ಸೋಮವಾರ, ಸೆಪ್ಟೆಂಬರ್ 26, 2022
21 °C

ವಿದ್ಯಾರ್ಥಿ ವೇತನ: ಲೆಗ್ರ್ಯಾಂಡ್ ಎಂಪಾರಿಂಗ್ ಸ್ಕಾಲರ್‌ಶಿಪ್ ಪ್ರೋಗ್ರಾಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶೀರ್ಷಿಕೆ: ಲೆಗ್ರ್ಯಾಂಡ್ ಎಂಪಾರಿಂಗ್ ಸ್ಕಾಲರ್‌ಶಿಪ್ ಪ್ರೋಗ್ರಾಂ 2022-23

ವಿವರ: ಭಾರತದಾದ್ಯಂತ ಬಿ.ಟೆಕ್/ ಬಿ.ಇ/ ಬಿ.ಆರ್ಕ್ ಸೇರಿದಂತೆ ವಿವಿಧ ಪದವಿ ಕೋರ್ಸ್‌ಗಳನ್ನು (ಬಿಬಿಎ / ಬಿ.ಕಾಂ/ ಬಿ.ಎಸ್ಸಿ- ಗಣಿತ ಮತ್ತು ವಿಜ್ಞಾನ) ಅಧ್ಯಯನ ಮಾಡಲಿಚ್ಛಿಸುವ ಪ್ರತಿಭಾನ್ವಿತ ವಿದ್ಯಾರ್ಥಿಳಿಗೆ ಆರ್ಥಿಕ ನೆರವು ನೀಡುವುದಕ್ಕಾಗಿ ಲೆಗ್ರಾಂಡ್ ಸಂಸ್ಥೆ ಈ ಸ್ಕಾಲರ್‌ಶಿಪ್ ಕಾರ್ಯಕ್ರಮ ರೂಪಿಸಿದೆ.

ಅರ್ಹತೆ: ‌

* ಈ ವಿದ್ಯಾರ್ಥಿವೇತನವು ದೇಶದಾದ್ಯಂತ ಬಾಲಕಿಯರಿಗೆ ಮುಕ್ತವಾಗಿದೆ.

* ಅರ್ಜಿದಾರರು ಭಾರತದಲ್ಲಿ ಬಿ.ಟೆಕ್./ ಬಿ.ಇ./ ಬಿ.ಆರ್ಕ್. ಇತರ ಪದವಿ ಕೋರ್ಸ್‌ಗಳಿಗೆ (ಬಿಬಿಎ / ಬಿ.ಕಾಮ್/ ಬಿ.ಎಸ್‌‌‌‍ಸಿ- ಗಣಿತ ಮತ್ತು ವಿಜ್ಞಾನ) ಅರ್ಜಿ ಸಲ್ಲಿಸಿರಬೇಕು.

* ಅರ್ಜಿದಾರರು 2021- 2022 ರಲ್ಲಿ  12 ನೇ ತರಗತಿ ತೇರ್ಗಡೆಯಾಗಿರಬೇಕು ಮತ್ತು ಅವರ 10 ಮತ್ತು 12 ನೇ ತರಗತಿಯಲ್ಲಿ ಶೇ 70 ಕ್ಕಿಂತ ಹೆಚ್ಚಿನ ಅಂಕ ಗಳಿಸಿರಬೇಕು. ಅಂಗವಿಕಲ ವಿದ್ಯಾರ್ಥಿನಿಯರು ಮತ್ತು ಲೈಂಗಿಕ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಅರ್ಜಿಗಳನ್ನೂ ಪರಿಗಣಿಸಲಾಗುತ್ತದೆ.

* ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ₹5 ಲಕ್ಷ ಮೀರಿರಬಾರದು.

ಆರ್ಥಿಕ ನೆರವು

* ಶೈಕ್ಷಣಿಕ ಕಾರ್ಯಕ್ಷಮತೆಯ ಆಧಾರದ ಮೇಲೆ ಕೋರ್ಸ್ ಪೂರ್ಣಗೊಳ್ಳುವವರೆಗೆ ವಿದ್ಯಾರ್ಥಿಗಳಿಗೆ ವರ್ಷಕ್ಕೆ ₹ 60 ಸಾವಿರದವರೆಗೆ ಅಥವಾ ಕೋರ್ಸ್‌ ಶುಲ್ಕದ ಶೇ 60 ರಷ್ಟನ್ನು ನೀಡಲಾಗುತ್ತದೆ.
* ವಿಶೇಷ ವರ್ಗದಲ್ಲಿರುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಕ್ಷಮತೆಯ ಆಧಾರದ ಮೇಲೆ ಕೋರ್ಸ್ ಪೂರ್ಣಗೊಳ್ಳುವವರೆಗೆ ವರ್ಷಕ್ಕೆ ₹1 ಲಕ್ಷದವರೆಗೆ ಅಥವಾ ಶುಲ್ಕದ ಶೇ 80ರಷ್ಟನ್ನು ನೀಡಲಾಗುತ್ತದೆ.
*ವಿಶೇಷ ವರ್ಗ: ಅಂಗವಿಕಲ ವಿದ್ಯಾರ್ಥಿಗಳು / ಲೈಂಗಿಕ ಅಲ್ಪಸಂಖ್ಯಾತ ವಿದ್ಯಾರ್ಥಿಗಳು / ಒಂಟಿ ಪೋಷಕರನ್ನು ಹೊಂದಿರುವ ವಿದ್ಯಾರ್ಥಿಗಳು / ಕೋವಿಡ್‌‌‌‌‌‌‌‌ನಿಂದಾಗಿ ತಮ್ಮ ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳು.

ಅರ್ಜಿ ಸಲ್ಲಿಕೆ ಕೊನೆ ದಿನ: 31–08–2022‌

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ: www.b4s.in/praja/LFL5

–––––

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು