786. 49 ವಿದ್ಯಾರ್ಥಿಗಳಿರುವ ಒಂದು ತರಗತಿಯಲ್ಲಿ ಶಿವಾನಂದ ಆರಂಭದಿಂದ 18ನೇ ಸ್ಥಾನದಲ್ಲಿದ್ದಾನೆ ಹಾಗಾದರೆ, ಇನ್ನೊಂದು ಬದಿಯಿಂದ ಶಿವಾನಂದ ಎಷ್ಟನೇ ಸ್ಥಾನದಲ್ಲಿದ್ದಾನೆ?
ಎ) 18→ಬಿ) 19
ಸಿ) 31→ಡಿ) 32
787. 4, 16, 36, 64, 100___ ಸರಣಿ ಪೂರ್ಣಗೊಳಿಸಿರಿ.
ಎ) 122→ಬಿ) 144
ಸಿ) 166→ಡಿ) 188
788. FLOWER:UOLDVI::TERMINAL: ...... ......
ಎ) FLIPMRZO→ಬಿ) GVINRMZO
ಸಿ) RVNIGLKA→ಡಿ) MNIVGYEO
789. ಒಂದು ತಿಂಗಳಿನ 3ನೇ ಸೋಮವಾರದ ನಂತರದ ದಿನ 16ನೇ ತಾರೀಖು ಆದರೆ, ಆ ತಿಂಗಳಿನ 5ನೇ ಸೋಮವಾರ ಎಷ್ಟನೇ ತಾರೀಖು ಆಗುತ್ತದೆ?
ಎ) 29→ಬಿ) 28
ಸಿ) 27→ಡಿ) 30
790. ಸೂರ್ಯನ ಹೊರ ಪದರ ಯಾವುದು?
ಎ) ಲಿಥೋಸ್ಪಿಯರ್→ಬಿ) ಕೊರೊನಾ
ಸಿ) ದ್ಯುತಿಗೋಳ→ಡಿ) ವರ್ಣತಂತು
791. ಸಾಮಾನ್ಯವಾಗಿ ಆಮ್ಲಗಳು ಈ ಗುಣ ಹೊಂದಿವೆ
ಎ) ಕಹಿ ರುಚಿಯನ್ನು ಹೊಂದಿವೆ
ಬಿ) ಹುಳಿ ರುಚಿಯನ್ನು ಹೊಂದಿವೆ
ಸಿ) ಸಿಹಿ ರುಚಿಯನ್ನು ಹೊಂದಿವೆ
ಡಿ) ಯಾವ ರುಚಿಯನ್ನು ಹೊಂದಿರುವುದಿಲ್ಲ
792. ಸೋಡಿಯಂ ಕಾರ್ಬೊನೇಟ್‌ನ ಸಾಮಾನ್ಯ ಹೆಸರು?
ಎ) ವಾಷಿಂಗ್ ಸೋಡಾ→ಬಿ) ಅಡುಗೆ ಸೋಡಾ
ಸಿ) ಅಡುಗೆ ಉಪ್ಪು→ಡಿ) ಸುಣ್ಣದ ಕಲ್ಲು
793. ಒಂದೇ ಸಂಖ್ಯೆಯ ಪ್ರೋಟಾನು, ಬೇರೆ ಬೇರೆ ಸಂಖ್ಯೆಯ ನ್ಯೂಟ್ರಾನ್‌ಗಳನ್ನು ಹೊಂದಿರುವ ಒಂದೇ ಧಾತುವಿನ ಪರಮಾಣುಗಳಿಗೆ ಏನೆನ್ನುತ್ತಾರೆ?
ಎ) ಸಮಸ್ಥಾನಿಗಳು→ಬಿ) ಸಮಭಾರಿ ರೇಖೆಗಳು
ಸಿ) ಸಮಸತ್ವಗಳು→ಡಿ) ಸಮಾಂಗಿಗಳು
794. ಈ ಕೆಳಗಿನ ಯಾವ ಮಾಧ್ಯಮದಲ್ಲಿ ಶಬ್ದದ ವೇಗ ಅಧಿಕವಾಗಿರುತ್ತದೆ?
ಎ) ಗಾಜು→ಬಿ) ಕಬ್ಬಿಣ
ಸಿ) ಗಾಳಿ→ಡಿ) ನೀರು
795. ಭಾರತ ಸಂವಿಧಾನದಲ್ಲಿ ಚುನಾವಣಾ ಆಯೋಗಗಳ ಕುರಿತು ಈ ಕೆಳಗಿನ ಯಾವ ಭಾಗದಲ್ಲಿ ವಿವರಿಸಲಾಗಿದೆ?
ಎ) 10ನೇ ಭಾಗ→ಬಿ) 15ನೇ ಭಾಗ
ಸಿ) 18ನೇ ಭಾಗ→ಡಿ) 20ನೇ ಭಾಗ
796. ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ಬಂದಾಗ ಭಾರತದ ಪ್ರಧಾನಿ ಆಗಿದ್ದವರು ಯಾರು?
ಎ) ಇಂದಿರಾ ಗಾಂಧಿ→ಬಿ) ರಾಜೀವ್ ಗಾಂಧಿ
ಸಿ) ವಿ.ಪಿ.ಸಿಂಗ್→ಡಿ) ಮೊರಾರ್ಜಿ ದೇಸಾಯಿ
797. ಕೇಂದ್ರ- ರಾಜ್ಯಗಳ ನಡುವೆ ಶಾಸನೀಯ ಅಧಿಕಾರವನ್ನು ಈ ಕೆಳಗಿನ ಯಾವ ಕಾಯ್ದೆ ವಿಭಜಿಸಿದೆ?
ಎ) ಭಾರತ ಸರ್ಕಾರ ಕಾಯ್ದೆ, 1935
ಬಿ) ಭಾರತ ಸರ್ಕಾರ ಕಾಯ್ದೆ, 1919
ಸಿ) ಭಾರತ ಸರ್ಕಾರ ಕಾಯ್ದೆ, 1892
ಡಿ) ಭಾರತ ಸರ್ಕಾರ ಕಾಯ್ದೆ, 1861
798. ಈ ಕೆಳಗಿನ ಯಾವುದು ದೇಶೀಯ ಸಾಹಿತ್ಯ ಕೃತಿ?
ಎ) ಗಾಥಾಸಪ್ತಶತಿ→ಬಿ) ರಾಜತರಂಗಿಣಿ
ಸಿ) ಪೃಥ್ವಿರಾಜ ರಾಸೋ→ಡಿ) ಇಂಡಿಕಾ
799. ವೇದಗಳು ಪ್ರಮುಖವಾಗಿ ಇವುಗಳ ಸಂಗ್ರಹವಾಗಿವೆ
ಎ) ಪ್ರಕೃತಿ ಆರಾಧನೆ
ಬಿ) ಯಾಗ-ಯಜ್ಞಾದಿಗಳು
ಸಿ) ಮಾಟವಿದ್ಯೆ
ಸಂಕೇತಗಳು:
ಎ) ಎ ಮಾತ್ರ ಸರಿ→ಬಿ) ಎ ಮತ್ತು ಸಿ ಸರಿ
ಸಿ) ಬಿ ಮಾತ್ರ ಸರಿ→ಡಿ) ಮೇಲಿನ ಎಲ್ಲವೂ ಸರಿ
800. ಬ್ಯಾಬಿಲೋನಿಯಾದ ತೂಗು ಉದ್ಯಾನವನ್ನು ಯಾವ ನದಿ ದಡದ ಮೇಲೆ ನಿರ್ಮಿಸಲಾಗಿತ್ತು?
ಎ) ಯುಫ್ರೆಟಿಸ್→ಬಿ) ಮೆಕಾಂಗ್
ಸಿ) ವೋಲ್ಗಾ→ಡಿ) ಡ್ಯಾನ್ಯೂಬ್
*****
ಭಾಗ 57ರ ಉತ್ತರಗಳು: 771. ಡಿ, 772. ಸಿ, 773. ಎ, 774. ಬಿ, 775. ಡಿ, 776. ಎ, 777. ಡಿ, 778. ಎ, 779. ಸಿ, 780. ಸಿ, 781. ಎ, 782. ಎ, 783. ಸಿ, 784. ಎ, 785. ಎ
(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.