ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು 

Last Updated 27 ಜುಲೈ 2021, 3:46 IST
ಅಕ್ಷರ ಗಾತ್ರ

ಭಾಗ– 30

396. ಭಾರತದಲ್ಲಿ ಮೊದಲನೇ ಸಾರ್ವತ್ರಿಕ ಚುನಾವಣೆ ನಡೆದದ್ದು ಯಾವಾಗ?

ಎ) 1948

ಬಿ) 1950

ಸಿ) 1951

ಡಿ) 1952

397. ಭಾರತದ ಸಂವಿಧಾನದಲ್ಲಿ ಎಷ್ಟು ಶೆಡ್ಯೂಲ್‌ಗಳಿವೆ?

ಎ) 9 ಶೆಡ್ಯೂಲ್‌ಗಳು

ಬಿ) 10 ಶೆಡ್ಯೂಲ್‌ಗಳು

ಸಿ) 11 ಶೆಡ್ಯೂಲ್‌ಗಳು

ಡಿ) 12 ಶೆಡ್ಯೂಲ್‌ಗಳು

398. 2021 ನೇ ಫ್ರೆಂಚ್ ಓಪನ್ ಟೆನಿಸ್ ಪುರುಷರ ಸಿಂಗಲ್ಸ್‌ ಪ್ರಶಸ್ತಿಯನ್ನು ಗೆದ್ದವರು ಯಾರು?

ಎ) ಸ್ಟೆಫಾನೊಸ್ ಸಿಟ್ಸಿಪಾಸ್

ಬಿ) ರೋಜರ್ ಫೆಡರರ್

ಸಿ) ರಫೇಲ್ ನಡಾಲ್

ಡಿ) ನೊವಾಕ್ ಡಿ. ಜೊಕೊವಿಚ್‌

399. + ಅಂದರೆ ÷, × ಅಂದರೆ -, ÷ ಅಂದರೆ +, - ಅಂದರೆ × ಹಾಗಾದರೆ 16÷8×6-2÷12=?

ಎ) 22

ಬಿ) 24

ಸಿ) 23

ಡಿ) 20

400. ‘ಆಗಾ ಖಾನ್ ಕಪ್’ ಯಾವ ಕ್ರೀಡೆಗೆ ಸಂಬಂಧಿಸಿದೆ?

ಎ) ಹಾಕಿ

ಬಿ) ಕ್ರಿಕೆಟ್

ಸಿ) ಬ್ಯಾಡ್ಮಿಂಟನ್

ಡಿ) ಗಾಲ್ಫ್

401. ‘ಸಾವಿರ ಹಾಡುಗಳ ಸರದಾರ’ ಎಂದು ಹೆಸರಾದವರು ಯಾರು?

ಎ) ಜಿ.ವಿ.ಅಯ್ಯರ್

ಬಿ) ಬಾಳಪ್ಪ ಹುಕ್ಕೇರಿ

ಸಿ) ಟಿ.ಪಿ.ಕೈಲಾಸಂ

ಡಿ) ಎಂ.ವೆಂಕಟ ಕೃಷ್ಣಯ್ಯ

402. ಪ್ರಸಿದ್ಧ ಗಿರಿಧಾಮ ‘ನಂದಿಬೆಟ್ಟ’ ಯಾವ ಸ್ಥಳದಲ್ಲಿದೆ?

ಎ) ಕೆಮ್ಮಣ್ಣುಗುಂಡಿ

ಬಿ) ಚಿಕ್ಕಬಳ್ಳಾಪುರ

ಸಿ) ಬೇಲೂರು

ಡಿ) ಕೊಡಗು

403. ಜಾನಪದ ವಸ್ತುಸಂಗ್ರಹಾಲಯ ಇರುವ ಸ್ಥಳ

ಎ) ಮೈಸೂರು

ಬಿ) ಜೈಪುರ (ರಾಜಸ್ಥಾನ)

ಸಿ) ಹೈದರಾಬಾದ್

ಡಿ) ಪಟಿಯಾಲಾ

404. ಈ ಕೆಳಗಿನವುಗಳಲ್ಲಿ ಯಾವುದನ್ನು ‘ಕಪ್ಪು ಗುಡಿಗಳ ಗೋಪುರ’ ಎಂದು ಕರೆಯುತ್ತಾರೆ?

ಎ) ಮೀನಾಕ್ಷಿ ದೇವಾಲಯ (ಮಧುರೈ)

ಬಿ) ತಿರುಪತಿ ದೇವಾಲಯ (ಆಂಧ್ರಪ್ರದೇಶ)

ಸಿ) ಸೂರ್ಯ ದೇವಾಲಯ (ಕೋನಾರ್ಕ್)

ಡಿ) ಅಕ್ಷರಧಾಮ ದೇವಾಲಯ (ಗುಜರಾತ್)

405. ಒಬ್ಬ ವ್ಯಾಪಾರಿಯು ಒಂದು ಕುರ್ಚಿಯನ್ನು ₹ 80ಕ್ಕೆ ಕೊಂಡುಕೊಂಡು ಅದನ್ನು
₹ 96ಕ್ಕೆ ಮಾರಿದರೆ ಅವನಿಗೆ ಲಭಿಸಿದ ಶೇ. ಲಾಭವೆಷ್ಟು?

ಎ) ಶೇ 16

ಬಿ) ಶೇ 20

ಸಿ) ಶೇ 25

ಡಿ) ಶೇ 15

406. ಈ ಅನುಕ್ರಮದಲ್ಲಿ ಮುಂದಿನ ಸಂಖ್ಯೆ ಯಾವುದು?

25, 16, 9, ?

ಎ) 4

ಬಿ) 5

ಸಿ) 2

ಡಿ) 3

407. ಕೇಂದ್ರ ಶಾಸನಸಭೆಯ ಎರಡು ಅಧಿವೇಶನಗಳ ನಡುವಿನ ಗರಿಷ್ಠ ಕಾಲಮಿತಿ ಎಷ್ಟು?

ಎ) 4 ತಿಂಗಳು

ಬಿ) 6 ತಿಂಗಳು

ಸಿ) 5 ತಿಂಗಳು

ಡಿ) 3 ತಿಂಗಳು

408. ಲೋಕಸಭೆಯ ಪ್ರಥಮ ಮಹಿಳಾ ಸ್ಪೀಕರ್ ಯಾರು?

ಎ) ಪ್ರತಿಭಾ ಪಾಟೀಲ್

ಬಿ) ಸರೋಜಿನಿ ನಾಯ್ಡು

ಸಿ) ಉರ್ಮಿಳಾ ಸಿಂಗ್

ಡಿ) ಮೀರಾ ಕುಮಾರಿ

409. ‘ಬಸವ ಪ್ರಶಸ್ತಿ’ ಕರ್ನಾಟಕ ಸರ್ಕಾರ ನೀಡುವ ----- ಪ್ರಶಸ್ತಿಯಾಗಿರುತ್ತದೆ.

ಎ) ಪ್ರಾದೇಶಿಕ ಮಟ್ಟದ

ಬಿ) ರಾಷ್ಟ್ರ ಮಟ್ಟದ

ಸಿ) ರಾಜ್ಯ ಮಟ್ಟದ

ಡಿ) ಅಂತರರಾಷ್ಟ್ರೀಯ ಮಟ್ಟದ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT