ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಫಾರೆಸ್ಟ್ರಿಗೆ ಉದ್ಯೋಗಾವಕಾಶಗಳು ಹೇಗಿವೆ?

Published : 26 ಮೇ 2024, 21:01 IST
Last Updated : 26 ಮೇ 2024, 21:01 IST
ಫಾಲೋ ಮಾಡಿ
Comments
ಪ್ರ

1. ನಾನು ದ್ವಿತೀಯ ಪಿಯುಸಿ (ವಿಜ್ಞಾನ) ಮಾಡುತ್ತಿದ್ದು, ಬಿ.ಎಸ್ಸಿ (ಫಾರೆಸ್ಟ್ರಿ) ಕೋರ್ಸ್ ಮಾಡುವ ಆಸಕ್ತಿಯಿದೆ. ಆದರೆ, ಉದ್ಯೋಗಾವಕಾಶಗಳು ಹೇಗಿವೆ?

ಹೆಸರು, ಊರು ತಿಳಿಸಿಲ್ಲ.

ಪಿಯುಸಿ (ವಿಜ್ಞಾನ) ನಂತರ, ಇತ್ತೀಚಿನ ವರ್ಷಗಳಲ್ಲಿ ಮುನ್ನೆಲೆಗೆ ಬಂದಿರುವ ನಾಲ್ಕು ವರ್ಷದ ಬಿ.ಎಸ್ಸಿ (ಅರಣ್ಯ ಶಾಸ್ತ್ರ) ಕೋರ್ಸ್ ಮುಖಾಂತರ ಆಕರ್ಷಕವಾದ ವೃತ್ತಿ ಜೀವನವನ್ನು ರೂಪಿಸಿಕೊಳ್ಳಬಹುದು. ಜಾಗತಿಕ ತಾಪಮಾನದ ಏರಿಕೆ ಮತ್ತು ಪರಿಸರ ವ್ಯವಸ್ಥೆಯ ಬಗ್ಗೆ ಕಾಳಜಿ, ವನ್ಯಜೀವಿಗಳ ಮೂಲಭೂತ ಅಂಶಗಳು, ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ, ಜಲವಿಜ್ಞಾನ, ಮಣ್ಣು ಮತ್ತು ನೀರಿನ ಸಮಸ್ಯೆ, ತೋಟಗಾರಿಕೆ ಇಂತಹ ವಿಷಯಗಳಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳು, ಈ ಕೋರ್ಸ್ ಮಾಡಬಹುದು. ಸಿರ್ಸಿ ಮತ್ತು ಕೊಡಗಿನ ಪೊನ್ನಂಪೇಟೆಯಲ್ಲಿರುವ ಎರಡು ಸರ್ಕಾರಿ ಕಾಲೇಜುಗಳಿಗೆ ಸಿಇಟಿ ಪರೀಕ್ಷೆಯ ಮೂಲಕ ಸೀಟ್ ಹಂಚಿಕೆಯಾಗುತ್ತದೆ.

ಈ ಕೋರ್ಸ್ ನಂತರ ಸರ್ಕಾರದ ಅರಣ್ಯ ಇಲಾಖೆ ಮತ್ತು ಖಾಸಗಿ ವಲಯದ ಕೃಷಿ ವ್ಯಾಪಾರೋದ್ಯಮ ಕಂಪನಿಗಳಲ್ಲಿ ಉದ್ಯೋಗವನ್ನು ಅರಸಬಹುದು. ಹೆಚ್ಚಿನ ಮಾಹಿತಿಗಾಗಿ ಎಂ.ಎಸ್ಸಿ/ಪಿ.ಎಚ್‌ಡಿ ಮಾಡಬಹುದು. ಈ ಕುರಿತ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:https://youtu.be/JlMo33YxTiA


ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT