ನಾನು ಕಳೆದ ವರ್ಷ ಎಸ್.ಎಸ್.ಎಲ್.ಸಿ, ಫೇಲಾಗಿದ್ದೆ. ಹುಬ್ಬಳ್ಳಿ ಜಿಟಿಟಿಸಿಯವರು ನನಗೆ ಫೋನ್ ಮಾಡಿ ಕೆಲವು ಕೋರ್ಸ್‌ಗಳ ಬಗ್ಗೆ ಹೇಳಿದರು. ಅದರಲ್ಲಿ ನಾನು ಮಲ್ಟಿ ಸ್ಕಿಲ್ ಟೆಕ್ನಿಷಿಯನ್ ಕೋರ್ಸ್ ಆಯ್ಕೆ ಮಾಡಿಕೊಂಡೆ. ಕೋರ್ಸ್ ಮುಗಿಯುತ್ತಾ ಬಂದಿದೆ. ಈಗಾಗಲೇ ಖಾಸಗೀ ಕಂಪನಿಯೊಂದರಲ್ಲಿ ಕೆಲಸಕ್ಕೆ ನೇಮಕಾತಿ ಆದೇಶ ಸಿಕ್ಕಿದೆ.
ಮಂಜುನಾಥ ಯರಿನಾರಾಯಣಪುರ, ಹುಬ್ಬಳ್ಳಿ
ಕೈಗಾರಿಕೋಧ್ಯಮದ ಬೇಡಿಕೆಗೆ ಅನುಗುಣವಾದ ಕೌಶಲಗಳನ್ನು ಕಲಿಯುವಂತೆ ಜಿಟಿಟಿಸಿ ಕೋರ್ಸ್‌ಗಳನ್ನು ರೂಪಿಸಲಾಗಿದೆ. ಇಲ್ಲಿ ದಾಖಲಾದ ಪ್ರತಿ ವಿದ್ಯಾರ್ಥಿಯು ನೇಮಕಾತಿ ಹೊಂದಲು ಬೇಕಾದ ಎಲ್ಲಾ ಅರ್ಹತೆ ಮತ್ತು ಕೌಶಲಗಳನ್ನು ಕಲಿಸುತ್ತೇವೆ. ಕೋರ್ಸ್ ಪೂರ್ಣಗೊಳಿಸಿದ ಪ್ರತಿ ವಿದ್ಯಾರ್ಥಿಗೆ ನೇಮಕಾತಿ ಆದೇಶ ಕೊಡಿಸುವವರೆಗೂ ನಮ್ಮ ಜವಾಬ್ದಾರಿ ಇರುತ್ತದೆ.
ಮಾರುತಿ ಭಜಂತ್ರಿ, ಕೇಂದ್ರದ ಮುಖ್ಯಸ್ಥರು. ಜಿಟಿಟಿಸಿ ಹುಬ್ಬಳ್ಳಿ