ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

UPSC, KPSC ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಬಹುಆಯ್ಕೆಯ ಪ್ರಶ್ನೋತ್ತರಗಳು

Published 22 ಮೇ 2024, 23:37 IST
Last Updated 22 ಮೇ 2024, 23:37 IST
ಅಕ್ಷರ ಗಾತ್ರ

1. ಸ್ಮಾರ್ಟ್ ನಗರಗಳ ಅಭಿಯಾನದಲ್ಲಿ ಸೂಕ್ತ ಜಲ ನಿರ್ವಹಣೆಗಾಗಿ ಕೆಳಗಿನ ಯಾವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ?
1. ಸ್ಮಾರ್ಟ್ ಮೀಟರ್ ಗಳ ಅಳವಡಿಕೆ.
2. ಜಲಸಂಪನ್ಮೂಲಗಳು ಸೋರಿಕೆ ಆಗದ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳುವುದು.
3. ನೀರಿನ ಗುಣಮಟ್ಟವನ್ನು ಪರಿವೀಕ್ಷಿಸುವುದು.
ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.
ಎ. 1 ಮಾತ್ರ ಬಿ. 1, 2 ಮತ್ತು 3
ಸಿ. 1 ಮತ್ತು 3 ಡಿ. 2 ಮತ್ತು 3
ಉತ್ತರ : ಬಿ

2. ಸ್ಮಾರ್ಟ್ ನಗರ ಎನ್ನುವ ಚಿಂತನೆ ಕೆಳಗಿನ ಯಾವ ಜಾಗತಿಕ ಪರಿಣಾಮದ ನಂತರ ಉದ್ಭವವಾಯಿತು?
ಎ. 2008 ರ ಜಾಗತಿಕ ಹಿಂಜರಿತ.
ಬಿ. ವಿಶ್ವ ವ್ಯಾಪಾರ ಒಕ್ಕೂಟದ ಮೇಲಿನ ಭಯೋತ್ಪಾದಕರ ದಾಳಿ.
ಸಿ. ವಿಶ್ವಸಂಸ್ಥೆಯ 2008 ರ ನಿರ್ಣಯದ ಆಧಾರದ ಮೇಲೆ.
ಡಿ. ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ವರದಿ ಆಧಾರದ ಮೇಲೆ.
ಉತ್ತರ : ಎ

3. ಕೆಳಗಿನ ಯಾವ ಕಾಯ್ದೆಗಳನ್ವಯ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವನ್ನು ಸ್ಥಾಪಿಸಲಾಯಿತು?
ಎ. ಗ್ರಾಹಕರ ಹಿತಾಸಕ್ತಿಗಳ ಸಂರಕ್ಷಣಾ ಕಾಯ್ದೆ- 2019.
ಬಿ. ಗ್ರಾಹಕರ ಸಂರಕ್ಷಣಾ ಕಾಯ್ದೆ- 2019.
ಸಿ. ಗ್ರಾಹಕರ ಕುಂದು ಕೊರತೆಗಳ ನಿವಾರಣೆ ಕಾಯ್ದೆ- 2020.
ಡಿ. ದಾರಿ ತಪ್ಪಿಸುವ ಜಾಹೀರಾತು ನಿಯಂತ್ರಣ ಕಾಯ್ದೆ- 2014.
ಉತ್ತರ : ಬಿ

4. ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರಕ್ಕೆ ಕೆಳಗಿನ ಯಾವ ಅಧಿಕಾರಗಳನ್ನು ನೀಡಲಾಗಿದೆ?
1. 10 ಲಕ್ಷ ರೂ ವರೆಗೂ ದಂಡ ವಿಧಿಸುವ ಅಧಿಕಾರ.
2. ನಿರಂತರವಾಗಿ ತಪ್ಪು ಮಾಡಿದರೆ 50 ಲಕ್ಷ ರೂ ವರೆಗೂ ದಂಡ ವಿಧಿಸುವ ಅಧಿಕಾರ.
ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.
ಎ. 1 ಮಾತ್ರ ಬಿ. 2 ಮಾತ್ರ
ಸಿ. 1 ಮತ್ತು 2 ಡಿ. ಮೇಲಿನ ಎರಡು ಹೇಳಿಕೆಗಳು ತಪ್ಪಾಗಿವೆ.
ಉತ್ತರ : ಸಿ

5. ವಿಶ್ವಸಂಸ್ಥೆಯ ವರದಿಯ ಅನ್ವಯ ಸುಸ್ಥಿರ ಅಭಿವೃದ್ಧಿ ಗುರಿಗಳು ಸಾಧನೆಯಾಗಲು ಕೆಳಗಿನ ಯಾವ ಕಾರಣಗಳಿಂದ ವಿಳಂಬವಾಗುತ್ತದೆ ಎಂದು ಉಲ್ಲೇಖಿಸಿದೆ?
1. ಹವಾಮಾನ ಬದಲಾವಣೆ.
2. ಸಾಲದ ವೆಚ್ಚದಲ್ಲಿ ಹೆಚ್ಚಳ.
3. ಬಡ್ಡಿ ದರದಲ್ಲಿ ಹೆಚ್ಚಳ.
4. ತೆರಿಗೆ ವಂಚನೆ.
ಕೋಡ್ ಬಳಸಿ ಸರಿ ಉತ್ತರವನ್ನು ಗುರುತಿಸಿ.
ಎ. 1,‌ 2, 3 ಮತ್ತು 4 ಬಿ. 1 ಮತ್ತು 2
ಸಿ. 2 ಮತ್ತು 3 ಡಿ. 3 ಮತ್ತು 4
ಉತ್ತರ : ಎ

6. ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆ ವಿಳಂಬವಾಗುತ್ತದೆ ಎಂದು ಕೆಳಗಿನ ಯಾವ ಸಂಸ್ಥೆ ವರದಿಯನ್ನು ಬಿಡುಗಡೆ ಮಾಡಿದೆ?
ಎ. ಕೇಂದ್ರ ಸಮಾಜ ಕಲ್ಯಾಣ ಇಲಾಖೆ.
ಬಿ. ಅಂತರರಾಷ್ಟ್ರೀಯ ಹಣಕಾಸು ನಿಧಿ.
ಸಿ. ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ.
ಡಿ. ವಿಶ್ವಸಂಸ್ಥೆ.
ಉತ್ತರ : ಡಿ

7. ಆರನೇ ಅನುಸೂಚಿಯ ಅಡಿಯಲ್ಲಿ ಸ್ಥಾಪನೆಯಾಗಿರುವ ಸ್ವಾಯತ್ತತಾ ಜಿಲ್ಲಾ ಮಂಡಳಿಗಳು ಕೆಳಗಿನ ಯಾವ ವಿಚಾರಕ್ಕೆ ಸಂಬಂಧಿಸಿದ ನಿಯಮಾವಳಿಗಳನ್ನು ರೂಪಿಸಬಹುದು?
1. ಭೂಮಿ.
2. ಕೃಷಿ ವಲಯ.
3. ಅರಣ್ಯ.
4. ಆಂತರಿಕ ಭದ್ರತೆ.
ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.
ಎ. 1, 2 ಮತ್ತು 3 ಬಿ. 1 ಮತ್ತು 4
ಸಿ. 2 ಮತ್ತು 4 ಡಿ. 3 ಮತ್ತು 4
ಉತ್ತರ : ಎ

8. ಕೆಳಗಿನ ಯಾವ ರಾಜ್ಯಗಳಲ್ಲಿರುವ ಬುಡಕಟ್ಟುಗಳಿಗೆ ಆರನೇ ಅನುಸೂಚಿಯಲ್ಲಿ ಸ್ಥಾನಮಾನವನ್ನು ಕಲ್ಪಿಸಲಾಗಿದೆ?
1. ಅಸ್ಸಾಂ.
2. ಮೇಘಾಲಯ.
3. ತ್ರಿಪುರ.
4. ಮಣಿಪುರ.
5. ಅರುಣಾಚಲ ಪ್ರದೇಶ.
ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.
ಎ. 1 ಮತ್ತು 2 ಬಿ. 1, 2, 3 ಮತ್ತು 4
ಸಿ. 2 ಮತ್ತು 5 ಡಿ. 3 ಮತ್ತು 4
ಉತ್ತರ : ಬಿ

9. ಕೆಳಗಿನ ಯಾವ ಕೈಗಾರಿಕಾ ವಲಯಗಳಲ್ಲಿ ಚಿನ್ನವನ್ನು ಬಳಸಲಾಗುತ್ತದೆ?
1. ವಿದ್ಯುನ್ಮಾನ ವಲಯ.
2. ದಂತ ವೈದ್ಯಕೀಯ ವಲಯ.
3. ವಿಮಾನಯಾನ.
4. ವೈದ್ಯಕೀಯ ಸಲಕರಣೆಗಳ ಉತ್ಪಾದನೆ.
ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.
ಎ. 1 ಮಾತ್ರ ಬಿ. 2 ಮಾತ್ರ
ಸಿ. 1, 2, 3 ಮತ್ತು 4 ಡಿ. 2 ಮತ್ತು 4
ಉತ್ತರ : ಸಿ

10. ಕೆಳಗಿನ ಯಾವ ರಾಷ್ಟ್ರಗಳಲ್ಲಿ ಚಿನ್ನವನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ?
1. ಚೀನಾ.
2. ಆಸ್ಟ್ರೇಲಿಯಾ.
3. ರಷ್ಯಾ.
4. ಕೆನಡಾ.
5. ಅಮೆರಿಕ.
6. ಸ್ವಿಟ್ಜರ್ಲ್ಯಾಂಡ್.
ಕೋಡ್ ಬಳಸಿ ಸರಿ ಉತ್ತರವನ್ನು ಗುರುತಿಸಿ.
ಎ. 1, 2, 3, 4 ಮತ್ತು 5 ಬಿ. 1, 3, 4, 5 ಮತ್ತು 6
ಸಿ. 3 ಮತ್ತು 5 ಡಿ. 4 ಮತ್ತು 6.
ಉತ್ತರ : ಎ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT