ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

Last Updated 21 ಜೂನ್ 2021, 19:30 IST
ಅಕ್ಷರ ಗಾತ್ರ

ಭಾಗ– 10

126. ಭಾರತದ ಸಂವಿಧಾನದ 24ನೇ ವಿಧಿಯ ಪ್ರಕಾರ ಬಾಲ ಕಾರ್ಮಿಕರೆಂದರೆ ಎಷ್ಟು ವರ್ಷಕ್ಕಿಂತ ಕೆಳಗಿನವರು?

ಎ) 18 ವರ್ಷ

ಬಿ) 16 ವರ್ಷ

ಸಿ) 15 ವರ್ಷ

ಡಿ) 14 ವರ್ಷ

127. ನಮ್ಮ ಸಂವಿಧಾನದ ಯಾವ ವಿಧಿಯು ಅಸ್ಪೃಶ್ಯತಾ ಆಚರಣೆಯನ್ನು ತೊಡೆದು ಹಾಕಿದೆ?

ಎ) 19ನೆಯ ವಿಧಿ

ಬಿ) 20ನೆಯ ವಿಧಿ

ಸಿ) 17ನೆಯ ವಿಧಿ

ಡಿ) 21ನೆಯ ವಿಧಿ

128. ಕೆಳಗಿನ ರಾಷ್ಟ್ರಗಳ ಪೈಕಿ ಯಾವ ರಾಷ್ಟ್ರವು ಭಾರತದೊಂದಿಗೆ ಅತ್ಯಂತ ಉದ್ದನೆಯ ಗಡಿ ಹೊಂದಿದೆ?

ಎ) ಪಾಕಿಸ್ತಾನ

ಬಿ) ಭೂತಾನ್

ಸಿ) ನೇಪಾಳ

ಡಿ) ಚೀನಾ

129. ಹಿಮಾಲಯ ಪರ್ವತ ಶ್ರೇಣಿಯ ಪಶ್ಚಿಮದ ಗಡಿ ಯಾವುದು?

ಎ) ಮೌಂಟ್ ಎವರೆಸ್ಟ್‌

ಬಿ) ಪಾಮಿರ್

ಸಿ) ಕಾಂಚನಜುಂಗ

ಡಿ) ಇದ್ಯಾವುದೂ ಅಲ್ಲ

130. ಜನಾಂಗೀಯ ನಿಂದನೆ ಆರೋಪದಲ್ಲಿ ಕ್ರಿಕೆಟ್‌ನಿಂದ ಅಮಾನತುಗೊಂಡಿರುವ ಒಲಿ ರಾಬಿನ್‌ಸನ್ ಯಾವ ದೇಶದವರು?

ಎ) ಇಂಗ್ಲೆಂಡ್

ಬಿ) ನ್ಯೂಜಿಲೆಂಡ್

ಸಿ) ಐರ್ಲೆಂಡ್

ಡಿ) ವೆಸ್ಟ್ಇಂಡೀಸ್

131. ಬಾದಾಮಿಯಲ್ಲಿ ಗುಹಾಂತರ ದೇವಾಲಯಗಳನ್ನು ನಿರ್ಮಿಸಿದವರು ಯಾರು?

ಎ) ರಾಷ್ಟ್ರಕೂಟರು

ಬಿ) ಚೋಳರು

ಸಿ) ಪಲ್ಲವರು

ಡಿ) ಚಾಲುಕ್ಯರು

132. ಹೊಯ್ಸಳರ ರಾಜಧಾನಿ ಯಾವುದಾಗಿತ್ತು?

ಎ) ಮೈಸೂರು

ಬಿ) ಹಂಪಿ

ಸಿ) ದ್ವಾರಸಮುದ್ರ

ಡಿ) ಬಾದಾಮಿ

133. ಮಧ್ಯಕಾಲೀನ ಭಾರತದ ಮೊದಲ ಮುಸ್ಲಿಂ ಮಹಿಳಾ ಸಾಮ್ರಾಜ್ಞಿ ಯಾರು?

ಎ) ಮುಮ್ತಾಜ್ ಮಹಲ್

ಬಿ) ನೂರ್ ಜಹಾನ್

ಸಿ) ಜಹನಾರ ಬೇಗಂ

ಡಿ) ರಜಿಯಾ ಬೇಗಂ

134. ಚಕ್ರವರ್ತಿ ಅಕ್ಬರ್‌ನ ಮೂಲ ಹೆಸರು ಯಾವುದು?

ಎ) ಜಲಾಲ್-ಉದ್-ದೀನ್ ಮಹಮದ್

ಬಿ) ಹುಮಾಯೂನ್

ಸಿ) ಬೈರಂ ಖಾನ್

ಡಿ) ದಿವಾನ್-ಇ-ಅಲಿ

135. ಯಾರನ್ನು ಆಧುನಿಕ ಮೈಸೂರಿನ ಶಿಲ್ಪಿ ಎಂದು ಪರಿಗಣಿಸಲಾಗಿದೆ?

ಎ) ಸರ್ ಮಿರ್ಜಾ ಇಸ್ಮಾಯಿಲ್

ಬಿ) ಜೇಮ್ಸ್ ಗೋರ್ಡನ್

ಸಿ) ಸರ್‌ ಎಂ. ವಿಶ್ವೇಶ್ವರಯ್ಯ

ಡಿ) ದಿವಾನ್ ರಂಗಾಚಾರ್ಲು

136. AXB= C ಆಗಿದ್ದು, A=13 ಮತ್ತು C=0 ಆದರೆ, B ಯ ಬೆಲೆ ಏನಾಗಿರುತ್ತದೆ?

ಎ) 6

ಬಿ) 7

ಸಿ) 1

ಡಿ) 0

137. ಈ ಸರಣಿಯ ಮುಂದಿನ ಸಂಖ್ಯೆ ಯಾವುದು? 5, 12, 4, 13, 3, 14, ……?

ಎ) 15

ಬಿ) 2

ಸಿ) 1

ಡಿ) 6

138. ಪೋಖ್ರಾನ್ ಯಾವ ರಾಜ್ಯದಲ್ಲಿದೆ?

ಎ) ಗುಜರಾತ್

ಬಿ) ಹರಿಯಾಣ

ಸಿ) ರಾಜಸ್ಥಾನ

ಡಿ) ಪಂಜಾಬ್‌

139. ಲಕ್ಷದ್ವೀಪದ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವವರು ಯಾರು?

ಎ) ಕರಮ್‌ಬೀರ್‌ ಸಿಂಗ್

ಬಿ) ಅವನೀಶ್‌ ಕಪೂರ್

ಸಿ) ಪ್ರಫುಲ್ ಖೋಡಾ ಪಟೇಲ್‌

ಡಿ) ರಮಣ್‌ದೀಪ್‌

140. ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಪ್ರತಿ ದಿನದ ಕೂಲಿ ಎಷ್ಟು?

ಎ) ₹ 189

ಬಿ) ₹ 389

ಸಿ) ₹ 169

ಡಿ) ₹ 289ʼ

_________

ಭಾಗ– 9ರ ಉತ್ತರ

111. ಡಿ, 112. ಎ, 113. ಬಿ, 114. ಡಿ, 115. ಬಿ, 116. ಸಿ, 117. ಡಿ, 118. ಎ, 119. ಬಿ, 120. ಸಿ, 121. ಡಿ, 122. ಎ, 123. ಡಿ, 124. ಬಿ, 125. ಎ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT