ಶುಕ್ರವಾರ, ಅಕ್ಟೋಬರ್ 22, 2021
29 °C

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾಗ– 72

986. ದ್ವಿದಳಧಾನ್ಯಗಳು ಯಾವ ಪೋಷಕಾಂಶಗಳ ಉತ್ತಮ ಆಕರವಾಗಿವೆ?

ಎ) ಶರ್ಕರಪಿಷ್ಟಗಳು

ಬಿ) ಕೊಬ್ಬು

ಸಿ) ಜೀವಸತ್ವಗಳು

ಡಿ) ಸಸಾರಜನಕಗಳು

987. ಯಾವ ರಾಜ್ಯದಲ್ಲಿ ‘ಮೋಪ್ಲಾ’ ಕ್ರಾಂತಿ ನಡೆಯಿತು?

ಎ) ಬಂಗಾಳ

ಬಿ) ಕೇರಳ

ಸಿ) ಕಾಶ್ಮೀರ

ಡಿ) ಅಸ್ಸಾಂ

988. ‘ಅದ್ವೈತ’ ಸಿದ್ಧಾಂತವನ್ನು ಪ್ರತಿಪಾದಿಸಿದವರು ಯಾರು?

ಎ) ಶಂಕರಾಚಾರ್ಯರು

ಬಿ) ರಾಮಾನುಜಾಚಾರ್ಯರು

ಸಿ) ಭಾಸ್ಕರಾಚಾರ್ಯರು

ಡಿ) ಮಧ್ವಾಚಾರ್ಯರು

989. ಮಗಧ ಸಾಮ್ರಾಜ್ಯದ ರಾಜಧಾನಿ ಯಾವುದಾಗಿತ್ತು?

ಎ) ಕಾಂಪಿಲ್ಯ

ಬಿ) ಪಾಟಲೀಪುತ್ರ

ಸಿ) ಬನಾರಸ್‌

ಡಿ) ಕುರುಕ್ಷೇತ್ರ

990. ಕೆಳಗಿನ ಯಾವ ಸ್ಥಳದಲ್ಲಿ 1890 ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಲಾಯಿತು?

ಎ) ಬೆಳಗಾವಿ

ಬಿ) ಧಾರವಾಡ

ಸಿ) ಕಾರವಾರ

ಡಿ) ಶಿವಮೊಗ್ಗ

991. ಕರ್ನಾಟಕಕ್ಕೆ ಸಂಬಂಧಿಸಿದ ಕಲೆ ಯಾವುದು?

ಎ) ಕಥಕ್ಕಳಿ

ಬಿ) ಕಥಕ್

ಸಿ) ಕುಚಿಪುಡಿ

ಡಿ) ಯಕ್ಷಗಾನ

992. ಕೃಷ್ಣದೇವರಾಯ ಯಾವ ರಾಜವಂಶಕ್ಕೆ ಸೇರಿದವನು?

ಎ) ಸಂಗಮ

ಬಿ) ಸಾಳುವ

ಸಿ) ತುಳುವ

ಡಿ) ಅರವೀಡು

993. ಕರ್ನಾಟಕದ ಯಾವ ಜಿಲ್ಲೆಯು 1930ರ ಕಾನೂನುಭಂಗ ಚಳವಳಿಯಲ್ಲಿ ಮಹತ್ವದ ಪಾತ್ರ ವಹಿಸಿತ್ತು?

ಎ) ಬೆಂಗಳೂರು

ಬಿ) ಮೈಸೂರು

ಸಿ) ಕೋಲಾರ

ಡಿ) ಉತ್ತರ ಕನ್ನಡ

994. ಕೆಳಗಿನವುಗಳಲ್ಲಿ ಯಾವುದು ಕಬ್ಬಿಣದ ಅದಿರಲ್ಲ?

ಎ) ಹೆಮಟೈಟ್‌

ಬಿ) ಮ್ಯಾಗ್ನಟೈಟ್

ಸಿ) ಮ್ಯಾಲಚೈಟ್‌

ಡಿ) ಲಿಮೊನೈಟ್

995. ಕೆಳಗಿನ ಸರಣಿಯಲ್ಲಿ ಬಿಟ್ಟುಹೋದ ಸಂಖ್ಯೆಯನ್ನು ಕಂಡುಹಿಡಿಯಿರಿ.

7, 10, 8, 11, 9, 12 ?

ಎ) 7

ಬಿ) 10

ಸಿ) 12

ಡಿ) 13

996. ಯಾವ ಸ್ಥಳದಲ್ಲಿ 1906ರಲ್ಲಿ ಅಖಿಲ ಭಾರತ ಮುಸ್ಲಿಂ ಲೀಗ್‌ ಸ್ಥಾಪಿಸಲಾಯಿತು?

ಎ) ಢಾಕಾ

ಬಿ) ಇಸ್ಲಾಮಾಬಾದ್

ಸಿ) ಲಾಹೋರ್‌

ಡಿ) ಮಸ್ಕತ್

997. 1924-25 ರಲ್ಲಿ ನಡೆದ ‘ವೈಕೊಂ’ ಸತ್ಯಾಗ್ರಹಕ್ಕೆ ಸಂಬಂಧಿಸಿದವರು ಯಾರು?

ಎ) ಟಿ.ಕೆ.ಮಾಧವನ್‌

ಬಿ) ನಾರಾಯಣಗುರು

ಸಿ) ಬಲರಾಮ ವರ್ಮಾ

ಡಿ) ಕೆ.ಕೇಳಪ್ಪನ್

998. ಶರಾವತಿ ನದಿಯಿಂದ ಯಾವ ಜಲಪಾತ ಉಂಟಾಗಿದೆ?

ಎ) ಮಾಗೋಡು ಜಲಪಾತ

ಬಿ) ಜೋಗ ಜಲಪಾತ

ಸಿ) ಹೆಬ್ಬೆ ಜಲಪಾತ

ಡಿ) ಗೋಕಾಕ ಜಲಪಾತ

999. ಕೆಳಗಿನವುಗಳಲ್ಲಿ ಯಾವುದು ವಿಶ್ವಸಂಸ್ಥೆಯ ಪ್ರಮುಖ ಅಂಗವಲ್ಲ?

ಎ) ವಿಶ್ವಸಂಸ್ಥೆಯ ಸಚಿವಾಲಯ

ಬಿ) ಭದ್ರತಾ ಮಂಡಳಿ

ಸಿ) ಇಂಟರ್‌ ನ್ಯಾಷನಲ್‌ ಕೋರ್ಟ್‌ ಆಫ್‌ ಜಸ್ಟಿಸ್

ಡಿ) ಅಂತರರಾಷ್ಟ್ರೀಯ ಹಣಕಾಸು ನಿಧಿ

1000. ಕೆಳಗಿನವುಗಳಲ್ಲಿ ಯಾವ ದೇಶವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವ ಹೊಂದಿಲ್ಲ?

ಎ) ಚೀನಾ

ಬಿ) ಜರ್ಮನಿ

ಸಿ) ಫ್ರಾನ್ಸ್‌

ಡಿ) ರಷ್ಯಾ

ಭಾಗ 71ರ ಉತ್ತರಗಳು: 971. ಬಿ, 972. ಎ, 973. ಡಿ, 974. ಎ, 975. ಸಿ, 976. ಎ, 977. ಡಿ, 978. ಎ, 979. ಡಿ, 980. ಬಿ, 981. ಸಿ, 982. ಸಿ, 983. ಎ, 984. ಬಿ, 985. ಡಿ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.