ನೋವು, ದುಗುಡ, ಆತಂಕ ಹೀಗೆ ಮಾನಸಿಕ ತೊಳಲಾಟದಲ್ಲಿರುವವರ ಪ್ರಶ್ನೆಗಳಿಗೆ ತಜ್ಞರು ಈ ಅಂಕಣದಲ್ಲಿ ಉತ್ತರಿಸಲಿದ್ದಾರೆ.

ನಮಸ್ತೆ, ಬೆಂಗಳೂರಿನಲ್ಲಿ ನೆಲಸಿರುವ ನಮಗೆ ಇಬ್ಬರು ಮಕ್ಕಳು. ಮಗ ಎಂಬಿಎ ಹಾಗೂ ಮಗಳು ಎಂಜಿನಿಯರಿಂಗ್ ಓದಿ, ಕೆಲಸಕ್ಕೆ ಸೇರಿಕೊಂಡಿದ್ದಾರೆ. ಇಬ್ಬರೂ ತಮ್ಮ ತಮ್ಮ ವೃತ್ತಿಯ ಅನುಕೂಲಕ್ಕಾಗಿ ಇದೇ ಊರಿನಲ್ಲಿ ಬೇರೆ ಬೇರೆ ಮನೆ ಮಾಡಿಕೊಂಡಿದ್ದಾರೆ. ಮಕ್ಕಳನ್ನು ಚೆನ್ನಾಗಿ ಓದಿಸಿ, ಮುಂದೆ ನಾವೆಲ್ಲರೂ ಒಟ್ಟಿಗೆ ಸುಖವಾಗಿರಬೇಕು ಎಂದುಕೊಂಡಿದ್ದೆವು. ಆದರೆ ಮಕ್ಕಳು ಹೀಗೇಕೆ ಮಾಡುತ್ತಾರೆ? ಪಾಲಕರ ಪ್ರೀತಿ, ಕಾಳಜಿ ಅವರಿಗೆ ಅರ್ಥವಾಗುವುದಿಲ್ಲವೇ? ಅವರನ್ನು ವಾಪಸ್ ಮನೆಗೆ ಕರೆತರಲು ಹೇಗೆ ಮನವೊಲಿಸುವುದು?

–ರಘುರಾಮ, ಬೆಂಗಳೂರು

ವಿಶೇಷವಾಗಿ, ಇವತ್ತಿನ ಮೆಟ್ರೊ ನಗರಗಳಲ್ಲಿ ಜೀವನಪದ್ಧತಿ, ರೀತಿ, ರಿವಾಜುಗಳು ನಮ್ಮ ಕಲ್ಪನೆಗೂ ಮೀರಿ ಬದಲಾಗಿವೆ. ಬೆಂಗಳೂರಿನಲ್ಲಿ ಇದು ಬೆಳೆಯುತ್ತಿರುವ ಸಂಕೀರ್ಣವಾದ ಸಾಮಾಜಿಕ ಸಮಸ್ಯೆಯಾಗಿದೆ. ಇದರಲ್ಲಿ ಯಾರದ್ದು ಸರಿ, ಯಾರದ್ದು ತಪ್ಪು ಎಂದು ನಿಖರವಾಗಿ ಬೆರಳು ಮಾಡಿ ತೋರಿಸುವುದು ಕಷ್ಟ.

ಮಕ್ಕಳನ್ನು ಬೆಳೆಸುವ ವಿಧಾನದಲ್ಲಿ ಪಾಲಕರು ಎಡವಿದ್ದನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ಹಾಗಂತ ನಿಮ್ಮಿಂದಲೇ ಏನೋ, ಎಲ್ಲವೂ ತಪ್ಪಾಗಿದೆ ಎಂದು ಪಶ್ಚಾತ್ತಾಪ ಪಡುವ ಅಗತ್ಯವಿಲ್ಲ. ಹಾಗೆ ಮಾಡುವುದರಿಂದ ಪ್ರಯೋಜನವಿಲ್ಲ. ಖಲೀಲ್ ಗಿಬ್ರಾನ್ ಹೇಳಿದಂತೆ, ‘ನಾವು ನಮ್ಮ ಮಕ್ಕಳ ಯಜಮಾನರಲ್ಲ. ನಮ್ಮ ಮೂಲಕ ನಮ್ಮ ಮಕ್ಕಳು ಈ ಭೂಮಿಗೆ ಬರುವುದಕ್ಕೆ ಕಾರಣರಷ್ಟೇ!’. ಮಕ್ಕಳನ್ನು ಪ್ರೀತಿಸಬೇಕು. ನಮ್ಮ ಕೈಲಾದಷ್ಟು ಕಾಳಜಿಯಿಂದ ಅವರನ್ನು ಸಾಕಬೇಕು. ಅವರನ್ನು ಹೆತ್ತು , ಹೊತ್ತು ಬೆಳೆಸುವ ಪ್ರಕ್ರಿಯೆಯಲ್ಲಿ ನಮಗೆ ಸಂತೋಷ, ಸಾರ್ಥಕತೆ ಸಿಗುತ್ತದೆ. ಅಷ್ಟು ಮಾತ್ರ ಪಾಲಕರಿಗೆ ಸಿಗುವ ಸುಖ. ಇನ್ನು ಮಕ್ಕಳು ಪಾಲಕರನ್ನು ಅಷ್ಟೇ ಕಾಳಜಿಯಿಂದ, ಪ್ರೀತಿಯಿಂದ ನೋಡಿಕೊಂಡರೆ ಅದು ಪಾಲಕರ ವಿಶೇಷ ಪುಣ್ಯ. ಆದರೆ, ಮಕ್ಕಳು ಚಿಕ್ಕಂದಿನಿಂದ ಯಾವ ಪರಿಸರದಲ್ಲಿ ಬೆಳೆಯುತ್ತಾರೋ ಆ ಪರಿಸರದ ಪ್ರಭಾವಕ್ಕೆ ಒಳಗಾಗುತ್ತಾರೆ.

ಇನ್ನು, ನಿಮ್ಮ ಮನೆಯಲ್ಲಿ ಮಕ್ಕಳು ಹುಟ್ಟಿದಾಗಿನಿಂದಲೂ ಹೆಚ್ಚಾಗಿ ನೀವು ನಾಲ್ವರೇ ಇದ್ದೀರಿ. ಮನೆಗೆ ಬಂದು ಹೋಗುವವರು, ನೆಂಟರಿಷ್ಟರು ಇದ್ದಾರಾದರೂ ಯಾರಿಗೂ ಯಾರೊಂದಿಗೂ ಅವಿನಾಭಾವ ಸಂಬಂಧ ಇಲ್ಲ. ಮಕ್ಕಳು ಹಾಗೆಯೇ ಬೆಳೆದಿದ್ದಾರೆ. ಅವರಿಗೆ ಅಜ್ಜ– ಅಜ್ಜಿಯ ವಾತ್ಸಲ್ಯದ ಬಿಸುಪು ಸಿಗಲಿಲ್ಲ. ಕೂಡು ಕುಟುಂಬದ ಸಕಾರಾತ್ಮಕ ಪರಿಣಾಮ ಇರುವುದು ಇಲ್ಲಿಯೇ. ಮನೆಯಲ್ಲಿ ಎಲ್ಲರೂ ಒಟ್ಟಿಗೆ ಊಟ, ತಿಂಡಿ ಮಾಡುವ ರೂಢಿಯಿಂದಲೂ ಒಳ್ಳೆಯದಾಗುತ್ತದೆ. ನಾವಿಬ್ಬರು– ನಮಗಿಬ್ಬರು ಎನ್ನುವ ಕುಟುಂಬಕ್ಕಿಂತಲೂ ಕೂಡು
ಕುಟುಂಬದಲ್ಲಿ ಇರುವವರು ಹೆಚ್ಚು ನೆಮ್ಮದಿಯಿಂದ, ಮಾನಸಿಕ ಆರೋಗ್ಯದಿಂದ ಇರುತ್ತಾರೆ. ಇದು ಕಾಲಾಂತರದಿಂದ ನಡೆದುಬಂದ ಕೌಟುಂಬಿಕ ವ್ಯವಸ್ಥೆ. ಕಾರಣಾಂತರಗಳಿಂದ ನಾವಿಬ್ಬರು – ನಮಗಿಬ್ಬರು ಕುಟುಂಬಗಳು ಹೆಚ್ಚಾಗಿವೆ. ಇದರ ಪರಿಣಾಮವನ್ನು ಈಗಿನ ಪಾಲಕರು ಅನುಭವಿಸಬೇಕಾಗಿದೆ. ಇನ್ನು, ಹದಿಹರೆಯವನ್ನು ದಾಟಿದ ಮಕ್ಕಳಿಗೆ ಸ್ವಾತಂತ್ರ್ಯ ಬೇಕು ಎನಿಸುತ್ತದೆ. ತಮ್ಮಿಚ್ಛೆಯ ಬದುಕನ್ನು ಕಟ್ಟಿಕೊಳ್ಳುವ
ಅವಸರವಿರುತ್ತದೆ.

ಯಶಸ್ಸಿನ ಬಗ್ಗೆ ಏನೇನು ಕಲ್ಪನೆಗಳನ್ನು ಪಾಲಕರು ಮಕ್ಕಳ ತಲೆಯಲ್ಲಿ ತುಂಬಿರುತ್ತಾರೋ ಅವುಗಳ ಸಾಧ್ಯತೆಯನ್ನು ಸಾಧಿಸಲು ಅವರು ಮುನ್ನುಗ್ಗುತ್ತಾರೆ. ಅವರಿಗೆ ಅದಕ್ಕಿಂತಲೂ ಹೆಚ್ಚಿನ ಮಹತ್ವದ್ದು ಬೇರೆ ಯಾವುದೂ ಕಾಣುವುದಿಲ್ಲ ಅಥವಾ ಅವರಿಗೆ ಪಾಲಕರ ಇಂದಿನ ಮಾನಸಿಕ ಬೇಗುದಿಯಾಗಲೀ ಪಾಲಕರಿಗೆ ತಮ್ಮ ಅಗತ್ಯವಿದೆ ಎನ್ನುವುದಾಗಲೀ ತಿಳಿಯುವುದಿಲ್ಲ. ಅವೆಲ್ಲವೂ ಅವರು ಪಾಲಕರಾಗಿ, ಅವರಿಗೆ ನಿಮ್ಮಷ್ಟು ವಯಸ್ಸಾದಾಗ ಅರ್ಥವಾದೀತು. ಹಾಗಾಗಿ, ನೀವು ಮಕ್ಕಳ ನಿರ್ಧಾರಗಳ ಬಗ್ಗೆ ಜಾಸ್ತಿ ಚಿಂತೆ ಮಾಡಬೇಡಿ. ಅವರನ್ನು ನಿಮ್ಮ ಇಚ್ಛೆಯಂತೆ ಪ್ರೀತಿಸಿ. ನಿಮ್ಮ ಬೇಕು ಬೇಡಗಳ ಬಗ್ಗೆ ಅವರೊಂದಿಗೆ ಮುಕ್ತವಾಗಿ ಮಾತನಾಡಿ. ಅವರು ನಿಮ್ಮಿಂದ ದೂರವಾದರು ಎಂದು ಕೊರಗಬೇಡಿ. ಅವರ ಸ್ವಾತಂತ್ರ್ಯವನ್ನು ಗೌರವಿಸಿ. ನಿಮ್ಮ ನಿರೀಕ್ಷೆಯನ್ನು ಅವರಿಗೆ ತಿಳಿಸಿ. ಅವರೂ ಅರ್ಥ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.