ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಎಂ.ಎಸ್ಸಿ(ಫೊರೆನ್ಸಿಕ್ ಸೈನ್ಸ್) ಮಾಡಬಹುದೇ?

Published 14 ಏಪ್ರಿಲ್ 2024, 22:58 IST
Last Updated 14 ಏಪ್ರಿಲ್ 2024, 22:58 IST
ಅಕ್ಷರ ಗಾತ್ರ

1. ಸರ್, ನಾನು ಬಿ.ಎ (ಕ್ರಿಮಿನಾಲಜಿ ಮತ್ತು ಫೊರೆನ್ಸಿಕ್ ಸೈನ್ಸ್) 6ನೇ ಸೆಮಿಸ್ಟರ್ ಓದುತ್ತಿದ್ದು, ನನಗೆ ಎಂ.ಎ ಮಾಡುವುದರಲ್ಲಿ ಆಸಕ್ತಿ ಇಲ್ಲ; ಮುಂದೆ, ನಾನು ಎಂಎಸ್ಸಿ ಮಾಡಲು ಅವಕಾಶವಿದೆಯೇ?

–ಯಶವಂತ್ ಗೌಡ ಪಾಟೀಲ್, ಧಾರವಾಡ.

ಸಾಮಾನ್ಯವಾಗಿ ಬಿಎ (ಕ್ರಿಮಿನಾಲಜಿ ಮತ್ತು ಫೊರೆನ್ಸಿಕ್ ಸೈನ್ಸ್) ನಂತರ ಎಂಎಸ್ಸಿ (ಫೊರೆನ್ಸಿಕ್ ಸೈನ್ಸ್) ಅಥವಾ ಎಂಎಸ್ಸಿ (ಕ್ರಿಮಿನಾಲಜಿ) ಮಾಡಬಹುದು. ಆದರೆ, ಪ್ರತಿ ವಿಶ್ವವಿದ್ಯಾಲಯದ ಅರ್ಹತೆಯ ನಿಯಮಗಳು, ಪ್ರವೇಶ ಪ್ರಕ್ರಿಯೆ, ಪಠ್ಯಕ್ರಮಗಳಲ್ಲಿ ವ್ಯತ್ಯಾಸಗಳಿವೆ. ಯಾವ ವಿಶ್ವವಿದ್ಯಾ ಲಯದಲ್ಲಿ ಅಧ್ಯಯನವನ್ನು ಮುಂದುವರಿಸಬೇಕೆಂದು ನಿರ್ಧರಿಸಿ, ಅದರಂತೆ ಯೋಜನೆ ರೂಪಿಸಿ.

2. ಸರ್, ನಾನು ಬಿಎ ಪ್ರಥಮ ಸೆಮಿಸ್ಟರ್ ಮುಗಿಸಿದ್ದೇನೆ. ಸದ್ಯಕ್ಕೆ, ನನಗೆ ಉದ್ಯೋಗದ ಅವಶ್ಯಕತೆ ಇದೆ. ಹಾಗಾಗಿ, ಏನು ಮಾಡಬಹುದು?

–ಹೆಸರು, ಊರು ತಿಳಿಸಿಲ್ಲ.

ರಾಷ್ಟ್ರೀಯ ಶಿಕ್ಷಣ ನೀತಿಯ ಅನುಸಾರ, ಬಿಎ ಪದವಿಗೆ ಸೇರಿದ್ದರೆ ಒಂದು ವರ್ಷದ ಅವಧಿಯ ನಂತರ ಸರ್ಟಿಫಿಕೆಟ್ ಪಡೆದು ಪೂರ್ಣಾವಧಿ ಕೆಲಸಕ್ಕೆ ಸೇರಬಹುದು. ರಾಷ್ಟ್ರೀಯ ಶಿಕ್ಷಣ ನೀತಿಯ ಅನುಸಾರ, ಅನುಕೂಲವಾದಾಗ ಪದವಿ ಕೋರ್ಸಿಗೆ ಮರು ಸೇರ್ಪಡೆಯಾಗುವ ಅವಕಾಶವಿರುತ್ತದೆ. ಬಿಎ ಕೋರ್ಸ್ ಮಾಡುತ್ತಾ, ಅರೆಕಾಲಿಕ ಕೆಲಸಗಳನ್ನು ಮಾಡಬಹುದು. ಮಾರ್ಕೆಟಿಂಗ್, ಹೋಟೆಲ್ಸ್, ರೆಸ್ಟೋರೆಂಟ್ಸ್, ಮಾಧ್ಯಮ, ಬರವಣಿಗೆ ಹಲವು ಉದ್ಯೋಗಾವಕಾಶಗಳಿವೆ. ಮಾರ್ಗದರ್ಶನಕ್ಕಾಗಿ ಗಮನಿಸಿ: https://youtu.be/faQz_iLCWEk

ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್‌ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್‌ಕುಮಾರ್‌ ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು shikshana@prajavani.co.inಕ್ಕೆ ಕಳಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT