ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾ ವಾಣಿ: ಪರೀಕ್ಷೆ ತಯಾರಿಗೆ ಪ್ರಚಲಿತ ಮಾಹಿತಿ

Published 17 ಏಪ್ರಿಲ್ 2024, 20:36 IST
Last Updated 17 ಏಪ್ರಿಲ್ 2024, 20:36 IST
ಅಕ್ಷರ ಗಾತ್ರ

‘ಭಾಷಾನೆಟ್’ ಪೋರ್ಟಲ್

ಭಾರತ ರಾಷ್ಟ್ರೀಯ ಇಂಟರ್ನೆಟ್ ವಿನಿಮಯ ಸಂಸ್ಥೆಯು ಮಾರ್ಚ್ 21ರಂದು ದೆಹಲಿಯ ಡಾ. ಅಂಬೇಡ್ಕರ್ ಇಂಟರ್‌ನ್ಯಾಷನಲ್‌ ಸೆಂಟರ್‌ನಲ್ಲಿ ನಡೆದ ಸಾರ್ವತ್ರಿಕ ಸ್ವೀಕಾರ ದಿನಾಚರಣೆಯ ಸಂದರ್ಭದಲ್ಲಿ ‘ಭಾಷಾನೆಟ್’ ಪೋರ್ಟಲ್‌ಗೆ ಚಾಲನೆ ನೀಡಿತು.

ಇದು ನಿಕ್ಸಿ  ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಜಂಟಿಯಾಗಿ ಆಯೋಜಿಸಿದ ಎರಡನೇ ಕಾರ್ಯಕ್ರಮವಾಗಿದೆ. ಸಾರ್ವತ್ರಿಕ ಸ್ವೀಕಾರ (ಯುಎ) ಮತ್ತು ದೇಶದಾದ್ಯಂತ ಡಿಜಿಟಲ್ ಒಳಗೊಳ್ಳುವಿಕೆಗೆ ಉತ್ತೇಜನ ನೀಡುವಲ್ಲಿ ಅವುಗಳ ಬದ್ಧತೆಯನ್ನು ಸೂಚಿಸುತ್ತದೆ. 

ಇಂಟರ್ನೆಟ್‌ ಹೆಸರು ಮತ್ತು ಸಂಖ್ಯೆಗಳನ್ನು ನೀಡುವ ಸಂಸ್ಥೆಯಾದ ಇಂಟರ್ನೆಟ್‌ ಕಾರ್ಪೋರೇಷನ್ ಫಾರ್ ಎಸೈನ್ಡ್ ನೇಮ್ಸ್ ಎಂಡ್ ನಂಬರ್ಸ್ (ICANN) ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಇಂಟರ್‌ನೆಟ್‌ ಆಡಳಿತ ವಿಭಾಗವು ಸಾರ್ವತ್ರಿಕ ಸ್ವೀಕಾರ ದಿನಕ್ಕೆ ತಮ್ಮ ಸಕ್ರಿಯ ಬೆಂಬಲವನ್ನು ನೀಡಿದವು.‌ ಎಲ್ಲಾ ವ್ಯಕ್ತಿಗಳು ತಮ್ಮ ಭಾಷೆ ಅಥವಾ ಲಿಪಿ ಯಾವುದೇ ಆಗಿದ್ದರೂ, ಡಿಜಿಟಲ್ ಪ್ರಪಂಚದಲ್ಲಿ ಸಂಪೂರ್ಣವಾಗಿ ಭಾಗವಹಿಸುವುದನ್ನು ಖಾತರಿಪಡಿಸುವುದು ನಿಕ್ಸಿಯ ಮೂಲ ಉದ್ದೇಶವಾಗಿದೆ.

ಭಾರತ ರಾಷ್ಟ್ರೀಯ ಇಂಟರ್ನೆಟ್ ವಿನಿಮಯ ಸಂಸ್ಥೆ (ನಿಕ್ಸಿ)

ಜೂನ್ 19, 2003ರಲ್ಲಿ ಸ್ಥಾಪಿತವಾದ ಭಾರತ ರಾಷ್ಟ್ರೀಯ ಇಂಟರ್ನೆಟ್ ವಿನಿಮಯ ಸಂಸ್ಥೆಯು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯಾಚರಿಸುವ ಲಾಭರಹಿತ (ಸೆಕ್ಷನ್ 8) ಕಂಪೆನಿಯಾಗಿದೆ.
ಅದರ ಪ್ರಾಥಮಿಕ ಉದ್ದೇಶವು ಇಂಟರ್ನೆಟ್ ವ್ಯವಸ್ಥೆಗಳನ್ನು ಬೇರೆಬೇರೆ ಹಂತಗಳಲ್ಲಿ ಬಳಸಲು ಮತ್ತು ನಿರ್ವಹಿಸಲು ಅಗತ್ಯವಾದ ವಿವಿಧ ಮೂಲಸೌಕರ್ಯಗಳನ್ನು ಸಾಧ್ಯ ಮಾಡಿ ಕೊಡುವುದರ ಮೂಲಕ ಭಾರತದಲ್ಲಿ ಇಂಟರ್ನೆಟ್‌ನ ವ್ಯಾಪಕತೆ ಮತ್ತು ಬಳಕೆಯನ್ನು ಹೆಚ್ಚಿಸುವುದು.

ನಿಕ್ಸಿಯು ನಾಲ್ಕು ಪ್ರಮುಖ ಸೇವೆಗಳು

1. ಸಂಪರ್ಕವನ್ನು ಸುಧಾರಿಸಲು ಇಂಟರ್ನೆಟ್ ವಿನಿಮಯ ಕೇಂದ್ರಗಳ ಸ್ಥಾಪನೆ.

2. ‘.in’ ಡೊಮೇನ್ ಹೆಸರುಗಳ ಡಿಜಿಟಲ್ ಗುರುತನ್ನು ಉತ್ತೇಜಿಸಲು ‘.in’ರಿಜಿಸ್ಟ್ರಿಯ ನಿರ್ವಹಣೆ,

3. IPv4 ಮತ್ತು IPv6 ವಿಳಾಸಗಳ ಬಳಕೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಇಂಟರ್ನೆಟ್ ಹೆಸರು ಮತ್ತು ಸಂಖ್ಯೆಗಳ ಭಾರತೀಯ ರಿಜಿಸ್ಟ್ರಿ (IRINN)ಯ ಆಡಳಿತ,

4.→ಮತ್ತು ನಿಕ್ಸಿ-ಸಿಎಸ್‌ಸಿ (NIXI-CSC) ಮೂಲಕ ದಕ್ಷವಾದ ದತ್ತಾಂಶ ಶೇಖರಣೆ ಪರಿಹಾರಗಳಿಗಾಗಿ ದತ್ತಾಂಶ ಕೇಂದ್ರ (Data Centre) ಸೇವೆಗಳನ್ನು ಒದಗಿಸುವುದು.

ಮಹಾತಾರಿ ವಂದನಾ ಯೋಜನೆ

ಛತ್ತೀಸ್‌ಗಡದಲ್ಲಿ ಮಹಿಳೆಯರ ಸಶಕ್ತೀಕರಣದ ಕಡೆಗೆ ಒಂದು ಗಮನಾರ್ಹ ಹೆಜ್ಜೆಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮಹಾತಾರಿ ವಂದನಾ ಯೋಜನೆಯನ್ನು ಉದ್ಘಾಟಿಸಿ, ಈ ಯೋಜನೆಯ ಅಡಿಯಲ್ಲಿ ಪ್ರಥಮ ಕಂತನ್ನು ವಿತರಿಸಿದರು. ಅರ್ಹ ವಿವಾಹಿತ ಮಹಿಳೆಯರಿಗೆ ಪ್ರತಿ ತಿಂಗಳು ₹ 1000  ಹಣಕಾಸು ನೆರವನ್ನು ನೀಡುವ ಗುರಿ ಹೊಂದಿದೆ.

ಮಹಿಳೆಯರ ಆರ್ಥಿಕ ಸಶಕ್ತೀಕರಣವನ್ನು ಪ್ರೋತ್ಸಾಹಿಸಲು, ಅವರಿಗೆ ಆರ್ಥಿಕ ಸ್ಥಿರತೆ ಒದಗಿಸಲು, ಲಿಂಗ ಸಮಾನತೆಗೆ ಬೆಂಬಲ ನೀಡಲು ಮತ್ತು ಕುಟುಂಬದೊಳಗೆ ಮಹಿಳೆಯ ಪ್ರಮುಖ ಪಾತ್ರವನ್ನು ಬಲಗೊಳಿಸಲು ಈ ಯೋಜನೆಯನ್ನು ರೂಪಿಸಲಾಗಿದೆ.

ಈ ಯೋಜನೆಯು ಜನವರಿ 1, 2024ರಂತೆ 21 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಅರ್ಹ ವಿವಾಹಿತ ಮಹಿಳೆಯರಿಗೆ ಅನ್ವಯಿಸುತ್ತದೆ. ವಿಧವೆಯರು, ವಿಚ್ಛೇದಿತರು ಮತ್ತು ಪತಿಯಿಂದ ತ್ಯಜಿಸಲ್ಪಟ್ಟ ಮಹಿಳೆಯರಿಗೂ ಇದು ಅನ್ವಯವಾಗುತ್ತದೆ. ಅಂದಾಜು 70 ಲಕ್ಷ ಮಹಿಳೆಯರು ಲಾಭ ಪಡೆಯಲಿದ್ದಾರೆ.

ಸ್ವಚ್ಛತಾ ಗ್ರೀನ್ ಲೀಫ್ ರೇಟಿಂಗ್

(ಎಸ್‌ಜಿಎಲ್‌ಆರ್)

ತೀವ್ರವಾಗಿ ಬೆಳೆಯುತ್ತಿರುವ ಭಾರತದ ಪ್ರವಾಸೋದ್ಯಮ ಕ್ಷೇತ್ರದೊಳಗೆ ನೈರ್ಮಲ್ಯದ ಗುಣಮಟ್ಟವನ್ನು ಪರಿವರ್ತಿಸುವ ಮಹತ್ವದ ಕಾರ್ಯಕ್ರಮ. ಜಲಶಕ್ತಿ ಸಚಿವಾಲಯದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು, ಪ್ರವಾಸೋದ್ಯಮ ಸಚಿವಾಲಯದ ಜೊತೆಗೂಡಿ ‘ಸ್ವಚ್ಛತಾ ಗ್ರೀನ್ ಲೀಫ್ ರೇಟಿಂಗ್’ ಎಂಬ ಒಂದು ಉಪಕ್ರಮವನ್ನು ಆರಂಭಿಸಿದೆ.

ಈ ಯೋಜನೆಯು ಪ್ರವಾಸಿಗರಿಗೆ ಅತ್ಯುನ್ನತ ಗುಣಮಟ್ಟದ ಸ್ವಚ್ಛತೆ ಮತ್ತು ನೈರ್ಮಲ್ಯದ ಸೌಲಭ್ಯ ಒದಗಿಸುತ್ತದೆ. ಹೆಚ್ಚು ಸ್ವಚ್ಛವಾದ ಮತ್ತು ಸುಸ್ಥಿರವಾದ ಪ್ರವಾಸೋದ್ಯಮ ಅಭ್ಯಾಸಗಳನ್ನು ಉತ್ತೇಜಿಸುವಲ್ಲಿ ಇದೊಂದು ಬಹುಮುಖ್ಯ ಹೆಜ್ಜೆಯಾಗಿದೆ.

ಮಧ್ಯಪ್ರದೇಶದ ನರ್ಮದಾಪುರಂನ ಹೃದಯ ಭಾಗದಲ್ಲಿರುವ ‘ಬೈಸನ್ ರಿಸೋರ್ಟ್ಸ್, ಮಧಾಯ್’ ಮೊದಲ ಐದು ‘ಸ್ವಚ್ಛತಾ ಗ್ರೀನ್ ಲೀಫ್ ರೇಟಿಂಗ್’ ಮಾನ್ಯತಾಪತ್ರಗಳನ್ನು ಪಡೆಯುವುದರ ಮೂಲಕ ಮುಂಚೂಣಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT