ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯು ಪೂರಕ ಪರೀಕ್ಷೆ: ಶೇ 28ರಷ್ಟು ಫಲಿತಾಂಶ

Last Updated 26 ಜುಲೈ 2018, 12:41 IST
ಅಕ್ಷರ ಗಾತ್ರ

ಬೆಂಗಳೂರು:ಪದವಿ ಪೂರ್ವ ಶಿಕ್ಷಣ ಇಲಾಖೆ ಜೂನ್‌ನಲ್ಲಿ ನಡೆಸಿದ್ದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳ ಫಲಿತಾಂಶ ಗುರುವಾರ ಪ್ರಕಟಿಸಿದೆ.

ಆನ್‌ಲೈನ್‌ನಲ್ಲಿ ಫಲಿತಾಂಶ ಲಭ್ಯವಿದ್ದು, ಕಾಲೇಜುಗಳಲ್ಲಿ ಶುಕ್ರವಾರ ಫಲಿತಾಂಶ ಪ್ರಕಟವಾಗಲಿದೆ. ಪ್ರಸಕ್ತ ಸಾಲಿನಲ್ಲಿ 2,24,879 ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ಹಾಜರಾಗಿದ್ದು, ಅವರ ಪೈಕಿ 63,652 ಮಂದಿ ತೇರ್ಗಡೆ ಹೊಂದಿದ್ದಾರೆ. ಶೇ 28.30 ಫಲಿತಾಂಶ ದಾಖಲಾಗಿದೆ.

ಜೂನ್‌ 29ರಿಂದ ಜುಲೈ 10ನೇ ತಾರೀಕಿನವರೆಗೆ ಒಟ್ಟು 301 ಪರೀಕ್ಷಾ ಕೇಂದ್ರಗಳಲ್ಲಿ ಪೂರಕ ಪರೀಕ್ಷೆ ನಡೆದಿತ್ತು.2017ನೇ ಸಾಲಿನ ಪೂರಕ ಪರೀಕ್ಷೆಯಲ್ಲಿ ಶೇ. 26.34 ಫಲಿತಾಂಶ ಪ್ರಕಟವಾಗಿದ್ದರೆ, ಈ ಬಾರಿ ಶೇ. 28.30 ಫಲಿತಾಂಶ ದಾಖಲಾಗಿದೆ.

ಪರೀಕ್ಷೆಗೆ ಹಾಜರಾದ 1,33,216 ಬಾಲಕರ ಪೈಕಿ 35,051 ಮಂದಿ ತೇರ್ಗಡೆಯಾಗಿ ಶೇ 26.31 ಫಲಿತಾಂಶ ಬಂದಿದ್ದರೆ, 91,663 ಬಾಲಕಿಯರ ಪೈಕಿ 28,601 ಮಂದಿ ಪಾಸಾಗಿ, ಶೇ 31.20 ಫಲಿತಾಂಶ ಬಂದಿದೆ.

ಉತ್ತರ ಪತ್ರಿಕೆಯ ಪ್ರತಿ, ಮರುಮೌಲ್ಯಮಾಪನ ಹಾಗು ಮರುಎಣಿಕೆಗೆ ಆನ್‌ಲೈನ್ ಅರ್ಜಿ ಸಲ್ಲಿಸಬಹುದಾಗಿದೆ. ನಕಲು ಪ್ರತಿಗೆ ಅರ್ಜಿ ಸಲ್ಲಿಸಲು ಜುಲೈ 30 ಕೊನೆಯ ದಿನವಾಗಿದೆ.ಉತ್ತರ ಪತ್ರಿಕೆಯ ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಅರ್ಜಿ ಸಲ್ಲಿಸಲು ಆಗಸ್ಟ್‌ 4 ಕೊನೆಯ ದಿನ.

ಮರು ಎಣಿಕೆ, ಮರು ಮೌಲ್ಯಮಾಪನ ಪೂರ್ಣಗೊಂಡ ನಂತರ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಪತ್ರಗಳನ್ನು ಆಯಾ ಕಾಲೇಜುಗಳಿಗೆ ಕಳುಹಿಸಿಕೊಡಲಾಗುವುದು ಎಂದು ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT