ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾತ್ಮಕ ಪರೀಕ್ಷೆಯ ಮಾರ್ಗದರ್ಶಕ ‘ಮಾಸ್ಟರ್‌ಮೈಂಡ್‌’: ಡಾ. ಅಶ್ವತ್ಥ ನಾರಾಯಣ

Last Updated 3 ಅಕ್ಟೋಬರ್ 2021, 18:32 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಟ್‌’ ಪತ್ರಿಕಾ ಬಳಗವು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ನಡೆಸುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ಹೊರತಂದಿರುವ ‘ಮಾಸ್ಟರ್‌ ಮೈಂಡ್‌’ ಡಿಜಿಟಲ್ ಕೈಪಿಡಿಯನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಬಿಡುಗಡೆ ಮಾಡಿದರು.

‘ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿರುವ ಯುವಕರಿಗೆ ಈ ಪತ್ರಿಕೆ ನೆರವಾಗಲಿದೆ. ಯುಪಿಎಸ್‌ಸಿ, ಕೆಪಿಎಸ್‌ಸಿ, ಪಿಎಸ್‌ಐ, ಎಫ್‌ಡಿಎ, ಬ್ಯಾಂಕಿಂಗ್‌ ಸೇರಿದಂತೆ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಮಾಸ್ಟರ್‌ ಮೈಂಡ್‌ ಡಿಜಿಟಲ್ ಕೈಪಿಡಿ ಮಾರ್ಗದರ್ಶನ ನೀಡಲಿದೆ’ ಎಂದು ಅಶ್ವತ್ಥ ನಾರಾಯಣ ಹೇಳಿದರು.

‘ವಿಡಿಯೊ ಮತ್ತು ಲೇಖನಗಳ ಮೂಲಕ ಪ್ರಚಲಿತ ವಿಷಯಗಳು ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಎಲ್ಲ ಮಾಹಿತಿ ಲಭ್ಯವಾಗುವಂತೆ ಮಾಸ್ಟರ್‌ ಮೈಂಡ್‌ ರೂಪಿಸಿರುವುದು ಶ್ಲಾಘನೀಯ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಯುವಕರು ಯಶಸ್ಸು ಸಾಧಿಸಲು ವಿಶೇಷ ಪ್ರಯತ್ನ ಮಾಡಲಾಗಿದೆ’ ಎಂದು ಹೇಳಿದರು.

ಪರೀಕ್ಷಾ ಸಿದ್ಧತೆಗೆ ವಸ್ತುನಿಷ್ಠ ವಿಷಯಗಳು, ಪ್ರಚಲಿತ ವಿದ್ಯಮಾನ, ಸಾಮಾನ್ಯ ಜ್ಞಾನ, ಮಾನಸಿಕ ಸಾಮರ್ಥ್ಯ, ಭಾಷೆಯ ಅತ್ಯುನ್ನತ ಬಳಕೆ, ವಿಶ್ಲೇಷಣೆ, ಅಭಿಪ್ರಾಯ, ಸಂಪಾದಕೀಯ, ಪ್ರಬಂಧ ಮತ್ತು ಅನುವಾದ ಹಾಗೂ ಸಂದರ್ಶನಕ್ಕೆ ಸಹಾಯವಾಗುವ ಅಂಶಗಳನ್ನು ಮಾಸ್ಟರ್‌ ಮೈಂಡ್ ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT