‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಇದೇ ಏಪ್ರಿಲ್ನಲ್ಲಿ ‘ಎಡ್ಯುವರ್ಸ್’ ಶೈಕ್ಷಣಿಕ ಮೇಳವನ್ನು ಹಮ್ಮಿಕೊಂಡಿವೆ. ಹದಿನಾಲ್ಕು ವರ್ಷಗಳಿಂದ ಈ ಮೇಳವನ್ನು ಯಶಸ್ವಿಯಾಗಿ ಆಯೋಜಿಸುತ್ತಾ ಬರಲಾಗಿದೆ.

‘ಪಿಯುಸಿ ನಂತರ ಮುಂದೇನು?’ ಎನ್ನುವ ಪ್ರಶ್ನೆಗೆ ಮೇಳದಲ್ಲಿ ಸೂಕ್ತ ಉತ್ತರ ಕಂಡುಕೊಳ್ಳಬಹುದು. ಸಿಇಟಿ ಮತ್ತು ಕಾಮೆಡ್–ಕೆ ಕುರಿತು ವಿಶೇಷ ಗೋಷ್ಠಿಗಳು ನಡೆಯಲಿವೆ. ಪಿಯುಸಿ ಮತ್ತು ತತ್ಸಮಾನ ವಿದ್ಯಾಭ್ಯಾಸ ಮುಗಿಸಿದ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್ಗೆ ಸಂಬಂಧಿಸಿದಂತೆ ವಿವರವಾದ ಮಾಹಿತಿ ಸಿಗಲಿದೆ. ಶಿಕ್ಷಣ ತಜ್ಞರು ಹಾಗೂ ಪರಿಣತರೊಂದಿಗೆ ಸಂವಾದ ಮತ್ತು ಉಪನ್ಯಾಸ ಗೋಷ್ಠಿಗಳು ಇರಲಿವೆ.

ಕರ್ನಾಟಕದಾದ್ಯಂತ ಇರುವ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳು ಈ ಮೇಳದಲ್ಲಿ ಭಾಗವಹಿಸಲಿವೆ. ಕೋರ್ಸ್ಗಳ ಆಯ್ಕೆ, ಉದ್ಯೋಗಾವಕಾಶ, ಕಾಲೇಜಿನಲ್ಲಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಸಿಗಲಿದೆ. ವಿದ್ಯಾರ್ಥಿಗಳು ಈ ಸಂಸ್ಥೆಗಳೊಂದಿಗೆ ನೇರವಾಗಿ ಸಂವಾದ ನಡೆಸುವ ಅವಕಾಶ ಇದೆ. ಮೇಳವು ಎರಡು ಬೇರೆ ಬೇರೆ ದಿನಗಳಲ್ಲಿ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ನಡೆಯಲಿದೆ. ಕಾರ್ಯಕ್ರಮ ನಡೆಯಲಿರುವ ಸ್ಥಳ ಹಾಗೂ ದಿನಾಂಕವನ್ನು ಸದ್ಯದಲ್ಲಿಯೇ ತಿಳಿಸಲಾಗುತ್ತದೆ.

ಭಾಗವಹಿಸುವ ವಿದ್ಯಾರ್ಥಿಗಳಿಗೆ ಲಕ್ಕಿ ಡ್ರಾ ಇರಲಿದೆ. ಸಿಇಟಿ– ನೀಟ್ ಪರೀಕ್ಷಾರ್ಥಿಗಳಿಗೆ ಎರಡೂ ದಿನ ಅಣಕು ಪರೀಕ್ಷೆ ನಡೆಯಲಿದೆ. ಮೇಳಕ್ಕೆ ಪ್ರವೇಶ ಉಚಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.