ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: CA ಪರೀಕ್ಷೆಗಳ ದಿನಾಂಕ ಬದಲು

Published 20 ಮಾರ್ಚ್ 2024, 5:40 IST
Last Updated 20 ಮಾರ್ಚ್ 2024, 5:40 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ಪರೀಕ್ಷಾ ದಿನಾಂಕದಲ್ಲಿ ಬದಲಾವಣೆ ಮಾಡಿದೆ.

ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಗಳನ್ನು ಈ ಹಿಂದೆ ನಿರ್ಧರಿಸಿದಂತೆ ಮೇ ತಿಂಗಳಲ್ಲಿ ನಡೆಯಲಿದೆ.

ಆದರೆ, ಗ್ರೂಪ್ 1 ರ ಮಧ್ಯಂತರ ಕೋರ್ಸ್ ಪರೀಕ್ಷೆಯು ಈ ಮೊದಲು ನಿಗದಿಪಡಿಸಿದ್ದ ಮೇ 3, 5 ಮತ್ತು 7 ದಿನಾಂಕಗಳ ಬದಲಾಗಿ ಮೇ 3, 5 ಮತ್ತು 9 ರಂದು ನಡೆಯಲಿದೆ.

ಗ್ರೂಪ್‌ 2 ಪರೀಕ್ಷೆಯು ಮೇ 9, 11 ಮತ್ತು 13ರ ಬದಲಾಗಿ ಮೇ 11, 15 ಮತ್ತು 17ರಂದು ನಡೆಯಲಿದೆ. 

ಇನ್ನು ಫೈನಲ್‌ ಪರೀಕ್ಷೆಗಳ ದಿನಾಂಕವೂ ಬದಲಾಗಿದ್ದು, ಗ್ರೂಪ್‌ 1 ಫೈನಲ್‌ ಪರೀಕ್ಷೆಯು ಮೇ 2, 4 ಮತ್ತು 8 ರಂದು ನಡೆಯಲಿದೆ.  ಗ್ರೂಪ್ 2  ಫೈನಲ್‌ ಪರೀಕ್ಷೆಯನ್ನು ಮೇ 10, 14 ಮತ್ತು 16 ರಂದು ನಡೆಸಲಾಗುವುದು ಎಂದು ಹೇಳಿದೆ.

ಕೇಂದ್ರ ಸರ್ಕಾರ ಅಥವಾ ಯಾವುದೇ ರಾಜ್ಯ ಸರ್ಕಾರ–ಸ್ಥಳೀಯ ಪ್ರಾಧಿಕಾರವು ಸಾರ್ವಜನಿಕ ರಜೆ ಎಂದು ಘೋಷಿಸಿದರೆ, ಈಗ ತಿಳಿಸಲಾದ ಪರೀಕ್ಷಾ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಪ್ರಕಟಣೆ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT