ಭಾನುವಾರ, ಅಕ್ಟೋಬರ್ 2, 2022
21 °C

ಬ್ಯಾಂಕಿಂಗ್‌ ನೇಮಕಾತಿಗೆ ಹೊಸ ನಿಯಮಗಳು: ಗಮನಿಸಬೇಕಾದ ಅಂಶಗಳೇನು?

ಆರ್.ಕೆ.ಬಾಲಚಂದ್ರ Updated:

ಅಕ್ಷರ ಗಾತ್ರ : | |

ಎಸ್‌ ಬಿಐ – ಜೂನಿಯರ್‌ ಅಸೋಸಿಯೇಟ್‌ ನೇಮಕಾತಿ ಪ್ರಕ್ರಿಯೆಯಲ್ಲಿ ಹೊಸ ನಿಯಮಗಳನ್ನು ಪರಿಚಯಿಸಲಾಗಿದೆ. ಆ ನಿಯಮಗಳು ಹಾಗೂ ಆಯ್ಕೆ ಪ್ರಕ್ರಿಯೆ ಕುರಿತ ವಿವರಣೆ ಇಲ್ಲಿದೆ.

ಭಾರತೀಯ ಸ್ಟೇಟ್‌ ಬ್ಯಾಂಕ್(ಎಸ್‌ಬಿಐ) 5,008 ಜೂನಿಯರ್ ಅಸೋಸಿಯೇಟ್‌ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ. ರಾಜ್ಯಕ್ಕೆ ಸಂಬಂಧಿಸಿದಂತೆ ಬೆಂಗಳೂರು ವೃತ್ತದಲ್ಲಿ 316 ಹುದ್ದೆಗಳಿದ್ದು, ಇದರ ಜೊತೆಗೆ ಹೆಚ್ಚುವರಿಯಾಗಿ127 ಬ್ಯಾಕ್‌ಲಾಗ್‌ ಖಾಲಿ ಹುದ್ದೆಗಳಿವೆ. ಅರ್ಜಿ ಸಲ್ಲಿಕೆ ಹಾಗೂ ಆಯ್ಕೆಗೆ ಸಂಬಂ ಧಿಸಿದ ಕೆಲವು ಮಾಹಿತಿಗಳನ್ನು ಕಳೆದ ಸಂಚಿಕೆಯಲ್ಲಿ ತಿಳಿಸಲಾಗಿತ್ತು.

ಆಯ್ಕೆ ಪ್ರಕ್ರಿಯೆ

ಜೂನಿಯರ್ ಅಸೋಸಿಯೇಟ್ಸ್‌ಗೆ(ಕಸ್ಟಮರ್ ಸಪೋರ್ಟ್ ಮತ್ತು ಸೇಲ್ಸ್) ಸಂಬಂಧಿಸಿದಂತೆ ಎರಡು ಹಂತದ ಪರೀಕ್ಷೆಗಳಿರುತ್ತವೆ. ಆದರೆ ಸಂದರ್ಶನ ಇರುವು ದಿಲ್ಲ. ಈ ಕಾರಣದಿಂದಾಗಿಯೇ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆ ಪ್ರಾಮುಖ್ಯ ಪಡೆದುಕೊಂಡಿದ್ದು, ಅತ್ಯಂತ ಗಂಭೀರವಾಗಿ ಪರೀಕ್ಷೆ ಎದುರಿಸಬೇಕು. ಪೂರ್ವಭಾವಿ ಪರೀಕ್ಷೆ ನಿಮ್ಮನ್ನು ಮುಂದಿನ ಹಂತಕ್ಕೆ ಕರೆದೊಯ್ಯುವ ಮೆಟ್ಟಿಲಾದರೆ, ಮುಖ್ಯ ಪರೀಕ್ಷೆ ಕೆಲಸವನ್ನು ಕೊಡಿಸಲು ಸಹಕಾರಿಯಾಗುತ್ತದೆ.

ಹೊಸ ನಿಯಮಗಳೇನು?

l→ಈ ಹಿಂದೆ ಎಸ್‌ಬಿಐನಲ್ಲಿ ‌ಗುಮಾಸ್ತರಾಗಿ ಸೇವೆ ಸಲ್ಲಿಸಿ ರಾಜೀನಾಮೆ ನೀಡಿರುವ ಅಭ್ಯರ್ಥಿಗಳು ಈಗ ಪರೀಕ್ಷೆ ಬರೆಯಲು ಅವಕಾಶವಿಲ್ಲ.

l→ಬ್ಯಾಂಕ್‌ಗಳು ಅಥವಾ ಎನ್‌ಬಿಎಫ್‌ಸಿಗಳಲ್ಲಿ ಸಾಲ ಮರುಪಾವತಿ ಮಾಡದೇ ಡೀಫಾಲ್ಟ್ ಆದ ಅಭ್ಯರ್ಥಿಗಳು ಆಯ್ಕೆಯಾದ ಪಕ್ಷದಲ್ಲಿ ಬ್ಯಾಂಕ್‌ಗೆ ಸೇರುವ ದಿನಾಂಕದಂದು ಅಥವಾ ಮೊದಲು ಸಾಲಪಡೆದ ಬ್ಯಾಂಕ್‌ನಿಂದ ಎನ್‌ಒಸಿ(ನಿರಪೇಕ್ಷಣಾ ಪತ್ರ) ಸಲ್ಲಿಸಬೇಕು ಅಥವಾ ಸಿಬಿಲ್‌(CIBIL) ವರದಿಯನ್ನು ನವೀಕರಿಸಬೇಕು. ಈ  ನಿಯಮ ಪಾಲಿಸದೆ ಇದ್ದಲ್ಲಿ ಆಯ್ಕೆ ಪತ್ರವನ್ನು ಹಿಂಪಡೆಯಲಾಗುತ್ತದೆ/ ರದ್ದುಮಾಡಲಾಗುತ್ತದೆ.

l→ಆನ್‌ಲೈನ್ ಅರ್ಜಿಯನ್ನು ನೋಂದಾಯಿಸಿದ ನಂತರ ಯಾವುದೇ ಅಭ್ಯರ್ಥಿಗಳ ವರ್ಗದ (ಕೆಟಗರಿ ಕುರಿತಂತೆ)ಬದಲಾವಣೆಯನ್ನು ನಂತರ ಅನುಮತಿಸಲಾಗುವುದಿಲ್ಲ.

ಕನಿಷ್ಠ ಅಂಕ ನಿಗದಿಪಡಿಸಿಲ್ಲ

l→ಪೂರ್ವಭಾವಿ ಪರೀಕ್ಷೆಯ ಮೂರು ಪ್ರಶ್ನೆ ಪತ್ರಿಕೆಗಳಿಗೆ ಕನಿಷ್ಠ ಅರ್ಹತಾ ಅಂಕಗಳನ್ನು ನಿಗದಿಪಡಿಸಿಲ್ಲ. ಹಾಗೆಯೇ, ಒಟ್ಟು ಪಡೆಯುವ ಅಂಕಗಳಿಗೂ ಕನಿಷ್ಠ ಇಷ್ಟೇ ಅಂಕ ಪಡೆಯಬೇಕೆಂದನ್ನೂ ನಿಗದಿಪಡಿಸಿಲ್ಲ‌. ವಿಭಾಗವಾರು ಅಂಕಗಳನ್ನು ನಿರ್ವಹಿಸಲಾಗುವುದಿಲ್ಲ ಎಂಬುದನ್ನು ನೆನಪಿಡಿ.

l→ಅಭ್ಯರ್ಥಿಗಳು ಗಳಿಸಿದ ಒಟ್ಟು ಅಂಕಗಳನ್ನು ಅವರೋಹಣ ಕ್ರಮದಲ್ಲಿ ಜೋಡಿಸಿ ಮುಖ್ಯ ಪರೀಕ್ಷೆಗೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. (ಸರಿಸುಮಾರು 1:10ರ ಅನುಪಾತದಲ್ಲಿ)

l→ಅಭ್ಯರ್ಥಿಯು 10 ಅಥವಾ 12ನೇ ತರಗತಿಯವರೆಗೆ ಸ್ಥಳೀಯ ಭಾಷೆಯಲ್ಲಿ ಓದಿದ್ದರೆ ಭಾಷಾ ಪರೀಕ್ಷೆ ಬರೆಯಬೇಕಾಗಿಲ್ಲ. ಯಾರು ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿಯವರೆಗೆ ಕನ್ನಡದಲ್ಲಿ ಅಭ್ಯಾಸ ಮಾಡಿರುವುದಿಲ್ಲವೋ ಅಥವಾ ಕನ್ನಡವನ್ನು ಒಂದು ಭಾಷೆಯಾಗಿ ಕಲಿತಿರುವುದಿಲ್ಲವೋ ಅವರು ಭಾಷಾ ಪರೀಕ್ಷೆ ಬರೆದು ಅರ್ಹತೆ ಪಡೆಯಬೇಕು. ಒಂದು ವೇಳೆ ಭಾಷಾ ಪರೀಕ್ಷೆಯಲ್ಲಿ ವಿಫಲರಾದಲ್ಲಿ ಅವರು ನೇಮಕಕ್ಕೆ ಅನರ್ಹಗೊಳ್ಳುತ್ತಾರೆ.

l→ಮುಖ್ಯ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಒಟ್ಟಾರೆಯಾಗಿ ಕನಿಷ್ಠ ಶೇಕಡಾವಾರು ಅಂಕಗಳನ್ನು ಗಳಿಸುವ ಅಗತ್ಯವಿದೆ ಎಂಬುದನ್ನು ಮರೆಯಬೇಡಿ. (ಎಸ್‌ಸಿ/ಎಸ್‌ಟಿ/ಒಬಿಸಿ/ಅಂಗವಿಕಲರು/ಇಎಸ್‌ಎಂ/ಡಿಇಎಸ್‌ಎಂ ಅಭ್ಯರ್ಥಿಗಳಿಗೆ ಅಂಕಗಳಲ್ಲಿ ಶೇ 5 ರಿಯಾಯಿತಿ).

l ಒಟ್ಟಾರೆಯಾಗಿ ಕನಿಷ್ಠ ಅರ್ಹತಾ ಅಂಕಗಳನ್ನು ಬ್ಯಾಂಕ್‌ ನಿರ್ಧರಿಸುತ್ತದೆ. ಪ್ರತಿ ವಿಷಯದ ಪರೀಕ್ಷೆಗೆ ಸಂಬಂಧಿಸಿದಂತೆ ಕನಿಷ್ಠ ಅರ್ಹತಾ ಅಂಕ ನಿಗದಿಪಡಿಸಿಲ್ಲ. ಮೆರಿಟ್ ಪಟ್ಟಿಯನ್ನು ರಾಜ್ಯವಾರು, ವರ್ಗವಾರು ತಯಾರಿಸಲಾಗುವುದು. ಮುಖ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಅವರು ಗಳಿಸಿದ ಒಟ್ಟು ಅಂಕಗಳ ಆಧಾರದ ಮೇಲೆ ಆಯಾ ರಾಜ್ಯ ಮತ್ತು ವರ್ಗಗಳ ಆಧಾರದಲ್ಲಿ ಅವರೋಹಣ ಕ್ರಮದಲ್ಲಿ ಪ್ರಕಟಿಸಲಾಗುತ್ತದೆ. ಇದು ಅರ್ಹತಾ ಪರೀಕ್ಷೆಯ ನಿಯಮಕ್ಕೆ ಭಿನ್ನವಾಗಿದೆ ಎಂಬುದನ್ನು ಮರೆಯಬೇಡಿ.

l ಪ್ರತಿ ಮೂರು ತಿಂಗಳಿಗೊಮ್ಮೆ ಕಾಯುವಿಕೆ ಪಟ್ಟಿ ಪ್ರಕಟವಾಗಲಿದೆ. ಅಂತಿಮ ಫಲಿತಾಂಶ ಪ್ರಕಟವಾದ ದಿನಾಂಕದಿಂದ ಒಂದು ವರ್ಷಗಳ ಕಾಲ ಈ ಕಾಯುವಿಕೆ ಪಟ್ಟಿಯು ಮಾನ್ಯತೆ ಹೊಂದಿರುತ್ತದೆ.

l→ಒಟ್ಟು ಹುದ್ದೆಗಳಲ್ಲಿ (ರಾಜ್ಯ-ವರ್ಗವಾರು) ಶೇ 50 ರಷ್ಟು ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಕಾಯುವಿಕೆ ಪಟ್ಟಿಯಲ್ಲಿ ಇಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಕೆಲಸಕ್ಕೆ ಬಾರದಿದ್ದಲ್ಲಿ ಅಥವಾ ಸೇರಿ ನಂತರ ರಾಜೀನಾಮೆ ನೀಡಿದಲ್ಲಿ, ಕಾಯುವಿಕೆಯ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ.

ಇದನ್ನೂ ಮುಖ್ಯವಾಗಿ ಗಮನಿಸಿ

l ಜೂನಿಯರ್ ಅಸೋಸಿಯೇಟ್‌ ಹುದ್ದೆ ಆಯ್ಕೆಯಾದವರಿಗೆ ಕನಿಷ್ಠ 6 ತಿಂಗಳ ಪ್ರೊಬೆಷನರಿ ಅವಧಿ ಇರುತ್ತದೆ.

l→ನೇಮಕವಾದ ಅಭ್ಯರ್ಥಿಗಳನ್ನು ಅಂತರ್ ವೃತ್ತ ವರ್ಗಾವಣೆ ಅಥವಾ ಅಂತರ್ ರಾಜ್ಯ ವರ್ಗಾವಣೆ ಮಾಡಲಾಗುವುದಿಲ್ಲ ಎಂಬುದಾಗಿ ಎಸ್‌ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

l ಹೊಸದಾಗಿ ನೇಮಕಗೊಂಡವರು ಮಾರ್ಕೆಟಿಂಗ್‌ನಲ್ಲಿ ಕೌಶಲ ಹೊಂದಿರಬೇಕು ಮತ್ತು ಗ್ರಾಹಕರಿಗೆ ಕರೆಗಳನ್ನು ಮಾಡಲು ಮತ್ತು ಬ್ಯಾಂಕಿಂಗ್ ಸೇವೆಗಳು, ಸಲಹಾ ಸೇವೆಗಳು ಮತ್ತು ಬ್ಯಾಂಕ್ ಆವರಣದೊಳಗೆ ಮತ್ತು ಹೊರಗೆ ಉತ್ಪನ್ನಗಳನ್ನು ಮಾರಾಟ ಇತ್ಯಾದಿಗಳನ್ನು ಒದಗಿಸಬೇಕು.

l→ಕೆಲವೊಮ್ಮೆ ಹೊರಾಂಗಣ ಪ್ರಯಾಣವನ್ನು ಒಳಗೊಂಡಿರಬಹುದು. ಬ್ಯಾಂಕಿನ ಅವಶ್ಯಕತೆಗೆ ಅನುಗುಣವಾಗಿ, ಕೆಲಸದ ಸಮಯ ಮತ್ತು ಪಾಳಿಯಲ್ಲಿ ಕೆಲಸ ಮಾಡಬೇಕಾಗಬಹುದು.

ಪರೀಕ್ಷಾ ಪ್ರಕ್ರಿಯೆ

l→ರಾಜ್ಯದಲ್ಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನ್ನಡದಲ್ಲಿ ಸ್ಪಷ್ಟವಾಗಿ ಮಾತನಾಡಲು ಮತ್ತು ಬರೆಯಲು ತಿಳಿದಿರಬೇಕು.

l→ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.  ಸೆಪ್ಟೆಂಬರ್ 27, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿವರಗಳಿಗಾಗಿ ವೆಬ್ ಲಿಂಕ್: https://bank.sbi/careers, https://www.sbi.co.in/careers

l→ಮೊದಲ ಹಂತ: ಆನ್‌ಲೈನ್‌ ಪೂರ್ವಭಾವಿ ಪರೀಕ್ಷೆ – ನವೆಂಬರ್, 2022

l→ಎರಡನೇ ಹಂತ: ಆನ್‌ಲೈನ್‌ ಮುಖ್ಯ ಪರೀಕ್ಷೆ – ಡಿಸೆಂಬರ್ 2022 / ಜನವರಿ, 2023 .ಇಂಗ್ಲಿಷ್‌ ಭಾಷೆ ಒಂದನ್ನು ಹೊರತುಪಡಿಸಿ ಮತ್ತೆಲ್ಲಾ ಪ್ರಶ್ನೆಗಳು ಕನ್ನಡ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಇರುತ್ತದೆ. ತಪ್ಪು ಉತ್ತರ ಗುರುತಿಸಿದಲ್ಲಿ, ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ಆಯಾ ವಿಷಯಕ್ಕೆ ಪ್ರತಿ ಪ್ರಶ್ನೆಗೆ ನಿಗದಿ ಪಡಿಸಿದ ಅಂಕದ 0.25 ಅಂಕವನ್ನು ಋಣಾತ್ಮಕ ಮೌಲ್ಯಮಾಪನದ ನಿಯಮದಂತೆ ಗಳಿಸಿದ ಅಂಕದಿಂದ ಕಳೆಯಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ:022-22820427

(ಲೇಖಕರು: ಬ್ಯಾಂಕಿಂಗ್ ಮತ್ತು ವ್ಯಕ್ತಿತ್ವ ವಿಕಸನ ತರಬೇತು ದಾರರು, ಹಾಗೂ ವೃತ್ತಿ ಮಾರ್ಗದರ್ಶಕರು, ಮಡಿಕೇರಿ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು