ಬೆಂಗಳೂರು: ದ್ವಿತೀಯ ಪಿಯುಗೆ 2024ರಲ್ಲಿ ನಡೆದ ಅಂತಿಮ ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಂಡ ಹಾಗೂ ಫಲಿತಾಂಶ ಸುಧಾರಿಸಲು ಬಯಸುವ ವಿದ್ಯಾರ್ಥಿಗಳು 2025ರಲ್ಲಿ ನಡೆಯುವ ದ್ವಿತೀಯ ಪಿಯು ಪರೀಕ್ಷೆ–1ಕ್ಕೆ ದಂಡರಹಿತ ಶುಲ್ಕ ಪಾವತಿಸಲು ಅ.25 ಕೊನೆ ದಿನವಾಗಿದೆ.
ದಿನಕ್ಕೆ ₹50ರಂತೆ ಗರಿಷ್ಠ ₹500ರವರೆಗೆ ದಂಡಸಹಿತ ಶುಲ್ಕ ಪಾವತಿಸಲು ನವೆಂಬರ್ 9 ಕೊನೆಯ ದಿನವಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಹೇಳಿದೆ.
ಶುಲ್ಕ ವಿವರ : ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಪ್ರವರ್ಗ 1ರ ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಉಳಿದ ವಿದ್ಯಾರ್ಥಿಗಳು ಒಂದು ವಿಷಯಕ್ಕೆ ₹140, ಎರಡು ವಿಷಯಕ್ಕೆ ₹270 ಮತ್ತು ಮೂರು ಅಥವಾ ಹೆಚ್ಚಿನ ವಿಷಯಗಳಿಗೆ ₹400 ಪರೀಕ್ಷಾ ಶುಲ್ಕ ಪಾವತಿಸಬೇಕು.
ಫಲಿತಾಂಶ ಉತ್ತಮಪಡಿಸಿಕೊಳ್ಳುವ ವಿದ್ಯಾರ್ಥಿಗಳು ಪ್ರಥಮ ಬಾರಿಗೆ ಒಂದು ವಿಷಯಕ್ಕೆ ₹175, ಎರಡನೇ ಹಾಗೂ ನಂತರದ ಪ್ರಯತ್ನಕ್ಕೆ, ಒಂದು ವಿಷಯಕ್ಕೆ ₹350 ಪಾವತಿಸಬೇಕು.