ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಕಾಲರ್‌ಶಿಪ್: ವಿದ್ಯಾರ್ಥಿ ವೇತನಗಳ ಮಾಹಿತಿ ಇಲ್ಲಿದೆ

Published : 8 ಸೆಪ್ಟೆಂಬರ್ 2024, 23:30 IST
Last Updated : 8 ಸೆಪ್ಟೆಂಬರ್ 2024, 23:30 IST
ಫಾಲೋ ಮಾಡಿ
Comments

ಓಕ್‌ನಾರ್ತ್ ಸ್ಟೆಮ್ ಸ್ಕಾಲರ್‌ಷಿಪ್

ಸರ್ಕಾರಿ ಕಾಲೇಜುಗಳು / ವಿಶ್ವವಿದ್ಯಾಲಯಗಳಲ್ಲಿ ಸ್ಟೆಮ್ (ಸೈನ್ಸ್, ಟೆಕ್ನಾಲಜಿ, ಎಂಜಿನಿಯರಿಂಗ್, ಮ್ಯಾಥಮ್ಯಾಟಿಕ್ಸ್) ವಿಷಯಗಳಲ್ಲಿ ಪದವಿ ಓದುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಆರ್ಥಿಕ ಸಹಾಯ ನೀಡಲಿದೆ.

ಅರ್ಹತೆ: ಸರ್ಕಾರಿ ಕಾಲೇಜುಗಳು / ವಿಶ್ವವಿದ್ಯಾಲಯಗಳಲ್ಲಿ ಸ್ಟೆಮ್-ಸಂಬಂಧಿತ ವಿಷಯಗಳಲ್ಲಿ ಪದವಿ ಅಧ್ಯಯನ ಮಾಡುತ್ತಿರಬೇಕು. ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದಲೂ ₹ 3.5 ಲಕ್ಷಕ್ಕಿಂತ ಕಡಿಮೆ ಇರಬೇಕು. ಅಭ್ಯರ್ಥಿಯು ಗಳಿಸಿದ ಒಟ್ಟು ಅಂಕಗಳು 12ನೇ ತರಗತಿಯ (ಅಥವಾ ತತ್ಸಮಾನ) ಪರೀಕ್ಷೆಯಲ್ಲಿ ಶೇ 80 ಅಥವಾ ಅದಕ್ಕಿಂತ ಹೆಚ್ಚಿರಬೇಕು. ಮತ್ತು ಹಿಂದಿನ ತರಗತಿ/ಸೆಮಿಸ್ಟರ್/ವರ್ಷದಲ್ಲಿ (ಅನ್ವಯಿಸುವಂತಿದ್ದರೆ) ಶೇ 65 ಇರಬೇಕು.

ಆರ್ಥಿಕ ಸಹಾಯ: ₹30,000 (ನಿಗದಿತ ಮೊತ್ತ)

ಅರ್ಜಿ ಸಲ್ಲಿಸಲು ಕೊನೆ ದಿನ: 18-10-2024

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ: www.b4s.in/praja/ONSS3

ನಿಕಾನ್ ಸ್ಕಾಲರ್‌ಷಿಪ್

ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಛಾಯಾಗ್ರಹಣ-ಸಂಬಂಧಿತ ಕೋರ್ಸ್‌ಗಳನ್ನು ಅಭ್ಯಾಸ ಮಾಡಲು ಆರ್ಥಿಕವಾಗಿ ಬೆಂಬಲ ನೀಡಲಿದೆ.

ಅರ್ಹತೆ: 12ನೇ ತರಗತಿಯನ್ನು ಪೂರ್ಣಗೊಳಿಸಿರುವ ಮತ್ತು ಮೂರು ತಿಂಗಳು ಅಥವಾ ಹೆಚ್ಚಿನ ಸಮಯದ ಛಾಯಾಗ್ರಹಣ-ಸಂಬಂಧಿತ ಕೋರ್ಸ್‌ಗಳನ್ನು ಅಭ್ಯಾಸ ಮಾಡುತ್ತಿರುವಂತಹ ಭಾರತೀಯ ವಿದ್ಯಾರ್ಥಿಗಳಿಗೆ ಲಭ್ಯವಿದೆ. ಕುಟುಂಬದ ವಾರ್ಷಿಕ ಆದಾಯವು (ಎಲ್ಲಾ ಮೂಲಗಳಿಂದ) ₹ 6 ಲಕ್ಷಕ್ಕಿಂತ ಕಡಿಮೆ ಇರಬೇಕು.

ಆರ್ಥಿಕ ಸಹಾಯ: ₹10,000ದವರೆಗೆ

ಅರ್ಜಿ ಸಲ್ಲಿಸಲು ಕೊನೆ ದಿನ: 20-10-2024

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ: www.b4s.in/praja/NIKON12

ಯು-ಗೋ ಸ್ಕಾಲರ್‌ಷಿಪ್

ವೃತ್ತಿಪರ ಪದವಿ ಕೋರ್ಸ್‌ಗಳನ್ನು ಅಭ್ಯಾಸ ಮಾಡುತ್ತಿರುವ ಯುವತಿಯರನ್ನು ಆರ್ಥಿಕವಾಗಿ ಬೆಂಬಲಿಸಲಿದೆ.

ಅರ್ಹತೆ: ಭಾರತದಲ್ಲಿ ಟೀಚಿಂಗ್, ನರ್ಸಿಂಗ್, ಫಾರ್ಮಸಿ, ಮೆಡಿಸಿನ್, ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಕಾನೂನು ಇತ್ಯಾದಿ ವೃತ್ತಿಪರ ಪದವಿ ಕೋರ್ಸ್‌ಗಳ ಮೊದಲ ವರ್ಷವನ್ನು ಅಭ್ಯಾಸ ಮಾಡುತ್ತಿರುವ ಯುವತಿಯರಿಗೆ ಲಭ್ಯವಿದೆ. ಅರ್ಜಿದಾರರು ತಮ್ಮ 10 ಮತ್ತು 12ನೇ ತರಗತಿಗಳಲ್ಲಿ ಕನಿಷ್ಠ ಶೇ 70 ಅಂಕಗಳನ್ನು ಗಳಿಸಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ₹ 5 ಲಕ್ಷಕ್ಕಿಂತ ಕಡಿಮೆ ಇರಬೇಕು.

ಆರ್ಥಿಕ ಸಹಾಯ: ವಾರ್ಷಿಕ ₹ 60,000ದವರೆಗೆ.

ಅರ್ಜಿ ಸಲ್ಲಿಸಲು ಕೊನೆ ದಿನ: 30-09-2024

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ: www.b4s.in/praja/UGO3

ಇನ್ಟ್ಯೂಇಟ್ ರೈಸ್ ಗರ್ಲ್ ಚೈಲ್ಡ್ ಎಜುಕೇಷನ್ ಪ್ರೋಗ್ರಾಂ

8ನೇ ತರಗತಿಯಿಂದ ಪದವಿಯವರೆಗೆ ಕಲಿಯುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರನ್ನು ಬೆಂಬಲಿಸಲು ಇನ್ಟ್ಯೂಇಟ್ ಇಂಡಿಯಾ ನೀಡುವ ಸ್ಕಾಲರ್‌ಷಿಪ್ ಇದಾಗಿದೆ.

ಅರ್ಹತೆ: 8ನೇ ತರಗತಿಯಿಂದ ಪದವಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯರು ಅರ್ಜಿಯನ್ನು ಸಲ್ಲಿಸಬಹುದು. ಶೈಕ್ಷಣಿಕ ವರ್ಷದಲ್ಲಿ ಶೇ 60ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿರಬೇಕು.

ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ₹ 3.5 ಲಕ್ಷಕ್ಕಿಂತ ಕಡಿಮೆ ಇರಬೇಕು.

ಇನ್ಟ್ಯೂಇಟ್ ಇಂಡಿಯಾ ಮತ್ತು ಬಡ್ಡಿ4ಸ್ಟಡೀಯ ಉದ್ಯೋಗಿಗಳ ಮಕ್ಕಳು ಅರ್ಹರಾಗಿರುವುದಿಲ್ಲ.

ಆರ್ಥಿಕ ಸಹಾಯ:₹ 46,305ವರೆಗಿನ ವಿದ್ಯಾರ್ಥಿವೇತನ.

ಅರ್ಜಿ ಸಲ್ಲಿಸಲು ಕೊನೆ ದಿನ:30-09-2024

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ: www.b4s.in/praja/IRGC3

ಇನ್ಫೊಸಿಸ್‌ ಫೌಂಡೇಷನ್ ಸ್ಟೆಮ್ ಸ್ಟಾರ್ಸ್‌

ಸ್ಟೆಮ್ (ಸೈನ್ಸ್, ಟೆಕ್ನಾಲಜಿ, ಎಂಜಿನಿಯರಿಂಗ್, ಮ್ಯಾಥಮ್ಯಾಟಿಕ್ಸ್) ವಿಷಯಗಳಲ್ಲಿ ‌ ಪದವಿಗಳನ್ನು ಅಭ್ಯಾಸ ಮಾಡಲು ಇಚ್ಛೆಯಿರುವ ವಿದ್ಯಾರ್ಥಿನಿಯರನ್ನು ಬೆಂಬಲಿಸಲು ಇನ್ಫೊಸಿಸ್ ಫೌಂಡೇಷನ್‌ ನೀಡುವ ಆರ್ಥಿಕ ಸಹಾಯವಿದು.

ಅರ್ಹತೆ: ಭಾರತದ ಪ್ರಜೆಗಳಾಗಿರಬೇಕು. ಸ್ಟೆಮ್ ವಿಷಯಗಳ ಕ್ಷೇತ್ರಗಳಲ್ಲಿ ಇನ್‌ಸ್ಟಿಟ್ಯೂಟ್‌ ಆಫ್ ರೆಪ್ಯೂಟ್ (ಎನ್‌ಐಆರ್‌ಎಫ್ ಮಾನ್ಯತೆ ಪಡೆದ)ನಲ್ಲಿ ತಮ್ಮ 4-ವರ್ಷದ ಪದವಿ ಕೋರ್ಸ್‌ನ ಮೊದಲನೆ ವರ್ಷಕ್ಕೆ ದಾಖಲಾಗಿರುವ ವಿದ್ಯಾರ್ಥಿನಿಯರು ಅರ್ಹರು. ಗುರುತಿಸಲ್ಪಟ್ಟ ಕಾಲೇಜುಗಳಲ್ಲಿ ಅರ್ಜಿದಾರರು ಪ್ರವೇಶ ಪಡೆದಿರಬೇಕು . 12ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ₹ 8 ಲಕ್ಷಕ್ಕಿಂತ ಕಡಿಮೆ ಅಥವಾ ಸಮನಾಗಿರಬೇಕು. ಅರ್ಜಿದಾರರು ಇತರ ವಿದ್ಯಾರ್ಥಿವೇತನಗಳನ್ನು ಪಡೆದುಕೊಂಡಿರಬಾರದು.

ಆರ್ಥಿಕ ಸಹಾಯ: ಆಯ್ಕೆಯಾದ ಅಭ್ಯರ್ಥಿಗಳು ಬೋಧನೆ, ಜೀವನ ನಿರ್ವಹಣಾ ವೆಚ್ಚಗಳು ಮತ್ತು ಅಧಯನ ಸಾಮಗ್ರಿಗಳನ್ನು ಒಳಗೊಂಡಂತೆ, ತಾವು ಪಾವತಿಸಿರುವ ರಸೀದಿಗೆ ತಕ್ಕಂತೆ ವಾರ್ಷಿಕ ₹ 1 ಲಕ್ಷದ ವರೆಗೆ ವಿದ್ಯಾರ್ಥಿವೇತನ ಪಡೆಯುತ್ತಾರೆ.

ಅರ್ಜಿ ಸಲ್ಲಿಸಲು ಕೊನೆ ದಿನ: 15-09-2024. ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ: www.b4s.in/praja/ISTS2

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT