ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ವೇತನ ಕ್ರೆಡಿಟ್ ಸ್ವಿಸ್ ಸ್ಕಾಲರ್‌ಷಿಪ್ 2022

Last Updated 4 ಡಿಸೆಂಬರ್ 2022, 20:15 IST
ಅಕ್ಷರ ಗಾತ್ರ

ಕ್ರೆಡಿಟ್ ಸ್ವಿಸ್ ಸ್ಕಾಲರ್‌ಷಿಪ್ 2022

ಎಂಬಿಎ/ಎಂಎ(ಅರ್ಥಶಾಸ್ತ್ರ) ಪದವಿಗೆ ದಾಖಲಾಗಿರುವ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಬೆಂಬಲ ನೀಡುವುದಕ್ಕಾಗಿ ‘ಕ್ರೆಡಿಟ್‌ ಸ್ವಿಸ್‌ ಸ್ಕಾಲರ್‌ಷಿಪ್‌ 2022‘ ವಿದ್ಯಾರ್ಥಿ ವೇತನ ಕಾರ್ಯಕ್ರಮ ರೂಪಿಸಲಾಗಿದೆ. ಈ ಸಂಬಂಧ ಆಸಕ್ತ ವಿದ್ಯಾರ್ಥಿಗಳಿಂದ ‘ಬಡ್ಡಿ4ಸ್ಟಡಿ’ ಸಂಸ್ಥೆಯು ಅರ್ಜಿಗಳನ್ನು ಆಹ್ವಾನಿಸಿದೆ.

l ಅರ್ಹತೆ: ಅರ್ಜಿದಾರ ವಿದ್ಯಾರ್ಥಿಗಳು ಎಂಬಿಎ ಅಥವಾ ಎಂಎ ನಲ್ಲಿ ಅರ್ಥಶಾಸ್ತ್ರ ಕೋರ್ಸ್‌ಗೆ ದಾಖಲಾಗಿರಬೇಕು. 12ನೇ ತರಗತಿಯಲ್ಲಿ ಶೇ 60 ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಕುಟುಂಬದ ವಾರ್ಷಿಕ ಆದಾಯ ₹5 ಲಕ್ಷ ಮೀರಿರಬಾರದು(ಬಡ್ಡಿ4ಸ್ಟಡಿ ಮೂಲಕ ಪರಿಶೀಲನೆಗೆ ಒಳಪಟ್ಟಿರುತ್ತದೆ).

l ಆರ್ಥಿಕ ನೆರವು: ಒಟ್ಟು ಶುಲ್ಕದ ಶೇ 80ವರೆಗೆ ಅಥವಾ ₹ 2 ಲಕ್ಷ , ಯಾವುದು ಕಡಿಮೆಯೋ ಅದು.

l ಅರ್ಜಿ ಸಲ್ಲಿಸಲು ಕೊನೆ ದಿನ: ಡಿ.24, 2022‌

l ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್

l ಹೆಚ್ಚಿನ ಮಾಹಿತಿಗೆ: www.b4s.in/praja/CSE4

ಕೀಪ್‌ ಇಂಡಿಯಾ ಸ್ಮೈಲಿಂಗ್‌ ಸ್ಕಾಲರ್‌ಷಿಪ್‌ ಪ್ರೋಗ್ರಾಮ್‌

ಹತ್ತನೇ ತರಗತಿ ಅಥವಾ ಪಿಯುಸಿ ನಂತರ ಶಿಕ್ಷಣ ಮುಂದುವರಿಸಲು ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು ಕೋಲ್ಗೆಟ್‌–ಪಾಮೊಲಿವ್‌(ಇಂಡಿಯಾ) ಕಂಪನಿ ಮುಂದಾಗಿದೆ. ಈ ಸಂಬಂಧ ಕೀಪ್‌ ಇಂಡಿಯಾ ಸ್ಮೈಲಿಂಗ್ ಫೌಂಡೇಷನ್ ಸ್ಕಾಲರ್‌ಷಿಪ್ ಪ್ರೋಗ್ರಾಂ ರೂಪಿಸಿದೆ. ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

l ಅರ್ಹತೆ: ಎಸ್ಸೆಸ್ಸೆಲ್ಸಿಯಲ್ಲಿ ಶೇ 75 ಅಂಕ ಗಳೊಂದಿಗೆ ಅಥವಾ ಪಿಯುಸಿಯಲ್ಲಿ 12ನೇ ತರಗತಿಯಲ್ಲಿ ಶೇ 60 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಪದವಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಪದವಿ ಮತ್ತು ನಾಲ್ಕು ವರ್ಷದ ವೃತ್ತಿಪರ ಕೋರ್ಸ್‌ಗಳಿಗೆ(ಎಂಜಿನಿಯರಿಂಗ್/ಎಂಬಿಬಿಎಸ್/ಬಿಡಿಎಸ್ ಡೆಂಟಲ್) ದಾಖಲಾಗುವವರು ಅರ್ಜಿ ಸಲ್ಲಿಸಬಹುದು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ₹5 ಲಕ್ಷಗಳಿಗಿಂತ ಕಡಿಮೆಯಿರಬೇಕು.

l ಆರ್ಥಿಕ ಸಹಾಯ: ವರ್ಷಕ್ಕೆ ₹50 ಸಾವಿರದಂತೆ 4 ವರ್ಷ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

l ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-12-2022

l ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್ ಮೂಲಕ

l ಹೆಚ್ಚಿನ ಮಾಹಿತಿಗೆ: www.b4s.in/praja/KISF6

ಕೃಪೆ: buddy4study.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT