಟರ್‌ನಲ್ಲಿ ನಡೆಯುವ ಹಣದ ಕಳವು

ಡಿ) ಸೈಬರ್ ಕೆಫೆ ಎದುರು ನಡೆಯುವ ವಾಹನ ಕಳವು

229. ‘ಹುತ್ತರಿ’ ಕರ್ನಾಟಕದ ಯಾವ ಭಾಗದ ಪ್ರಸಿದ್ಧ ಹಬ್ಬ?

ಎ) ಕೊಡಗು

ಬಿ) ಮೈಸೂರು

ಸಿ) ಕಲಬುರ್ಗಿ

ಡಿ) ಹಾವೇರಿ

230. ನಾಗಾಲ್ಯಾಂಡ್‌ ರಾಜ್ಯದ ರಾಜಧಾನಿ ಯಾವುದು?

ಎ) ಕೋಹಿಮಾ

ಬಿ) ಅಗರ್ತಲ

ಸಿ) ಇಂಫಾಲ

ಡಿ) ಡಿಸ್ಪುರ

231. ‘ಕರ್ನಾಟಕ ಪೊಲೀಸ್ ಅಕಾಡೆಮಿ’ ಯಾವ ಊರಿನಲ್ಲಿ ಇದೆ?

ಎ) ಮೈಸೂರು

ಬಿ) ಬೆಂಗಳೂರು

ಸಿ) ಗಂಗಿಬಾವಿ

ಡಿ) ಬೆಳಗಾವಿ

232. ಈ ಸರಣಿಯಲ್ಲಿ ತಪ್ಪಾಗಿರುವ ಸಂಖ್ಯೆಯನ್ನು ತಿಳಿಸಿರಿ 2, 5, 10, 50, 500, 5000

ಎ) 5000

ಬಿ) 500

ಸಿ) 10

ಡಿ) 50

233. ಒಂದು ಚಿನ್ನದ ಬ್ರೇಸ್ಲೆಟ್ ಅನ್ನು ₹ 14,500 ಕ್ಕೆ ಮಾರಿದಾಗ ಶೇ 20 ರಷ್ಟು ನಷ್ಟ ಉಂಟಾಗುತ್ತದೆ. ಹಾಗಿದ್ದಲ್ಲಿ ಬ್ರೇಸ್ಲೆಟ್‌ನ ಮೂಲಬೆಲೆ ಏನು?

ಎ) ₹ 18,125

ಬಿ) ₹ 17,400

ಸಿ) ₹ 15,225

ಡಿ) ₹ 16,600

234. ಸೈನಾ ನೆಹ್ವಾಲ್‌ ಯಾವ ಕ್ರೀಡೆಯಲ್ಲಿ ಪ್ರಸಿದ್ಧಿ ಹೊಂದಿದ್ದಾರೆ?

ಎ) ಟೆನಿಸ್

ಬಿ) ಬ್ಯಾಡ್ಮಿಂಟನ್

ಸಿ) ಟೇಬಲ್ ಟೆನಿಸ್

ಡಿ) ಕುಸ್ತಿ

235. ಜಾಗತಿಕ ಜನಸಂಖ್ಯಾ ದಿವಸವನ್ನು ಯಾವತ್ತು ಆಚರಿಸುತ್ತಾರೆ?

ಎ) ಪ್ರತಿವರ್ಷ 14ನೇ ಜುಲೈ

ಬಿ) ಪ್ರತಿವರ್ಷ 18ನೇ ಜುಲೈ

ಸಿ) ಪ್ರತಿವರ್ಷ 11ನೇ ಜುಲೈ

ಡಿ) ಪ್ರತಿವರ್ಷ 27ನೇ ಜುಲೈ

236. ಲಿಂಗಾನುಪಾತ ಎಂದರೆ

ಎ) ಜಗತ್ತಿನ ಒಟ್ಟು ಜನಸಂಖ್ಯೆ ಮತ್ತು ದೇಶದ ಒಟ್ಟು ಜನಸಂಖ್ಯೆಯ ನಡುವಿನ ಅನುಪಾತ

ಬಿ) ದೇಶದ ಒಟ್ಟು ಜನಸಂಖ್ಯೆ ಮತ್ತು ರಾಜ್ಯದ ಒಟ್ಟು ಜನಸಂಖ್ಯೆಯ ನಡುವಿನ ಅನುಪಾತ

ಸಿ) ವಯಸ್ಸಾದವರ ಮತ್ತು ಯುವಕರ ನಡುವಿನ ಅನುಪಾತ

ಡಿ) ಪುರುಷರ ಮತ್ತು ಮಹಿಳೆಯರ ಜನಸಂಖ್ಯೆಯ ನಡುವಿನ ಅನುಪಾತ

237. ‘ಮೆಗಲೋಪೊಲೀಸ್’ ಎಂಬುದು ಒಂದು ಗ್ರೀಕ್ ಭಾಷೆಯ ಪದ. ಅದರ ಅರ್ಥವೇನು?

ಎ) ಮಹಾನ್ ಪೊಲೀಸ್‌ (ಗ್ರೇಟ್ ಪೊಲೀಸ್)

ಬಿ) ಮಹಾನಗರ (ಗ್ರೇಟ್ ಸಿಟಿ)

ಸಿ) ಮಹಾ ರಾಜಕಾರಣಿ (ಗ್ರೇಟ್ ಪೊಲಿಟಿಷಿಯನ್)

ಡಿ) ಮಹಾರಾಜರ ಭದ್ರತಾ ಪಡೆ (ಗಾರ್ಡ್ ಆಫ್ ಗ್ರೇಟ್ ಕಿಂಗ್)

238. HDI ಇದರ ವಿಸ್ತೃತ ರೂಪವೇನು?

ಎ) ಹ್ಯೂಮನ್ ಡೆವಲಪ್‌ಮೆಂಟ್ ಇಂಡೆಕ್ಸ್

ಬಿ) ಹ್ಯೂಮನ್ ಡೆವಲಪ್‌ಮೆಂಟ್ ಇನ್ ಇಂಡಿಯಾ

ಸಿ) ಹೆಲ್ತ್ ಡೆವಲಪ್‌ಮೆಂಟ್ ಇಂಡೆಕ್ಸ್

ಡಿ) ಹೆಲ್ತ್ ಡೆವಲಪ್‌ಮೆಂಟ್ ಇನ್ ಇಂಡಿಯಾ

239. ‘ಧರ್ಮಚಕ್ರ’ ಇದು ಯಾವ ಧರ್ಮದ ಸಂಕೇತ?

ಎ) ಜೈನ ಧರ್ಮ

ಬಿ) ಸಿಖ ಧರ್ಮ

ಸಿ) ಬುದ್ಧ ಧರ್ಮ

ಡಿ) ಪಾರ್ಸಿ ಧರ್ಮ

240. ‘ದೇವನಾಂಪ್ರಿಯ’ ಇದು ಯಾರ ಬಿರುದಾಗಿತ್ತು?

ಎ) ಅಶೋಕ

ಬಿ) ಚಂದ್ರಗುಪ್ತ ಮೌರ್ಯ

ಸಿ) ಬಿಂದುಸಾರ

ಡಿ) ಗೌತಮಿಪುತ್ರ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು