ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕಾಲರ್‌ಶಿಪ್‌: ಎ‍ಐಸಿಟಿಇ ವರ್ಚುವಲ್ ಇಂಟರ್ನ್‌ಶಿಪ್ 2022

Last Updated 3 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಎ‍ಐಸಿಟಿಇ ವರ್ಚುವಲ್ ಇಂಟರ್ನ್‍ಶಿಪ್ 2022

ಎ‍ಐಸಿಟಿಇ ವರ್ಚುವಲ್ ಇಂಟರ್ನ್‌ಶಿಪ್ 2022, ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ (ಎ‍ಐಸಿಟಿಇ)ಯ ಉಪಕ್ರಮವಾಗಿದೆ. ಸಿಸ್ಕೊ ನೆಟ್‌ವರ್ಕಿಂಗ್ ಅಕಾಡೆಮಿ ಕಾರ್ಯಕ್ರಮದ ಮೂಲಕ ಸೈಬರ್‌ ಸುರಕ್ಷತೆ ಕುರಿತು 20,000 ಮಂದಿಗೆ ವರ್ಚುವಲ್ ಇಂಟರ್ನ್‌ಶಿಪ್‌ ಅವಕಾಶ ಕಲ್ಪಿಸುತ್ತಿದೆ.

ಅರ್ಹತೆ: ಬಿ.ಟೆಕ್ / ಬಿ.ಇ ಪದವಿ ಮತ್ತು ಯಾವುದೇ ಸಂಬಂಧಿತ ಕೌಶಲ ಮತ್ತು ಆಸಕ್ತಿಗಳೊಂದಿಗೆ ವಿಶೇಷತೆ ಹೊಂದಿರುವ ಅಭ್ಯರ್ಥಿಗಳಿಗೆ ಮುಕ್ತವಾಗಿದೆ. ಸಿಸ್ಕೊ ನೆಟ್‌ವರ್ಕಿಂಗ್ ಅಕಾಡೆಮಿಯಾಗಿರುವ ಯಾವುದೇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುವ 2ನೇ ಮತ್ತು 3ನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳೂ ಅರ್ಜಿ ಸಲ್ಲಿಸಬಹುದು.

ಆರ್ಥಿಕ ನೆರವು: ₹10,000 ಹಾಗೂ ವರ್ಚುವಲ್ ಪ್ರಮಾಣಪತ್ರ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 23, 2022

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಮೂಲಕ

ಹೆಚ್ಚಿನ ಮಾಹಿತಿಗೆ: www.b4s.in/praja/AEV7

***

ಎನ್‍ಎ‍ಎಸ್‍ಐ- ಯಂಗ್ ಸೈಂಟಿಸ್ಟ್ ಪ್ಲಾಟಿನಮ್ ಜುಬಿಲಿ ಅವಾರ್ಡ್ಸ್ 2022

ವಿವರ: ಎನ್‍ಎ‍ಎಸ್‍ಐ- ಯಂಗ್ ಸೈಂಟಿಸ್ಟ್ ಪ್ಲಾಟಿನಮ್ ಜುಬಿಲಿ ಅವಾರ್ಡ್ಸ್ 2022, 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಭಾರತೀಯ/ಸಾಗರೋತ್ತರ ಭಾರತದ ನಾಗರಿಕರಿಗೆ ನೀಡುವ ವಿದ್ಯಾರ್ಥಿವೇತನವಾಗಿದೆ.

ಅರ್ಹತೆ: ಭಾರತದಲ್ಲಿ ನಡೆಸಿದ ಸಂಶೋಧನೆಯ ಆಧಾರದ ಮೇಲೆ ಎನ್‍ಎ‍ಎಸ್‍ಐನಿಂದ ಗುರುತಿಸಲ್ಪಟ್ಟ ಎಸ್ ಅಂಡ್ ಟಿಯ ಯಾವುದೇ ಶಾಖೆಗಳಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡಿರುವ ಅಭ್ಯರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಹರು. ಏಪ್ರಿಲ್ 15, 2022ಕ್ಕೆ ಅನುಗುಣವಾಗುವಂತೆ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಏಪ್ರಿಲ್ 15, 2022

ಅರ್ಜಿ ಸಲ್ಲಿಕೆ ವಿಧಾನ: ಇ-ಮೇಲ್ ಮತ್ತು ಪೋಸ್ಟ್ ಮೂಲಕ. ವಿಳಾಸ: ಲಜಪತ್ ರಾಯ್ ರಸ್ತೆ, ಮುಮ್‍ಫರ್ಡ್‍ಗಂಜ್, ಪ್ರಯಾಗರಾಜ್, ಉತ್ತರ ಪ್ರದೇಶ- 211002 ಇ-ಮೇಲ್: nasi.allahabad1@gmail.com.

ಹೆಚ್ಚಿನ ಮಾಹಿತಿಗೆ: www.b4s.in/praja/NIY4

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT