ಸೌತ್ ಏಷಿಯಾ ಪೋಸ್ಟ್ಗ್ರಾಜುಯೇಟ್ ಎಕ್ಸಲೆನ್ಸ್

ಯೂನಿವರ್ಸಿಟಿ ಆಫ್ ನಾಟಿಂಗ್ಹ್ಯಾಮ್ ನೀಡುವ ಅವಕಾಶ ಇದಾಗಿದೆ.

ಅರ್ಹತೆ: ಉನ್ನತಮಟ್ಟದ ಅಧ್ಯಯನ ಮಾಡಲು ಇಚ್ಛಿಸುವ ಸೌತ್ ಏಷಿಯಾದ ವಿದ್ಯಾರ್ಥಿಗಳಿಗೆ ಪೂರ್ಣಾವಧಿ ಸ್ನಾತಕೋತ್ತರ ಕೋರ್ಸ್ನ ಬೋಧನಾ ಶುಲ್ಕದ ಒಂದು ಅಂಶದಷ್ಟನ್ನು ಒದಗಿಸಲಿದೆ. ಭಾರತವೂ ಸೇರಿದಂತೆ ನಿರ್ದಿಷ್ಟ ಸೌತ್ ಏಷ್ಯಾ ದೇಶಗಳ ನಿವಾಸಿಗಳಿಗೆ ಲಭ್ಯವಿರುತ್ತದೆ. ಅಭ್ಯರ್ಥಿಗಳು ಸಾಗರೋತ್ತರ ವಿದ್ಯಾರ್ಥಿಗಳಾಗಿರಬೇಕು. ಅವರು 2025-26ರ ಶೈಕ್ಷಣಿಕ ಅವಧಿಯಲ್ಲಿ ಪೂರ್ಣಾವಧಿಯ ಸ್ನಾತಕೋತ್ತರ ಕೋರ್ಸ್ಗೆ ಸೇರುವ ಉದ್ದೇಶ ಇಟ್ಟುಕೊಂಡಿರಬೇಕು. ಆರ್ಥಿಕ ಸಹಾಯ: ಬೋಧನಾ ಶುಲ್ಕಗಳಿಗೆ £8,000 (ಅಂದಾಜು ₹8,51,016)ವರೆಗೆ.

ಅರ್ಜಿ ಸಲ್ಲಿಸಲು ಕೊನೆ ದಿನ:14-05-2025

ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್ನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ: Short Url: www.b4s.in/pjvi/SAPE1

ಆಲ್ಸ್ಟಮ್ ಇಂಡಿಯಾ ಸ್ಕಾಲರ್ಷಿಪ್

ಉನ್ನತ ಶಿಕ್ಷಣವನ್ನು ಮುಂದುವರಿಸಲು ಆಲ್ಸ್ಟಮ್ ಇಂಡಿಯಾ ನೀಡುವ ಅವಕಾಶ ಇದಾಗಿದೆ.

ಅರ್ಹತೆ: 2024–25ನೇ ಸಾಲಿನ ಐಟಿಐ/ಡಿಪ್ಲೊಮಾ, ಪದವಿ ಅಥವಾ ಸ್ಟೆಮ್ ಕೋರ್ಸ್ಗಳಲ್ಲಿ ವೃತ್ತಿಪರ ಪದವಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಗಳು ತಮ್ಮ ಹಿಂದಿನ ಶೈಕ್ಷಣಿಕ ವರ್ಷ/ಸೆಮಿಸ್ಟರ್ನಲ್ಲಿ ಕನಿಷ್ಠ ಶೇ 60ರಷ್ಟು ಅಂಕಗಳನ್ನು ಗಳಿಸಿರಬೇಕು.

ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದಲೂ ₹6,00,000ಕ್ಕಿಂತ ಕಡಿಮೆ ಅಥವಾ ಅದಕ್ಕೆ ಸಮನಾಗಿರಬೇಕು.

ಆರ್ಥಿಕ ಸಹಾಯ: ₹75,000ದವರೆಗೆ (ಒಂದು ಬಾರಿ)

ಅರ್ಜಿ ಸಲ್ಲಿಸಲು ಕೊನೆ ದಿನ: 04-05-2025

ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ: Short Url: www.b4s.in/pjvi/AISDG8

ಟೋಫಲ್ ಗ್ಲೋಬಲ್ ಸ್ಕಾಲರ್ಷಿಪ್

ವಿದೇಶದಲ್ಲಿ ಅಧ್ಯಯನ ನಡೆಸಲು ಇಚ್ಛಿಸುವ ಕಾಲೇಜು ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಸಹಾಯ ಮಾಡುವ ಉದ್ದೇಶವನ್ನು ಟೋಫಲ್ ಹೊಂದಿದೆ.

ಅರ್ಹತೆ: ಭಾರತದಾದ್ಯಂತ ವಾಸಿಸುವ, 3ನೇ ಮತ್ತು 4ನೇ ವರ್ಷದಲ್ಲಿ ಅಭ್ಯಾಸ ಮಾಡುತ್ತಿರುವ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು 2 ವರ್ಷಗಳವರೆಗಿನ ಕೆಲಸದ ಅನುಭವವಿರುವ ವೃತ್ತಿಪರರಿಗೆ ಲಭ್ಯವಿರುತ್ತದೆ.

ಆರ್ಥಿಕ ಸಹಾಯ: ₹1.3 ಲಕ್ಷದ ಒಟ್ಟು ಪ್ರಶಸ್ತಿ ಮೊತ್ತ ಮತ್ತು ಇತರ ಪ್ರಯೋಜನಗಳು.

ಅರ್ಜಿ ಸಲ್ಲಿಸಲು ಕೊನೆ ದಿನ:30-04-2025

ಹೆಚ್ಚಿನ ಮಾಹಿತಿಗೆ: Short Url: www.b4s.in/pjvi/TGSC1

ಎಸ್ಬಿಐಎಫ್ನ ಆಶಾ ಸ್ಕಾಲರ್ಷಿಪ್

ಎಸ್ಬಿಐ ಫೌಂಡೇಷನ್ನಡಿ ಬರುವ ಒಂದು ಉಪಕ್ರಮವಾಗಿದ್ದು, ಕಡಿಮೆ ಆದಾಯವಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ನೀಡುವ ಗುರಿ ಹೊಂದಿದೆ.

ಅರ್ಹತೆ: ವಿದೇಶದಲ್ಲಿ ವಿಶ್ವವಿದ್ಯಾಲಯ ಅಥವಾ ಕಾಲೇಜಿನಲ್ಲಿ ಸ್ನಾತಕೋತ್ತರ ಅಥವಾ ಅದಕ್ಕಿಂತ ಹೆಚ್ಚಿನ ಮಟ್ಟದ ಕೋರ್ಸ್ಗೆ ದಾಖಲಾಗಿರಬೇಕು. ಎಸ್ಸಿ ಮತ್ತು ಎಸ್ಟಿ ವರ್ಗದ ವಿದ್ಯಾರ್ಥಿಗಳಿಗೆ ಆದ್ಯತೆ. ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ ಶೇ 75ರಷ್ಟು ಅಂಕಗಳನ್ನು ಗಳಿಸಿರಬೇಕು. ಕುಟುಂಬದ ವಾರ್ಷಿಕ ಆದಾಯ ₹6,00,000 ಇರಬೇಕು.

ಆರ್ಥಿಕ ನೆರವು: ₹20,00,000ದವರೆಗೆ ಅಥವಾ ಕೋರ್ಸ್-ಸಂಬಂಧಿತ ಖರ್ಚುಗಳ ಶೇ 50ರಷ್ಟು (ಯಾವುದು ಕಡಿಮೆಯೋ ಅದು).

ಅರ್ಜಿ ಸಲ್ಲಿಸಲು ಕೊನೆ ದಿನ: 31-03-2025

ಹೆಚ್ಚಿನ ಮಾಹಿತಿಗೆ: Short Url:www.b4s.in/praja/SBIFS12

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.