ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ವೇತನಕೈಪಿಡಿ: ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ

Last Updated 1 ಮೇ 2022, 23:30 IST
ಅಕ್ಷರ ಗಾತ್ರ

ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ

2022ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿ ಎಂಬಿಬಿಎಸ್‌ನಲ್ಲಿ ಸರ್ಕಾರಿ ಸೀಟು ಗಳಿಸಿದ ಕುರುಬ ಸಮಾಜದ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.

ಅರ್ಹತೆ: ದ್ವಿತೀಯ ಪಿಯುಸಿ ಹಾಗೂ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ಸರ್ಕಾರಿ ಸೀಟು ಗಳಿಸಿದ ಕರ್ನಾಟಕ ಮೂಲದ ಅಭ್ಯರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಹರು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 7, 2022

ಹೆಚ್ಚಿನ ಮಾಹಿತಿಗೆ: ಬೆಂಗಳೂರು ಡಯಾಬಿಟಿಸ್‌ ಸೆಂಟರ್‌, ಬಿಡಿಸಿ, ಎಚ್‌ಆರ್‌ಬಿಆರ್‌, ನಂ.426, 4ನೇ ಅಡ್ಡರಸ್ತೆ, ಎಚ್‌ಆರ್‌ಬಿಆರ್‌, ಕಲ್ಯಾಣನಗರ, ಬೆಂಗಳೂರು. ಮೊ: 9141137382.

ಅರ್ಜಿ ಭರ್ತಿ ಮಾಡಲು https://bit.ly/3vOdzr6 ಈ ಲಿಂಕ್ ನೋಡಿ

ಆಕ್ಸ್‌‌ಫರ್ಡ್ ಅಂಡ್ ಕೇಂಬ್ರಿಜ್ ಸೊಸೈಟಿ ಆಫ್ ಇಂಡಿಯಾ ಸ್ಕಾಲರ್‌ಶಿಪ್, ಯುಕೆ 2022

ವಿವರ: ಆಕ್ಸ್‌‌ಫರ್ಡ್ ಅಂಡ್ ಕೇಂಬ್ರಿಜ್ ಸೊಸೈಟಿ ಆಫ್ ಇಂಡಿಯಾ ಸ್ಕಾಲರ್‌ಶಿಪ್ (ಓಸಿಎಸ್ಐ), ಯುಕೆ 2022, ಆಕ್ಸ್‌ಫರ್ಡ್ ಮತ್ತು ಕೇಂಬ್ರಿಜ್ ಸೊಸೈಟಿ ಆಫ್ ಇಂಡಿಯಾ (ಓಸಿಎಸ್ಐ) ದಿಂದ ಯುಎಸ್ ಮತ್ತು ಯುಕೆಯಲ್ಲಿ ಪದವಿಪೂರ್ವ / ದ್ವಿತೀಯ ಪದವಿಪೂರ್ವ / ಪದವಿ ಮತ್ತು ಸಂಶೋಧನಾ ಅಧ್ಯಯನಗಳಿಗೆ ಅರ್ಜಿ ಸಲ್ಲಿಸುವ ಭಾರತೀಯ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿವೇತನವಾಗಿದೆ.

ಅರ್ಹತೆ: ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ ವರ್ಷದ ಸೆಪ್ಟೆಂಬರ್ 1ಕ್ಕೆ ಅನುಗುಣವಾಗಿ 30 ವರ್ಷ ವಯಸ್ಸಾಗಿರಬೇಕು. ಕೇಂಬ್ರಿಜ್ ವಿಶ್ವವಿದ್ಯಾಲಯ ಅಥವಾ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ನಿಯಾನುಸಾರ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ ಆಯ್ಕೆಯಾದ ವಿದ್ಯಾರ್ಥಿಗಳು ಈ ವಿದ್ಯಾರ್ಥವೇತನಕ್ಕೆ ಅರ್ಹರು.

ಆರ್ಥಿಕ ನೆರವು: ₹ 2 ಲಕ್ಷದವರೆಗೆ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 15, 2022

ಅರ್ಜಿ ಸಲ್ಲಿಕೆ ವಿಧಾನ: ಇಮೇಲ್ ಮೂಲಕ

ಹೆಚ್ಚಿನ ಮಾಹಿತಿಗೆ: www.b4s.in/praja/OCS7

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT