ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿದ್ಯಾರ್ಥಿ ವೇತನ: ವಿದ್ಯಾರ್ಥಿನಿಯರಿಗೆ ರೋಲ್ಸ್-ರಾಯ್ಸ್ ಸ್ಕಾಲರ್‌ಷಿಪ್

Published 30 ಜುಲೈ 2023, 22:55 IST
Last Updated 30 ಜುಲೈ 2023, 22:55 IST
ಅಕ್ಷರ ಗಾತ್ರ

ಇನ್ಸ್‌ಪೈರ್‌ ಅವಾರ್ಡ್ಸ್ (ಎಂ ಎ ಎನ್ ಎ ಕೆ) ಮನಕ್ ಸ್ಕೀಮ್

6ನೇ ತರಗತಿಯಿಂದ 10ನೇ ತರಗತಿವರೆಗೆ ಓದುತ್ತಿರುವ ವಿದ್ಯಾರ್ಥಿಗಳನ್ನು ಬೆಂಬಲಿಸುವುದಕ್ಕಾಗಿ ರೂಪಿಸಿರುವ ಕೇಂದ್ರ ಸರ್ಕಾರದ ಯೋಜನೆ ಇನ್ಸ್‌ಪೈರ್ ಅವಾರ್ಡ್ಸ್ (ಎಂ ಎ ಎನ್ ಎ ಕೆ) ಮನಕ್ ಸ್ಕೀಮ್ 2023-24.

ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್‌‌‌ಟಿ), ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಈ ಕಾರ್ಯಕ್ರಮವನ್ನು ಜಾರಿಗೊಳಿಸಿದೆ.

ಅರ್ಹತೆ:  10 ರಿಂದ15 ವರ್ಷ ವಯಸ್ಸಿನ ಮತ್ತು 6 ರಿಂದ 10 ನೇ ತರಗತಿಯಲ್ಲಿ ಓದುತ್ತಿರುವ ಅಭ್ಯರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಆರ್ಥಿಕ ಸಹಾಯ: ₹10,000 (ಒಂದು ಬಾರಿ)
ಅರ್ಜಿ ಸಲ್ಲಿಸಲು ಕೊನೆ ದಿನ: 31/8/2023 
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌ 

ಹೆಚ್ಚಿನ ಮಾಹಿತಿಗೆ: www.b4s.in/praja/IAMS2

ಎಂಜಿನಿಯರಿಂಗ್ ವಿದ್ಯಾರ್ಥಿನಿಯರಿಗೆ ರೋಲ್ಸ್-ರಾಯ್ಸ್ ಉನ್ನತಿ ಸ್ಕಾಲರ್‌ಷಿಪ್

ಎಐಸಿಟಿಇ ಮಾನ್ಯತೆ ಪಡೆದ ಕಾಲೇಜುಗಳಲ್ಲಿ ಎಂಜಿನಿಯರಿಂಗ್ ಪದವಿ ಓದುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಆರ್ಥಿಕ ಬೆಂಬಲ ನೀಡುವುದಕ್ಕಾಗಿ ರೋಲ್ಸ್‌ ರಾಯ್ಸ್‌ ಇಂಡಿಯಾ ರೂಪಿಸಿರುವ ಸ್ಕಾಲರ್‌ಷಿಪ್‌ ಯೋಜನೆ ‘ರೋಲ್ಸ್- ರಾಯ್ಸ್ ಉನ್ನತಿ ಸ್ಕಾಲರ್‌ಶಿಪ್ ಫಾರ್ ವಿಮೆನ್ ಎಂಜಿನಿಯರಿಂಗ್ ಸ್ಟೂಡೆಂಟ್ಸ್‌’.
ಅರ್ಹತೆ: ಎಐಸಿಟಿಇ-ಮಾನ್ಯತೆ ಪಡೆದ ಶಿಕ್ಷಣ ಎಂಜಿನಿಯರಿಂಗ್ ಕಾಲೇಜುಗಳಲ್ಲಿ 1ನೇ/2ನೇ/3ನೇ ವರ್ಷದಲ್ಲಿ (ಏರೋಸ್ಪೇಸ್, ​​ಮೆರೈನ್, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ಸ್ ಇತ್ಯಾದಿ ಕ್ಷೇತ್ರಗಳಲ್ಲಿ) ಓದುತ್ತಿರುವ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು.
ಅರ್ಜಿದಾರರು ತಮ್ಮ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಶೇ 60ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರಬೇಕು.
ಕುಟುಂಬದ ವಾರ್ಷಿಕ ಆದಾಯವು ₹ 4 ಲಕ್ಷವನ್ನು ಮೀರಬಾರದು.
 ಅಂಗವಿಕಲರು, ಏಕ ಪೋಷಕರು (ಸಿಂಗಲ್‌ ಪೇರೆಂಟ್‌) ಮತ್ತು ಅನಾಥರಂಥ ವಿಶೇಷ ವರ್ಗಕ್ಕೆ ಆದ್ಯತೆ. 

ಈ ಹಿಂದೆ 2022 ರಲ್ಲಿ ಇದೇ ‘ರೋಲ್ಸ್- ರಾಯ್ಸ್’ ಸಂಸ್ಥೆಯ ಸ್ಕಾಲರ್‌ಷಿಪ್‌ ಪಡೆದಿರುವ ಮತ್ತು ಪ್ರಸ್ತುತ 4ನೇ ವರ್ಷದ ಎಂಜಿನಿಯರಿಂಗ್ ಪದವಿ ಓದುತ್ತಿರುವ ವಿದ್ಯಾರ್ಥಿನಿಯರೂ ಅರ್ಜಿ ಸಲ್ಲಿಸಬಹುದು.

ಆರ್ಥಿಕ ಸಹಾಯ: ₹35,000
ಅರ್ಜಿ ಸಲ್ಲಿಸಲು ಕೊನೆ ದಿನ:  31-08-2023
ಅರ್ಜಿ ಸಲ್ಲಿಸುವ ವಿಧಾನ:  ಆನ್‌ಲೈನ್‌ 

ಹೆಚ್ಚಿನ ಮಾಹಿತಿಗೆ: www.b4s.in/praja/UNS5

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT