ಶುಕ್ರವಾರ, ಮೇ 27, 2022
31 °C

ಸಾಮಾನ್ಯ ಜ್ಞಾನ: ಮಾದರಿ ಪ್ರಶ್ನೋತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

1) ಪ್ರಿಯಾಂಕ ಮೋಹಿತೆ ಯಾಕೆ ಸುದ್ದಿಯಲ್ಲಿದ್ದಾರೆ?

1) →ಬೆಂಗಳೂರು ನಿವಾಸಿಯಾಗಿರುವ ಮಹಾರಾಷ್ಟ್ರದ ಸತಾರ ಮೂಲದ ಪ್ರಿಯಾಂಕಾ 8,586 ಮೀಟರ್ ಎತ್ತರದ ಕಾಂಚನಗಂಗಾ ಶಿಖರವನ್ನೇರಿದ್ದಾರೆ.

2) ಪ್ರಿಯಾಂಕಾ 8,000 ಮೀಟರ್‌ಗಿಂತ ಎತ್ತರವಿರುವ ಐದು ಶಿಖರಗಳನ್ನು ಏರಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ.

ಉತ್ತರ ಸಂಕೇತಗಳು

ಎ) 1ನೇ ಹೇಳಿಕೆ ಮಾತ್ರ ಸರಿಯಾಗಿದೆ

ಬಿ) 2ನೇ ಹೇಳಿಕೆ ಮಾತ್ರ ಸರಿಯಾಗಿದೆ

ಸಿ) ಯಾವ ಹೇಳಿಕೆಯೂ ಸರಿಯಾಗಿಲ್ಲ

ಡಿ) 1 ಮತ್ತು 2 ಎರಡೂ ಹೇಳಿಕೆಗಳು ಸರಿಯಾಗಿವೆ.

ಉತ್ತರ: ಡಿ

2) ಇತ್ತೀಚೆಗೆ ಭಾರತ ಮತ್ತು ನಾರ್ಡಿಕ್ ದೇಶಗಳ 2ನೇ ಶೃಂಗಸಭೆ ನಡೆಯಿತು. ಹಾಗಾದರೆ ಈ ಕೆಳಗಿನ ಗುಂಪುಗಳಲ್ಲಿ ಯಾವ ಗುಂಪು ನಾರ್ಡಿಕ್ ಗುಂಪನ್ನು ಪ್ರತಿನಿಧಿಸುತ್ತದೆ?

ಎ) ಫಿನ್ಲೆಂಡ್, ಡೆನ್ಮಾರ್ಕ್, ನಾರ್ವೆ, ಸ್ವೀಡನ್, ಐಸ್‌ಲ್ಯಾಂಡ್

ಬಿ) ಫಿನ್ಲೆಂಡ್, ಬ್ರಿಟನ್, ನಾರ್ವೆ, ಸ್ವೀಡನ್, ಐಸ್‌ಲ್ಯಾಂಡ್

ಸಿ) ಜಪಾನ್, ನಾರ್ವೆ, ಸ್ವೀಡನ್, ಐಸ್‌ಲ್ಯಾಂಡ್

ಡಿ) ಮಾರಿಷಸ್, ಫಿನ್ಲೆಂಡ್, ಡೆನ್ಮಾರ್ಕ್, ಐಸ್‌ಲ್ಯಾಂಡ್

ಉತ್ತರ: ಎ

3) ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ ಸಿದ್ಧಪಡಿಸಿದ ‘ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ’ದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?

ಎ) 150 ಬಿ) 160 ಸಿ) 180 ಡಿ) 140

ಉತ್ತರ: ಎ

4) ಹಿರಿಯ ರಂಗ ಕಲಾವಿದೆ ಏಣಗಿ ಬಾಳಪ್ಪನವರ ಧರ್ಮಪತ್ನಿ ಲಕ್ಷ್ಮೀಬಾಯಿ ಇತ್ತೀಚಿಗೆ ನಿಧನರಾದರು. ಇವರು ಯಾವ ಯಾವ ಭಾಷೆಗಳ ರಂಗಭೂಮಿಗಳಲ್ಲಿ ಕಲಾವಿದರಾಗಿ ದುಡಿದಿದ್ದರು?

ಎ) ಕನ್ನಡ ಮತ್ತು ಮರಾಠಿ

ಬಿ) ಮರಾಠಿ ಮತ್ತು ಗುಜರಾತಿ

ಸಿ) ಕನ್ನಡ ಮತ್ತು ತುಳು

ಡಿ) ಕೇವಲ ಕನ್ನಡ ಮಾತ್ರ

ಉತ್ತರ: ಎ

5) ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೊ) ಚಂದ್ರ ಹಾಗೂ ಮಂಗಳ ಗ್ರಹಕ್ಕೆ ಗಗನ ನೌಕೆಗಳನ್ನು ಉಡ್ಡಯನ ಮಾಡಿ ಯಶಸ್ವಿಯಾಗಿದೆ. ಈಗ ಯಾವ ಗ್ರಹದ ಕಕ್ಷೆಗೆ ತನ್ನ ಬಾಹ್ಯಾಕಾಶ ನೌಕೆಯನ್ನು ಕಳುಹಿಸಲು ಸಿದ್ಧತೆ ನಡೆಸಿದೆ?

ಎ) ಶುಕ್ರ →ಬಿ) ಬುಧ

ಸಿ) ಶನಿ →ಡಿ) ನೆಪ್ಚೂನ್

ಉತ್ತರ: ಎ

6) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ನಮ್ಮ ದೇಶದಲ್ಲಿ ವಾರ್ಷಿಕ 800 ರಿಂದ 900 ಮೆ. ಟನ್ ಚಿನ್ನದ ಬೇಡಿಕೆ ಇದೆ. ಆದರೆ ಭಾರತದಲ್ಲಿ 1.70 ರಿಂದ 2 ಮೆ. ಟನ್ ಉತ್ಪಾದಿಸಲಾಗುತ್ತಿದೆ. ಉಳಿದದನ್ನು ಆಮದು ಮಾಡಿಕೊಳ್ಳಲಾಗುತ್ತದೆ.

2) ಭಾರತದಲ್ಲಿ ಕೋಲಾರದ ಚಿನ್ನದ ಗಣಿ, ಹಟ್ಟಿ ಚಿನ್ನದ ಗಣಿ, ಊಟಿ ಚಿನ್ನದ ಗಣಿ ಮತ್ತಿತರ ಕಡೆಗಳಲ್ಲಿ ಚಿನ್ನವನ್ನು ತೆಗೆಯಲಾಗುತ್ತಿದೆ.

ಉತ್ತರ ಸಂಕೇತಗಳು

ಎ) 1ನೇ ಹೇಳಿಕೆ ಮಾತ್ರ ಸರಿಯಾಗಿದೆ
ಬಿ) 2 ನೇ ಹೇಳಿಕೆ ಮಾತ್ರ ಸರಿಯಾಗಿದೆ
ಸಿ) ಯಾವ ಹೇಳಿಕೆಯೂ ಸರಿಯಾಗಿಲ್ಲ
ಡಿ) 1 ಮತ್ತು 2 ಎರಡೂ ಹೇಳಿಕೆಗಳು ಸರಿಯಾಗಿವೆ.

ಉತ್ತರ: ಡಿ

7) ಕೆಳಗಿನ ಹೇಳಿಕೆಯನ್ನು ಗಮನಿಸಿ

1) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ 2021-22ರ ಕರೆನ್ಸಿ ಆ್ಯಂಡ್‌ ಫೈನಾನ್ಸ್ ವರದಿಯ ಪ್ರಕಾರ ಕೋವಿಡ್‌ ಬಿಕ್ಕಟ್ಟಿನಿಂದ ಉಂಟಾದ ಆರ್ಥಿಕ ನಷ್ಟ ತುಂಬಿಕೊಳ್ಳಲು ಭಾರತಕ್ಕೆ 12 ವರ್ಷಗಳೇ ಬೇಕಾಗಬಹುದು.

2) ಭಾರತದ ಆರ್ಥಿಕತೆಯು ಕೊರೊನಾದ ಸಂಕಷ್ಟದಿಂದಾಗಿ ₹52 ಲಕ್ಷ ಕೋಟಿಯಷ್ಟು ಉತ್ಪಾದನಾ ನಷ್ಟವನ್ನು ಅನುಭವಿಸಿದೆ.

ಉತ್ತರ ಸಂಕೇತಗಳು

ಎ) 1ನೇ ಹೇಳಿಕೆ ಮಾತ್ರ ಸರಿಯಾಗಿದೆ

ಬಿ) 2ನೇ ಹೇಳಿಕೆ ಮಾತ್ರ ಸರಿಯಾಗಿದೆ

ಸಿ) ಯಾವ ಹೇಳಿಕೆಯೂ ಸರಿಯಾಗಿಲ್ಲ

ಡಿ) 1 ಮತ್ತು 2 ಎರಡೂ ಹೇಳಿಕೆಗಳು ಸರಿಯಾಗಿವೆ.

ಉತ್ತರ: ಡಿ

 (ಮಾಹಿತಿ: Spardha Bharati UPSC ಯೂಟ್ಯೂಬ್ ಚಾನೆಲ್‌)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು